10 ರಂದು ಫರಹತಾಬಾದ ಗ್ರಾಪಂ ಮುಂದೆ ಧರಣಿ

ಕಲಬುರಗಿ ಸ 6: ಕಲಬುರಗಿ ತಾಲೂಕಿನ ಫರಹತಾಬಾದ್ ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ 98 ಲಕ್ಷ ರೂ ಅವ್ಯವಹಾರದ ತನಿಖೆಯನ್ನು ಕೈಗೆತ್ತಿಕೊಳ್ಳದ ಜಿಲ್ಲಾಡಳಿತ ಕ್ರಮವನ್ನು ವಿರೋಧಿಸಿ ಸಪ್ಟೆಂಬರ್ 10 ರಂದು ಗ್ರಾಪಂ ಎದುರು ಧರಣಿ ಸತ್ಯಾಗ್ರಹ ನಡೆಸಲು  ಫರಹತಾಬಾದ ಗ್ರಾಮ ನಾಗರಿಕ ಕ್ರಿಯಾ ಸಮಿತಿ ನಿರ್ಧರಿಸಿದೆ.

ಫರಹತಾಬಾದ ಗ್ರಾಪಂನಲ್ಲಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗವಾಗಿದ್ದು ದಾಖಲೆ ಸಮೇತ ವಿವರಗಳನ್ನು  ಪ್ರಾದೇಶಿಕ ಆಯುಕ್ತರು,ಜಿಲ್ಲಾಧಿಕಾರಿಗಳು ಸೇರಿದಂತೆ  ಜಿಲ್ಲಾಡಳಿತದ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ ಸಜ್ಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಾಗಿ 1 ತಿಂಗಳಾಗುತ್ತ ಬಂದರೂ ಆರೋಪಿಗಳ ವಿರುದ್ಧ  ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಧಿಕಾರಿಗಳಾಗಲಿ ಕ್ರಮ ಜರುಗಿಸಲು ಮುಂದಾಗದೇ ಇರುವದರಿಂದ ಸತ್ಯಾಗ್ರಹ ನಡೆಸಿ ತನಿಖೆಗೆ ಆಗ್ರಹಿಸಲಾಗುವದು ಎಂದರು…

Leave a Comment