102ನೇ ಇಂದಿರಾಗಾಂಧಿ ಜಯಂತಿ ಆಚರಣೆ

ಧಾರವಾಡ,ನ 19- ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಗಳಾದ  ಇಂದಿರಾಗಾಂಧಿಯವರು ಅನೇಕ ಜನಪ್ರೀಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡತನ ನಿರ್ಮೂಲನೆಗಾಗಿ, ಆಹಾರ ಭದ್ರತೆಗಾಗಿ ರೋಟಿ, ಕಪಡಾ, ಔರ್ ಮಕಾನ, ಘರೀಭಿ ಹಟಾವೋ ನಂತಹ ಐತಿಹಾಸಿಕ ಯೋಜನೆಗಳನ್ನು ರೂಪಿಸಿದರು. ಅಲ್ಲದೆ ದೇಶದ ಸಮಗ್ರ ಅಭಿವೃದ್ಧಿಗೆ 20 ಅಂಶದ ಕಾರ್ಯಕ್ರಮಗಳನ್ನು ರೂಪಿಸಿದರು ಎಂದು ಕೆಪಿಸಿಸಿ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ದಿ. ಇಂದಿರಾಗಾಂಧಿಯವರ 102ನೇ ಜಯಂತಿಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಬಡ ಮಹಿಳೆಯರಿಗೆ ಸುಮಾರು  ನೂರಕ್ಕೂ ಅಧಿಕ ಸೀರೆಗಳನ್ನು ಉಚಿತವಾಗಿ ವಿತರಿಸಿದರು ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ,ಪೆಣ್ಣುಗಳನ್ನು,ಹಾಗೂ ಇಂದಿರಾಜಿಯವರ ಭಾವಚಿತ್ರ ವಿರುವ ಕ್ಯಾಲೆಂಡರ್ ಹಂಚಿ ಮಾತನಾಡಿದ ಅವರು, ದೇಶದಲ್ಲಿನ ಬ್ಯಾಂಕ‌ಗಳನ್ನು ರಾಷ್ಟೀಕರಣ ಮಾಡಿ ಕೆಲವೇ ಜನರಿಗೆ ಸೀಮಿತವಾಗಿದ್ದ ಬ್ಯಾಂಕ್ ಗಳನ್ನು ದೇಶದ ಜನಸಾಮಾನ್ಯರು ಬಳಸುವುದು ಅಲ್ಲದೇ ಬ್ಯಾಂಕ್ ಗಳಲ್ಲಿ ಎಲ್ಕ ವರ್ಗಗಳಿಗೂ ಉದ್ಯೋಗ ದೊರೆಯುವ ಹಾಗೆ ಮಾಡಿದರು.
ಇನ್ನೊಂದು ಐತಿಹಾಸಿಕ ಯೋಜನೆ ಊಳುವವನೆ ಒಡೆಯ. ಕಾನೂನನ್ನು ಜಾರಿಗೆ ತರುವ ಮೂಲಕ ದೇಶದ ಅಷ್ಟೂ ಜಮೀನು ಹೊಂದಿದ್ದ ಕೆಲವೇ ಕೆಲವು ಶ್ರೀಮಂತರು, ಬಂಡವಾಳಶಾಹಿಗಳು, ಜಮೀನುದಾರರಿಂದ ಜಮೀನನ್ನು ಪಡೆದು ದೇಶದ ಎಲ್ಲ ಬಡವರಿಗೆ ಉಚಿತವಾಗಿ ಹಂಚಿದ ಕೀರ್ತಿ  ದಿ. ಇಂದಿರಾಗಾಂಧಿಯವರಿಗೆ ಸಲ್ಲುತ್ತದೆ ಎಂದರು.
ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಬೆಳೆಯನ್ನು ಬೆಳೆಯಲು ಭೂಮಿಯನ್ನು ಕೊಟ್ಟು ಅನ್ನದಾತೆಯಾದ ಇಂದಿರಾಜಿಯವರು. ಹಾಗಾಗಿ ಈ ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷವನ್ನು ಜನತೆ ಎಂದೂ ಮರೆಯುವದಿಲ್ಲ ,ಇವತ್ತು ಕಾಂಗ್ರೆಸ್ 60 ವರ್ಷಗಳಿಂದ ಏನು ಮಾಡಿದೆ ಎಂದು ಬಾಯಿ ಬಡೆದುಕೊಳ್ಳುವ ಭಕ್ತರೇ ಇವತ್ತು ದೇಶದ ಸಾರ್ವಜನಿಕ ಸ್ವತ್ತನ್ನು ಪ್ರಧಾನಿ ಮೋದಿಯವರು ಖಾಸಗಿಯವರಿಗೆ ಮಾರುತ್ತಿದ್ದಾರಲ್ಲ ಅವೆಲ್ಲ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಕೊಟ್ಟ ಕೊಡುಗೆಗಳು ಎನ್ನುವದನ್ನು ಅರಿತುಕೊಳ್ಳಿ ಎಂದು ಮಲಕಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯ ಸುಭಾಷ ಶಿಂಧೆ, ಜಿಲ್ಲಾ ಒಬಿಸಿ ಅಧ್ಯಕ್ಷರಾದ ಹೇಮಂತ ಗುರ್ಲಹೊಸೂರ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತವ್ವ ಗುಜ್ಜಳ ,ಮುಖಂಡರು ವಸಂತ ಅರ್ಕಾಚಾರಿ,ಸುನಿಲ್ ಹೊಂಗಲ್,ಪ್ರಕಾಶ ಹಳ್ಯಾಳ್,ಪ್ರಭಾವತಿ ಒಡ್ಡಿನ,ಭೀಮಣ್ಣ ಹೊನಕೇರಿ,ಪರಶುರಾಮ ಚುರುಮರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Comment