ಕಲಬುರಗಿ- ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸಗೊಂಡು ಇಂದಿಗೆ 25 ವರ್ಷ, ಈ ದಿನವನ್ನು ಕಪ್ಪುದಿನ, ನ್ಯಾಯಾಂಗದ ಕಗ್ಗೊಲೆಯ ದಿನವನ್ನಾಗಿ ಆಚರಿಸಿದ ಸಂಘಟನೆಗಳು ಧ್ವಂಸಕ್ಕೆ ಕಾರಣಿಕರ್ತರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು. ಇಂಡಿಯನ್ ಯೂನಿಯನ್ ಮುಸ್ಲೀಮ ಲೀಗ್, (ಎಸ್.ಡಿ.ಪಿ) ಸೋಶಿಯಲ್ ಡೇಮಾಕ್ರಿಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಮುಸ್ಲೀಂ ಪಟೇಲ ಮಂಚ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಗುಲಬರ್ಗಾ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಮೌಲಾನಾ ಅತಿಕ ಉರ್ ರಹಮಾನ್, ನ್ಯಾಯವಾದಿ ವಾಹಜಬಾಬ, ಸೈಯದ ಮಜರ ಹುಸೇನ್ ಇತರರು ಇದ್ದರು. ಸಂಜೆವಾಣಿ ಚಿತ್ರ.

Leave a Comment