1200 ನೌಕರರಿಂದ ಸ್ವಯಂ ಪ್ರೇರಿತ ರಕ್ತದಾನ

ಮೈಸೂರು. 20- ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಕಾರ್ಮಿಕರ ರಕ್ತ ಎಂಬ ಕಾರ್ಯಕ್ರಮದಲ್ಲಿ ಕೆಆರ್ ಎಸ್ ರಸ್ತೆಯಲ್ಲಿರುವ ಜೆ ಕೆ ಇಂಡಸ್ಟ್ರಿಯಲ್ ನಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 1200 ನೌಕರರು ಸ್ವಯಂ ಪ್ರೇರಿತವಾಗಿ ಪ್ರತಿ ವರ್ಷ ಜೀವಧಾರ ರಕ್ತನಿಧಿ ಕೇಂದ್ರದ ಮುಖಾಂತರ ಸತತ 5ವರ್ಷದಿಂದ ರಕ್ತದಾನದಲ್ಲಿ ಪಾಲ್ಗೊಂಡು ವಿಶೇಷವಾಗಿ ಮಾನವೀಯತೆ ಗುಣ ಬೆಳೆಸಿದ್ದಾರೆ ,ಅವರ ಜೊತೆ ಈ ರಕ್ತದಾನ ಶಿಬಿರದಲ್ಲಿ ಜೀವರಕ್ಷ ರಕ್ತ ನಿಧಿ ಕೇಂದ್ರ ,ಸ್ವಾಮಿ ವಿವೇಕಾನಂದ ರಕ್ತ ನಿಧಿ ಕೇಂದ್ರ ,ಲಯನ್ಸ್ ರಕ್ತನಿಧಿ ಕೇಂದ್ರ , ಸಂಘ ಸಂಸ್ಥೆಗಳು ಸಾಥ್ ನೀಡುತ್ತಿದ್ದಾರೆ .
ಈ ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಜೀವಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥರು ಹಾಗೂ ಬಿಜೆಪಿ ನಗರಾಧ್ಯಕ್ಷರಾದ ಡಾ ಮಂಜುನಾಥ್ ಮಾತನಾಡಿ ಜೆ ಕೆ ಇಂಡಸ್ಟ್ರಿಯ ಕಾರ್ಮಿಕರು ರಕ್ತದಾನದಲ್ಲಿ ಪಾಲ್ಗೊಂಡು ಸ್ವಯಂ ಪ್ರೇರಿತವಾಗಿ ನೀಡುತ್ತಿರುವುದು ಶ್ಲಾಘನೀಯ
ರಕ್ತದಾನದಲ್ಲಿ ಇತರೆ ಕಾರ್ಖಾನೆಗಳು ರಕ್ತದಾನದಲ್ಲಿ ಮುಂದಾಗಬೇಕೆಂದು ಕರೆ ನೀಡಿ.
@12bc = ರಕ್ತದಾನದಿಂದ ಆರೋಗ್ಯ ವೃದ್ಧಿ
ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದಾಗ ರಕ್ತದ ಬೇಡಿಕೆಯನ್ನು ನಿವಾರಣೆ ಮಾಡಲು ಸಹಕಾರಿಯಾಗುತ್ತದೆ’ ಪ್ರತಿ ‘ಜಿಲ್ಲೆಗೆ ವಾರ್ಷಿಕ 16,000 ಯೂನಿಟ್ ರಕ್ತದ ಅವಶ್ಯಕತೆಯಿದ್ದು, ರಕ್ತದ ಸಂಗ್ರಹ ಕಡಿಮೆಯಿದೆ’ ಎಂದರು.
‘ಜನಸಂಖ್ಯೆಯ ಶೇ.1ರಷ್ಟು ಅಂದರೆ ವಾರ್ಷಿಕ 16,000 ಯೂನಿಟ್ ರಕ್ತ ಬೇಕಾಗುತ್ತದೆ. ಪ್ರಸ್ತುತ ಇದಕ್ಕಿಂತ ಸ್ವಲ್ಪ ಕಡಿಮೆ ರಕ್ತ ಸಾಕು. ಅದಕ್ಕೂ ಕೊರತೆ ಇದೆ. ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯಾವುದೇ ರೀತಿಯ ತೊಂದರೆಯಾಗುವುದಿಲ್ಲ’ ಎಂದು ಹೇಳಿದರು.
ಜೀವಧಾರ ಮುಖ್ಯಸ್ಥ ಗಿರೀಶ್ ಮಾತನಾಡಿ ‘ಹದಿನೆಂಟು ವರ್ಷ ಮೇಲ್ಪಟ್ಟ ಆರೋಗ್ಯವಂತರು ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡಿದರೆ ರಕ್ತದ ಕೊರತೆ ನೀಗಿಸಬಹುದು. ಪ್ರಮುಖವಾಗಿ ಪಾಸಿಟಿವ್ ರಕ್ತದ ಗುಂಪುಗಳ ಅಭಾವ ಉಂಟಾಗುತ್ತಿದೆ. ಇಂತಹ ರಕ್ತದ ಗುಂಪುಗಳುಳ್ಳವರು ರಕ್ತನಿಧಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಂಡರೆ ಅವಶ್ಯವಿದ್ದಾಗ ರಕ್ತವನ್ನು ಪಡೆಯಲು ನೆರವಾಗುತ್ತದೆ’ ಎಂದು ತಿಳಿಸಿದರು.
ರಕ್ತದಾನ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಯುವಕರು ಹೊರ ಬರಬೇಕು’ ಎಂದು ಮನವಿ ಮಾಡಿದರು. ಹಾಗೆಯೇ
‘ರಕ್ತದಾನಕ್ಕೆ ಭಯಪಡಬೇಕಿಲ್ಲ. ರಕ್ತದಾನದಾನಕ್ಕೆ ಕಾರ್ಮಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಮುಂದೆ ಬರಬೇಕು, ರಕ್ತದಾನದ ಮಹತ್ವ ಅರಿತವರು ಮುಂದೆ ಬರುತ್ತಾರೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಜೆ ಕೆ ಇಂಡಸ್ಟ್ರಿಯ ವಿಕ್ರಂ ಹೆಬ್ಬಾರ್ ಮಾತನಾಡಿ, ‘ರಕ್ತ ದಾನ ಮಾಡುವವರನ್ನು ಪ್ರೋತ್ಸಾಹಿಸುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಮುಂದಾಗಬೇಕು’ ಎಂದು ಕೋರಿದರು.
‘ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ಪ್ರಮಾಣ ಹೆಚ್ಚಿದೆ. ದೇಶದಲ್ಲಿ ಶೇ. 70ರಷ್ಟು ಮಹಿಳೆಯರ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶದ ಕೊರತೆಯಿದೆ. ಗರ್ಭಿಣಿಯರು ಹೆರಿಗೆ ಸಂದರ್ಭದಲ್ಲಿ ರಕ್ತಹೀನತೆಯ ಕೊರತೆ ಅನುಭವಿಸುವುದರಿಂದ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.
16 ಕಾರ್ಮಿಕರು 30ನೇ ಸಲ ರಕ್ತದಾನ ಮಾಡಿ ವಿಶೇಷ ಕಾಳಜಿ ವಹಿಸಿದ್ದರು ಈ ರಕ್ತದಾನ ಶಿಬಿರದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಮುಖ್ಯಸ್ಥರು ಹಾಗೂ ಬಿಜೆಪಿ ನಗರಾಧ್ಯಕ್ಷರಾದ ಡಾ ಮಂಜುನಾಥ್ ,ಜೀವಾಧಾರ ರಕ್ತದಾನದ ಮುಖ್ಯಸ್ಥರಾದ ಗಿರೀಶ್ .ಮುತ್ತನ,ಮಧು ,ಜೆ ಕೆ ಇಂಡಸ್ಟ್ರಿಯ ವಿಕ್ರಂ ಹೆಬ್ಬಾರ್ ,ಈಶ್ವರ್ ರಾವ್, ಅನಿಲ್ ಕೆ ಶರ್ಮಾ, ಪ್ರಮೋದ್ ಬಿ ಪಾಟೀಲ್, ರಾಜೀವ್ ಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು

Leave a Comment