11.5 ಕೋಟಿಗೆ ಉನಡ್ಕಟ್ ಖರೀದಿಸಿದ ರಾಯಲ್ಸ್‌

ಬೆಂಗಳೂರು, ಜ. ೨೮- ತೀವ್ರ ಕುತೂಹಲ ಕೆರಳಿಸಿರುವ 11ನೇ ಆವೃತ್ತಿಯ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ ಎರಡನೇ ದಿನವಾದ ಇಂದು ಮಧ್ಯಮ ವೇಗದ ಬೌಲರ್ ಜಯದೇವ್, ಉನಡ್ಕಟ್ 11.5 ಕೋಟಿ ರೂಪಾಯಿಗೆ ರಾಜಸ್ತಾನ ರಾಯಲ್ಸ್ ತಂಡ ಖರೀದಿಸಿದೆ. ಕರ್ನಾಟಕದ ರಣಜಿ ಆಟಗಾರ ಕೆ. ಕೃಷ್ಣಪ್ಪ 6.2 ಕೋಟಿ ರೂಪಾಯಿಗೆ ರಾಜಸ್ತಾನ ರಾಯಲ್ಸ್ ಬಿಕರಿಯಾಗಿದ್ದಾರೆ. ಕೆ. ರಾಹುಲ್, ಮನಿಷ್ ಪಾಂಡೆಯ ನಂತರ ಕರ್ನಾಟಕದ ಮತ್ತೊಬ್ಬ ಆಟಗಾರ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಮೊದಲ ದಿನದಲ್ಲಿ 78 ಪ್ರಮುಖ ಆಟಗಾರರು ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇಂದು ಮನೋಜ್ ತಿವಾರಿ, ಪಂಜಾಬ್ ಕಿಂಗ್ಸ್ ಇಲೆವೆನ್ ತಂಡಕ್ಕೆ ಒಂದು ಕೋಟಿ ರೂಪಾಯಿಗೆ ಖರೀದಿಸಿದೆ. ಆರ್‌ಸಿಬಿ 1.4 ಕೋಟಿ ರೂ.ಗೆ ಮಂದೀಪ್ ಸಿಂಗ್ ಬಿಕರಿಯಾಗಿದ್ದಾರೆ.

ಸೌರಬ್ ತಿವಾರಿ ಕೇವಲ 80 ಲಕ್ಷ ರೂಪಾಯಿಗೆ ಹಾಗೂ ಇವಿನ್ ಲೂಯಿಸ್ 3.8 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದೆ.

ಅದೇ ರೀತಿ ಮುರುಗನ್ ಅಶ್ವಿನ್ 2.2 ಕೋಟಿ ರೂ.ಗೆ ಆರ್‌ಸಿಬಿ ಹರಾಜಿನಲ್ಲಿ ಖರೀದಿಸಿದೆ. ಶಾಬಾಜ್ ನದೀಮ್ 3.2 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾರಾದರೆ, ರಾಹುಲ್ ಚಹರ್ 1.9 ಕೋಟಿಗೆ ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಪವನ್ ನೆಹಿ ಮೌಲ್ಯ ಗಣನೀಯವಾಗಿ ಕುಸಿದಿದ್ದು, ಮುಂಬೈ ಇಂಡಿಯನ್ಸ್‌ಗೆ ಕೇವಲ ಒಂದು ಕೋಟಿ ರೂಪಾಯಿಗೆ ಮಾರಾಟವಾದರೆ, ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಕ್ರಿಶ್ಚಿಯನ್ 1.5 ಕೋಟಿ ಡೆಲ್ಲಿ ಡೇರ್ ಡೆವಿಲ್ಸ್, ವಾಷಿಂಗ್ಟನ್ ಸುಂದರ್ 3.2 ಕೋಟಿ ರೂ. ಗೆ ರಾಜಸ್ತಾನ್ ರಾಯಲ್ಸ್ ಖರೀದಿಸಿದೆ.

ಆದರೆ ಕಾಲಿನ್ ಇನ್‌ಗ್ರಾಂ, ಲೆಂಡ್ಲ್, ಸೈಮನ್ಸ್, ಶಾನ್ ಮಾರ್ಷ್, ಅಲೆಕ್ಸ್ ಹೇಲ್ಸ್, ಇಕ್ಬಾಲ್ ಅಬ್ದುಲ್ಲಾ, ಶಿವಿಲ್ ಕೌಶಿಕ್, ಸಾಯಿ ಕೃಷ್ಣ ಮತ್ತು ತೇಜಸ್ ಬರೊಕಾ ಯಾವುದೇ ತಂಡಕ್ಕೆ ಮಾರಾಟವಾಗಿಲ್ಲ.

Leave a Comment