85ರ ಅಜ್ಜ ಸಂಶೋಧನೆ ಮಾಡುತ್ತೇನೆಂದು ಪಿಎಚ್.ಡಿ ಪ್ರವೇಶ ಪರೀಕ್ಷೆ ಬರೆದ

ಹೊಸಪೇಟೆ,ಸೆ.6: ತಾನು ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ ಮಾಡುತ್ತೇನೆಂದು ಕೊಪ್ಪಳ ಜಿಲ್ಲೆಯ 85 ವರ್ಷದ ಬಿಸರಹಳ್ಳಿ ಶರಣಬಸಪ್ಪ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಕಳೆದ ವರ್ಷವೂ ಇದೇ ರೀತಿ ಪರೀಕ್ಷೆ ಬರೆದಿದ್ದರೂ ಆದರೆ ಪ್ರವೇಶ ಪಡೆಯಲು ಬೇಕಾದಷ್ಟು ಅಂಕ ಪಡೆದಿರದ ಕಾರಣ ಈ ವರ್ಷ ಮತ್ತೆ ಛಲ ಬಿಡದೇ ಪರೀಕ್ಷೆ ಬರೆದಿದ್ದಾರೆ.

ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾಗಿರುವ ಇವರಿಗೆ ಸಾಹಿತ್ಯದಲ್ಲಿ ಸಂಶೋಧನೆ ಮಾಡಬೇಕೆಂಬ ಹೆಬ್ಬಯಕೆ. ಶಿಕ್ಷಕನಿದ್ದಾಗ ಪಿಎಚ್.ಡಿ. ಮಾಡುವ ಆಸೆ ಇತ್ತು. ಆದರೆ, ಅದು ಕೈಗೂಡಿರಲಿಲ್ಲ. ಈಗ ಮಾಡುವ ಆಸೆ ಇದೆ. ಅದಕ್ಕಾಗಿಯೇ ಪರೀಕ್ಷೆ ಬರೆದಿದ್ದೇನೆ ಎನ್ನುತ್ತಾರೆ ಶರಣಬಸಪ್ಪ.

Leave a Comment