12 ವರ್ಷಗಳ ಬಳಿಕ ದಿನೇಶ್‌ ಕಾರ್ತಿಕ್ ಕನಸು ನನಸು

ಕೊಲ್ಕತಾ, ಏ 16 – ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್ ಅವರು, ಐಸಿಸಿ ವಿಶ್ವಕಪ್ 15 ಆಟಗಾರರ ಭಾರತ ತಂಡದಲ್ಲಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿ, ನಾ ಕಂಡಿದ್ದ ಕನಸು ನನಸಾಗಿದೆ ಎಂದು ಹೇಳಿದರು.

“ಐಸಿಸಿ ವಿಶ್ವಕಪ್ ತಂಡದ ಒಂದು ಭಾಗವಾಗುವುದು ನನ್ನ ಹಲವು ವರ್ಷಗಳ ಕನಸ್ಸಾಗಿತ್ತು. ಅದು ಇದೀಗ ನನಗಾಗಿರುವುದಿಂದ ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿರುವುದು ಕೊಲ್ಕತಾ ನೈಟ್ ರೈಡರ್ಸ್ ತಂಡದ ಅಧಿಕೃತ ವೆಬ್ ಸೈಟ್‌ನಲ್ಲಿ ಪ್ರಕಟವಾಗಿದೆ.

ಸುದೀರ್ಘ 12 ವರ್ಷಗಳ ಬಳಿಕ ದಿನೇಶ್ ಕಾರ್ತಿಕ್ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರ ಜತೆ ಮೀಸಲು ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಅವರಿಗೆ ಆಯ್ಕೆ ಮಾಡುವ ವಾತಾವರಣ ದಟ್ಟವಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಚೆನೈ ಆಟಗಾರನಿಗೆ ಎರಡನೇ ವಿಕೆಟ್ ಕೀಪರ್ ಆಗಿ ಪರಿಗಣಿಸಲಾಗಿದೆ.

ದಿನೇಶ್ ಕಾರ್ತಿಕ್ ಅವರ ಅನುಭವ ಹಾಗೂ ಐಪಿಎಲ್‌ನಲ್ಲಿ ವಿಕೆಟ್ ಕೀಪರ್ ಹಾಗೂ ಬ್ಯಾಟಿಂಗ್ ಪರಿಗಣಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಸ್ಪಷ್ಟಪಡಿಸಿದ್ದರು.

ಇಂಗ್ಲೆಂಡ್‌ನಲ್ಲಿ ಮೇ. 30 ರಿಂದ ಐಸಿಸಿ ವಿಶ್ವಕಪ್ ಆರಂಭಗೊಂಡು ಜುಲೈನಲ್ಲಿ ಅಂತ್ಯವಾಗಲಿದೆ. ಭಾರತ ಜೂ.5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ. 33 ವರ್ಷ ದಿನೇಶ್ ಕಾರ್ತಿಕ್ ಅವರು ಒಟ್ಟು 91 ಏಕದಿನ ಪಂದ್ಯಗಳಲ್ಲಿ 1,738 ರನ್ ದಾಖಲಿಸಿದ್ದಾರೆ. 2004ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

 

Leave a Comment