ಮುದ್ದಾದ ಪ್ರೇಮಕಥೆ ಮನಸು ಮಲ್ಲಿಗೆ

 ಸದಭಿರುಚಿಯು ಚಿತ್ರ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಹಿರಿಯ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸದ್ದುಗದ್ದಲವಿಲ್ಲದೆ ಮತ್ತೊಂದು ಚಿತ್ರ ಪೂರ್ಣಗೊಳಿಸಿದ್ದಾರೆ. ಮರಾಠಿಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದ್ದ ’ಸೈರಾಟ್ ಚಿತ್ರದ ರಿಮೇಕ್ “ಮನಸು ಮಲ್ಲಿಗೆ’.

ರಾಕ್‌ಲೈನ್ ವೆಂಕಟೇಶ್ ಅವರಿಗೆ ಮತ್ತೊಬ್ಬ ಯಶಸ್ವಿ ಮತ್ತು ಕ್ರಿಯಾಶೀಲ ನಿರ್ದೇಶಕ ಎಸ್. ನಾರಾಯಣ್ ಕೈ ಜೋಡಿಸಿದ್ದಾರೆ .ಅದರ ಫಲ ಎನ್ನುವಂತೆ ಚಿತ್ರ ಸಂಪೂರ್ಣ ಚಿತ್ರೀಕರಣ ಪುರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಮೂಲ ಚಿತ್ರದಲ್ಲಿ ನಟಿಸಿದ್ದ ನಾಯಕಿ ರಿಂಕು ರಾಜ್ ಈ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾಯಕನಾಗಿ ನಿಶಾಂತ್ ಕಾಣಿಸಿಕೊಂಡಿದ್ದಾರೆ. ಹಿರಿಯ ಖಳನಟ ಸತ್ಯ ಪ್ರಕಾಶ್ ಅವರ ಪುತ್ರ ಈತ.

ಚಿತ್ರ ಸಂಪೂರ್ಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್,ಶಾಸಕ ಮುನಿರತ್ನ ಸೇರಿದಂತೆ ಹಲವು ಮಂದಿ ಭಾಗವಹಿಸಿ ಚಿತ್ರಕ್ಕೆ ಮತ್ತು ತಂಡದ ಕಲಾವಿದರ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಸೈರಾಟ್ ಚಿತ್ರದ ರಿಮೇಕ್ ಹಕ್ಕನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಜೀ ಸ್ಟುಡಿಯೋ ಜಂಟಿಯಾಗಿ ಪಡೆದಿದ್ದು, ಮೊದಲಿಗೆ ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಆ ನಂತರ ಇನ್ನುಳಿದ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಧ್ವನಿಸುರುಳಿ ಬಿಡುಗಡೆಯ ವೇಳೆ ಮಾತಿಗಿಳಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕನ್ನಡದ ಚಿತ್ರರಸಿಕರಿಗೆ ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು ಅದಕ್ಕಾಗಿ ಸಿದ್ದತೆ ಮಾಡಿದ್ದೇವೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ನಿರ್ದೇಶಕ ಎಸ್. ನಾರಾಯಣ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಚಿತ್ರದ ಮುಹೂರ್ತದ ದಿನ ಬಂದಿದ್ದರು. ಆ ಬಳಿಕ ಈಗಲೇ ಬಂದಿರುವುದು ಚಿತ್ರದ ಪ್ರತಿಯೊಂದು ಜವಬ್ದಾರಿಯನ್ನು ತಮ್ಮ ಮೇಲೆ ಹಾಕಿದ್ದರು. ಅವರ ನಂಬಿಕೆ ಮತ್ತು ವಿಶ್ವಾಸಕ್ಕೆ ಎಲ್ಲಿಯೂ ತೊಂದರೆಯಾಗದಂತೆ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಹಲವು ಕಲಾವಿದರಿದ್ದಾರೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಮೆಚ್ಚುಗೆಯ ಮಾತನಾಡಿದರು ನಾರಾಯಣ್.

