1.25 ಲಕ್ಷ ರೂ.ಮೌಲ್ಯದ ವಾಯರ್ ಕಳವು

 

ಕಲಬುರಗಿ,ಏ.16-ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸೈಯದ್ ಚಿಂಚೋಳಿ ಗ್ರಾಮದಲ್ಲಿ 11 ಲೈಟಿನ ಕಂಬಗಳ ಕರೆಂಟ್ ವಾಯರ್ ಕಳವು ಮಾಡಲಾಗಿದೆ.

1.25 ಲಕ್ಷ ರೂಪಾಯಿ ಮೌಲ್ಯದ ಕರೆಂಟ್ ವಾಯರ್ ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಜೆಸ್ಕಾಂ ಜೂನಿಯರ್ ಇಂಜಿನಿಯರ್ ರಾಹುಲ್ ದೇವ ಭಗವಾಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

Leave a Comment