1 ರಂದು ವೀರಶೈವ ಮಹಾಸಭಾ ಸದಸ್ಯರ ಸಭೆ

ಕಲಬುರಗಿ ಆ 25: ಅಖಿಲ ಭಾರತ ವೀರಶೈವ ಮಹಾಸಭಾದ ಕಲಬುರಗಿ ಜಿಲ್ಲಾ ಘಟಕಕ್ಕೆ ಬರುವ ಸಪ್ಟೆಂಬರ್ 29 ರಂದು ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಸಪ್ಟೆಂಬರ್ 1 ರಂದು ಸಂಜೆ 5 ಗಂಟೆಗೆ ನಗರದ ಸಾರ್ವಜನಿಕ ಉದ್ಯಾನದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಚುನಾವಣೆ ಕುರಿತು ಚರ್ಚಿಸಲು ಮಹಾಸಭಾದ ಹಿಂದಿನ ಮತ್ತು ನೂತನ ಸದಸ್ಯರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಮಹಾಸಭಾ ಸದಸ್ಯ ಎಂ ಎಸ್ ಪಾಟೀಲ ನರಿಬೋಳ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾಸಭಾದ ನಿಯಮಾವಳಿ ಪ್ರಕಾರ 1 ಸಾವಿರಕ್ಕೂ ಕಡಿಮೆ ಸದಸ್ಯರು ಇರುವದರಿಂದ ಇಲ್ಲಿಯವರೆಗೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆದಿರಲಿಲ್ಲ.ವೀರಶೈವ ಲಿಂಗಾಯತ ಸ್ವಾಭಿಮಾನಿಗಳ ಬಳಗದಿಂದ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಈಗ ಸದಸ್ಯರ ಸಂಖ್ಯೆ 4 ಸಾವಿರ ಗಡಿ ದಾಟಿದೆ ಎಂದರು.

29 ರಂದು ನಡೆಯುವ ಚುನಾವಣೆಯಲ್ಲಿ  ಅಧ್ಯಕ್ಷ ಸ್ಥಾನ ಮತ್ತು ಕಾರ್ಯಕಾರಿ ಸಮಿತಿಯ 30 ಜನ  ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ಆಯ್ಕೆಯಾದ ಕಾರ್ಯಕಾರಿ ಸಮಿತಿಯವರು ಅಧ್ಯಕ್ಷರನ್ನು ಹೊರತು ಪಡಿಸಿ, ಉಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡುವರು.30 ಜನರ ಕಾಂiÀರ್iಕಾರಿ ಸಮಿತಿಯಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಚುನಾವಣೆಯ ನಂತರ ಜಿಲ್ಲಾ ಮಹಾಸಭೆಗೆ 1 ಲಕ್ಷ ಸದಸ್ಯರ ನೋಂದಣಿ ಮಾಡುವ ಗುರಿ ಇದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ  ಧರ್ಮ ಪ್ರಕಾಶ ಪಾಟೀಲ,ಮಚ್ಛೇಂದ್ರನಾಥ ಮೂಲಗೆ,ಜಿ.ಡಿ ಅಣಕಲ್ ಉಪಸ್ಥಿತರಿದ್ದರು..

Leave a Comment