14 ವರ್ಷದೊಳಗಿನ ಬಾಲಕರನ್ನು ದುಡಿಸಿಕೊಂಡರೆ ಶಿಕ್ಷಾರ್ಹ ಅಪರಾಧ

ಮೈಸೂರು. ಜೂ.29: 14 ವರ್ಷದೊಳಗಿನ ಬಾಲಕರನ್ನು ಯಾವುದೇ ಕಾರಣಕ್ಕೂ ದುಡಿಸಿಕೊಳ್ಳಬಾರದು. ದುಡಿಸಿಕೊಂಡರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿಗೋಡಿ ತಿಳಿಸಿದರು.
ಅವರಿಂದು ಇನ್ಸಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಬಾಲಕಾರ್ಮಿಕ ವಿರೋಧಿ ದಿನಾಚರಣೆ ಯಾಕೆ ಮಾಡಬೇಕೆಂಬ ಜಿಜ್ಞಾಸೆ ಉಂಟಾಯಿತು. ಹಲವಾರು ರಂಗಗಳಲ್ಲಿ ಅಂದರೆ ಕಾರ್ಖಾನೆ, ಉದ್ದಿಮೆ, ಸಣ್ಣಪುಟ್ಟ ಉತ್ಪಾದನೆ ಇರಬಹುದು. ಈ ವ್ಯವಸ್ಥೆಯಲ್ಲಿ ಕಡಿಮೆ ಕೂಲಿಯಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿ ಅವರಿಂದ ಕೆಲಸ ತೆಗೆದು ಅವರ ಬಾಲ್ಯಾವಸ್ಥೆಯ ಜೀವನ ಹಾಳು ಮಾಡುತ್ತಿದ್ದರು. ಎಲ್ಲೆಡೆ ಈ ಅನಿಷ್ಟ ಪದ್ಧತಿ ಕಂಡು ಬಂದಿದ್ದು, ಬಾಲಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಬಾಲಕರನ್ನು ಯಾವುದೇ ಕಾರಣಕ್ಕೂ ದುಡಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಬಾಲಕರನ್ನು ಶಾಲೆಗೆ ಕಳಿಸದೇ ಯಾಕೆ ದುಡಿಸಿಕೊಳ್ಳಲಾಗುತ್ತಿದೆ ಎಂಬ ಪ್ರಶ್ನೆ ಹುಟ್ಟತ್ತೆ. ಅದಕ್ಕೆ ಮೂಲ ಕಾರಣ ಬಡತನ. ಈ ಬಡತನದಿಂದ ಹೆಚ್ಚು ಸಂಪಾದನೆಯ ಉದ್ದೇಶದಿಂದ ಬಾಲರನ್ನು ಶಾಲೆಗೆ ಕಳಿಸದೆ ಬೀಡಿಕಟ್ಟುವುದು, ಹೋಟೆಲ್, ಕಾರ್ಖಾನೆ, ಗ್ಯಾರೇಜ್ ಗೆ ಕಳಿಸಿ ಕೆಲಸ ತೆಗೆದು ದುಡಿಮೆಗಾರರಾಗಿ ಮಾಡುತ್ತಿದ್ದಾರೆ. ಇದು ಅಪರಾಧ. ಅವರಿಗೆ ಅವರದ್ದೇ ಆದ ಹಕ್ಕುಗಳಿವೆ. ನಾಗರಿಕರಾಗಿ ಬಾಳಲು, ಒಳ್ಳೆಯ ಶಿಕ್ಷಣ ಸಂಸ್ಕೃತಿ ಕಲಿಸಲುಕಾರ್ಮಿಕರಾಗಿ ದುಡಿಸಿಕೊಳ್ಳಬಾರದು, ಕೆಲಸಕ್ಕೆ ಹಚ್ಚಬಾರದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಇತ್ತ ಗಮನ ಹರಿಸಬೇಕು. ಕಾರ್ಮಿಕ ಇಲಾಖೆಯವರೊಂದೇ ಎಲ್ಲ ಕಡೆ ಅಡ್ಡಾಡಿ ನೋಡಿಕೊಳ್ಳಲಾಗದು ಅದಕ್ಕಾಗಿ ಸರ್ಕಾರಿ ಅಧಿಕಾರಿಗಳಿರಲಿ, ಸಾರ್ವಜನಿಕರಿರಲಿ ಸ್ಪಂದಿಸಬೇಕು. ಕೈಲಾಸ್ ಸತ್ಯಾರ್ಥಿ ಬೇರೆ ಬೇರೆ ರಾಜ್ಯಗಳಲ್ಲಿ ತಿರುಗಾಡಿ ಬಾಲ ಕಾರ್ಮಿಕರನ್ನು ರಕ್ಷಿಸಿದರು. ಅವರಿಗೆ ಬಾಲಕಾರ್ಮಿಕರ ರಕ್ಷಣೆಗೆ ಮಕ್ಕಳ ಹಕ್ಕುಗಳಿಗಾಗಿ ಹೋರಾಡಿದ್ದಕ್ಕೆ ನೋಬೆಲ್ ಪ್ರಶಸ್ತಿ ಲಭಿಸಿತು. ಇನ್ನೂ ಈ ಅನಿಷ್ಟ ಪದ್ಧತಿ ಹೋಗಿಲ್ಲ. ಸಾರ್ವಜನಿಕರು ನಿಮಗೂ ಎಲ್ಲಿಯಾದರೂ 14ವರ್ಷದೊಳಗಿನ ಬಾಲಕಾರ್ಮಿಕರು ಕಾನಸಿಕ್ಕರೆ ನಿಮ್ಮ ಮೊಬೈಲ್ ನಲ್ಲಿ ಪೋಟೋ ತೆಗೆದು ಅದನ್ನು ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆಗೆ ಪಾರ್ವರ್ಡ್ ಮಾಡಿದರೆ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಬಾರದು. ವ್ಯಾಜ್ಯ ಹೂಡಿ ನ್ಯಾಯುತವಾದ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಪ್ರಾಧಿಕಾರದಂದ ಉಚಿತ ಕಾನೂನು ಸಲಹೆ, ಉಚಿತವಾಗಿಯೇ ನ್ಯಾಯ ದೊರಕಿಸಲು ಸಹಾಯ ಮಾಡುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ ಎಲ್ಲ ಮಕ್ಕಳಿಗೂ ಸೌಲಭ್ಯ ಸಿಗಬೇಕು. ವಿದ್ಯಾಭ್ಯಾಸದ ಬುನಾದಿಯಾದ ಪ್ರಾಥಮಿಕ, ಪ್ರೌಢ ಶಿಕ್ಷಣ ಸಿಗಬೇಕು. ಸರ್ಕಾರ ಕಾಯಿದೆ ಮಾಡಿದರೂ ಕೂಡ ಪೋಷಕರಿಂದ ಸಮಾಜದಿಂದ ಬದಲಾವಣೆಯಾಗಬೇಕು. ಮಕ್ಕಳು ಓದಬೇಕು. ಅವರಿಗೂ ಒಳ್ಳೆಯ ಕೆಲಸ ಸಿಗಬೇಕು. ಭವಿಷ್ಯ ಒಳ್ಳೆಯದಿರಬೇಕೆಂದು ನೋಡಬೇಕು. ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಎಲ್ಲೇ ಜೀತಪದ್ಧತಿ ಇರಲಿ, ಜೀತಪದ್ಧತಿ ವಿರುದ್ಧ ಹೋರಾಟ ನಡೆಯತ್ತೆ. ಕಾರ್ಮಿಕರೇ ಬಂದು ಹೇಳುತ್ತಾರೆ. ನನಗೆ ತುಂಬಾ ಹಿಂಸೆ ಕೊಡುತ್ತಾರೆ ಎಂದು ಹೇಳುತ್ತಾರೆ. ಎ,ಸಿ, ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಅವರನ್ನು ಬಿಟ್ಟು 20ಸಾವಿರ ರೂ.ಕೊಟ್ಟು ಕಳಿಸುತ್ತಿದ್ವಿ, ಬಾಲಕಾರ್ಮಿಕರ ವಿಚಾರ ಬಂದಾಗ ಮಾತ್ರ ಎಲ್ಲಿಯೂ ಸ್ಪಂದನೆ ಸಿಗಲಿಲ್ಲ. ದೂರೂ ಬರಲಿಲ್ಲ. ಮಕ್ಕಳಿಗೆ ತಮಗೆ ಮೋಸ ಆಗುತ್ತಿದೆ ಎಂದು ತಿಳಿಯುತ್ತಿಲ್ಲ. ಅವರು ಖುಷಿಯಿಂದ ಹೋಗುತ್ತಾರೆ. ಕಾರ್ಮಿಕ ಇಲಾಖೆ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ಹಿರಿಯ ವಕೀಲ ಸುಂದರ್ ರಾಜ್, ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ.ತಮ್ಮಣ್ಣ, ವಕೀಲರ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಉಪಸ್ಥಿತರಿದ್ದರು.
ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Leave a Comment