100 ಕಂತು ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ

ಬೆಂಗಳೂರು, ಜ 24- ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಸೃಷ್ಠಿಸಿದ ಜೊತೆಜೊತೆಯಲಿ ಧಾರಾವಾಹಿ ಇದೀಗ ಅದೇ ಜನಪ್ರಿಯತೆಯಲ್ಲಿ ಶತಕ ಬಾರಿಸಿ ಗಮನ ಸೆಳೆದಿದೆ.

ಜನಪ್ರಿಯ ಜೀಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿ ಜ 23ರಂದು 100 ಕಂತುಗಳ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಿತು. ವಿವಿಧ ತಲೆಮಾರುಗಳಿಗೆ ಸೇರಿದ ದಂಪತಿಗಳ ಅಸಾಂಪ್ರದಾಯಿಕ ಪ್ರೇಮಕಥೆಯನ್ನು ಆಧರಿಸಿರುವ ಈ ಧಾರಾವಾಹಿ ಪ್ರಾರಂಭ ಎಲ್ಲ ದಾಖಲೆಗಳನ್ನೂ ಮುರಿದು ಕನ್ನಡ ಕಿರುತೆರೆ ಉದ್ಯಮದ ಧಾರಾವಾಹಿಗಳಲ್ಲಿ ಮುಂಚೂಣಿಗೆ ಬಂದಿತು. ಜೊತೆ ಜೊತೆಯಲಿ 2020ರ 1ನೇ ವಾರದಲ್ಲಿ 14.7 ಟಿ.ವಿ.ಆರ್ ಪಡೆದಿದೆ.

ಜೊತೆ ಜೊತೆಯಲಿ ತಂಡವು ಈ ಸಂಭ್ರಮವನ್ನು ‘ಜೊತೆ ಜೊತೆಯಲಿ’ ಲಾಂಛನ ಹೊಂದಿದ ಕೇಕ್ ಅನ್ನು ಧಾರಾವಾಹಿಯ ಸೆಟ್‌ನಲ್ಲಿ ಕತ್ತರಿಸುವ ಮೂಲಕ ಸಂಭ್ರಮಿಸಿತು. ಹೆಚ್ಚುವರಿಯಾಗಿ, ಈ ಕಾರ್ಯಕ್ರಮದ ನಿರ್ಮಾಪಕರು ಈ ಯಶಸ್ಸಿಗೆ ಅದರ ವಿನೂತನ ಕಥೆಯನ್ನು ನಿರ್ಧರಿಸಿದ್ದು ಕಾರಣವಾಗಿದ್ದು ಇದರಲ್ಲಿ ನಾಯಕ ಆರ್ಯ ವರ್ಧನ್ ನಾಯಕಿ ಅನು ಸಿರಿಮನೆಗೆ ಆಕೆ ನಿದ್ರೆಯಲ್ಲಿದ್ದಾಳೆ ಎಂದು ತಿಳಿದು ತನ್ನ ಪ್ರೀತಿಯನ್ನು ನಿವೇದಿಸುತ್ತಾನೆ. ಈ ಮಧ್ಯದಲ್ಲಿ, ಆರ್ಯನ ಕಛೇರಿಯಲ್ಲಿ ಅನುವಿಗೆ ಪರಿಪೂರ್ಣ ಜೋಡಿಯಾದ ನೀಲ್ ಪ್ರವೇಶಿಸಿ ಹೊಸ ತಿರುವು ಪಡೆದುಕೊಂಡಿದೆ. ಆರ್ಯನ ಪರ್ಸನಲ್ ಅಸಿಸ್ಟೆಂಟ್ ಮೀರಾ ಹೆಗ್ಡೆ ಆರ್ಯ ಮತ್ತು ಅನು ವಿರುದ್ಧ ಸಂಚು ರೂಪಿಸಲು ಯತ್ನಿಸುತ್ತಾಳೆ, ಈ ಧಾರಾವಾಹಿಯಲ್ಲಿ ಅವರು ಈ ಎಲ್ಲ ಅಡೆತಡೆಗಳ ವಿರುದ್ಧ ಹೋರಾಟ ನಡೆಸಿ ತಮ್ಮ ಪರಸ್ಪರ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೋ ಎಂದು ಇನ್ನೂ ನಿರ್ಧರಿಸಬೇಕಾಗಿದೆ.

Leave a Comment