ಹಳ್ಳಿಯ ಶ್ರೀಮಂತ ಹುಡುಗಿ ಮತ್ತು ಬಡ ಹುಡುಗನ ನಡುವೆ ನಡೆಯುವ ಮುದ್ದಾದ ಪ್ರೇಮಕಥೆ. ಪ್ರೀತಿ ಮಾಡಿದ ಯುವ ಮನಸ್ಸುಗಳು ತಂದೆ ತಾಯಿಯನ್ನು ಎದುರಿಸಲಾಗದೆ ಊರು ಬಿಡುತ್ತಾರೆ. ಆ ನಂತರ ಸಾಕಷ್ಟು ಕಷ್ಟ,ನೋವು ಅನುಭವಿಸುತ್ತಾರೆ. ಆ ಬಳಿಕ ಮತ್ತೆ ಅವರು ಊರಿಗೆ ವಾಪಾಸ್ಸಾಗುತ್ತಾರಾ ಇಲ್ಲವೇ ಎನ್ನುವುದು ಚಿತ್ರದ ತಿರುಳು ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಚಿತ್ರರಂಗದಲ್ಲಿ ಹೆಚ್ಚು ಕಡಿಮೆ ಐವತ್ತು ಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದೇನೆ.

ಚಿತ್ರರಂಗದಲ್ಲಿ ಏನು ಸಾಧಿಸಿದ್ದೇನೋ ಬಿಟ್ಟಿದ್ದೇನೋ ಆದರೆ ಒಳ್ಳೆಯ ಸ್ನೇಹಿತರನ್ನು ಸಂಪಾದನೆ ಮಾಡಿದ್ದೇನೆ.ಅದರಲ್ಲಿ ರಾಕ್‌ಲೈನ್ ವೆಂಕಟೇಶ್ ಕೂಡ ಒಬ್ಬರು. ಮನಸು ಮಲ್ಲಿಗೆ ಎಲ್ಲರ ಮನಸುಗಳಿಗೂ ಹತ್ತಿರವಾದ ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ನಮ್ಮದು ಇನ್ನು ಜನರ ಪ್ರೀತಿ ಆಶೀರ್ವಾದ ಬೇಕು ಎಂದು ಚಿತ್ರ ಬಗ್ಗೆ ಮಾಹಿತಿ ನೀಡಿದರು. ನಟ ನಿಶಾಂತ್, ಮೊದಲ ಬಾರಿಗೆ ನಾಯಕನಾಗಿದ್ದೇನೆ. ನಿರ್ದೇಶಕ ಎಸ್. ನಾರಾಯಣ್ ನನಗೆ ಗಾಢ್‌ಫಾಡರ್ ಇದ್ದಂತೆ.

ರಾಕ್‌ಲೈನೆ ವೆಂಕಟೇಶ್ ಅವರ ದೊಡ್ಡ ಬ್ಯಾನರ್ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿರುವುದು ಸಂತಸ ತಂದಿದೆ ಇದಕ್ಕೆ ಇಬ್ಬರಿಗೂ ಸದಾ ಅಭಾರಿ ಎಂದು ಹೇಳಿಕೊಂಡರು.ನಾಯಕಿ ರಿಂಕುರಾಜ್, ಬೋಲ್ಡ್ ಪಾತ್ರ. ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ. ಕನ್ನಡದಲ್ಲಿಯೂ ಚಿತ್ರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಮೂಲ ಚಿತ್ರಕ್ಕೆ ಸಂಗೀತ ನೀಡಿದ್ದ ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು,ಚಿತ್ರದಲ್ಲಿ ಐದು ಹಾಡುಗಳಿವೆ. ಸದ್ಯ ಚಿತ್ರೀಕರಣ ಪೂರೈಸಿರುವ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

Leave a Comment