ಕಲಬುರಗಿ ಜ 13: ಕರ್ನಾಟಕ ರಾಜ್ಯ ಸರಕಾರಿ ಎನ್‍ಪಿಎಸ್ ನೌಕರರ ಸಂಘವು ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಆಗ್ರಹಿಸಿ ಜನವರಿ 20 ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರತಿಭಟನೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆಗೆ ಒಳಪಡುವ ರಾಜ್ಯದ ಸುಮಾರು 1.20 ಲಕ್ಷ ಸರಕಾರಿ ನೌಕರರು ಮತ್ತು ಕಲಬುರಗಿ ಜಿಲ್ಲೆಯ 6 ಸಾವಿರ ನೌಕರರು ಭಾಗವಹಿಸುವರು ಎಂದು ಸಂಘದ ಜಿಲ್ಲಾಧ್ಯಕ್ಷ ಸೈಬಣ್ಣಾ ಮಹಾಂತಗೋಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
2006 ರ ನಂತರದಲ್ಲಿ ಸರಕಾರಿ ನೌಕರಿಗೆ ಸೇರಿದ ನೌಕರರಿಗೆ ಹೊಸಪಿಂಚಣಿ ವ್ಯವಸ್ಥೆ ಅಳವಡಿಸಲಾಗಿದೆ. ನೌಕರರ ನಿವೃತ್ತಿಯ ನಂತರ ಮತ್ತು ಸೇವೆ ಸಲ್ಲಿಸುವಾಗ ಅಕಾಲಿಕ ಮರಣಹೊಂದಿದರೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಯಾವುದೇ ಹೆಚ್ಚಿನ ಸೌಲಭ್ಯ ದೊರಕುವದಿಲ್ಲ. ಈ ಯೋಜನೆಯನ್ನು ರದ್ದುಗೊಳಿಸುವ ಅಥವಾ ಮುಂದುವರೆಸುವ ಅಧಿಕಾರವನ್ನು ಕೇಂದ್ರವು ರಾಜ್ಯ ಸರಕಾರಗಳಿಗೆ ನೀಡಿದ್ದು ಕೂಡಲೇ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಲು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬುಜಾ ಎಂಡಿ, ದೀಪಕ ಗಣಾಚಾರಿ, ರೇಣುಕಾ ಆಲಗೂರ,ಅಶೋಕ ಸೊನ್ನ ,ಬಸವರಾಜ ಸೇರಿದಂತೆ ಹಲವರಿದ್ದರು

Leave a Comment