ಬೆಂಗಳೂರು ಆದರ್ಶ ನಗರದ ಹಿಂದೆ ಯಡಿಯೂರಪ್ಪ ಶ್ರಮ: ಶ್ರೀರಾಮುಲು (ನಮ್ಮ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.25- ವಿರೋಧ ಪಕ್ಷದ ಟೀಕೆ ಟಿಪ್ಪಣಿ ಮಧ್ಯೆ ಕೊರೋನಾ ವೈರಸ್ ಹರಡೋದನ್ನ ಒಂದಷ್ಟು ‌ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿ ಬೆಂಗಳೂರು ನಗರ ಆದರ್ಶ ನಗರ ಆಗುವಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಶ್ರಮ‌ ಹೆಚ್ಚು ಇದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಅವರು ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು, ರಾಜ್ಯ ಸರ್ಕಾರ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ನಮ್ಮ ಈ ಅಲ್ಪ ಸಾಧನೆಗೆ ಕಾರಣವೆಂದ ಸಚಿವ ಶ್ರೀರಾಮುಲು, ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಆದರ್ಶ ನಗರಗಳ‌ ಪೈಕಿ ಬೆಂಗಳೂರು ಒಂದಾಗಿರೋದರ ಹಿಂದಿನ ಯಶಸ್ಸು ಯಡಿಯೂರಪ್ಪ ಅವರಿಗೆ ಸೇರುತ್ತದೆ.

ಆರಂಭದಲ್ಲಿ ಥಿಯೇಟರ್, ಮಾಲ್, ಜನಸಂದಣಿ ಸೇರೋ ಪ್ರದೇಶದಲ್ಲಿ ‌ನಿಷೇಧ ಹೇರಿರೋದು ನಮಗೆ ಸಹಕಾರಿಯಾಗಿದೆ. ಅಲ್ಲದೆ ಇದಕ್ಕೆ ಕೊರೋನಾ ವಾರಿಯರ್ ಗಳ ಶ್ರಮವೂ ಇದೆಂದರು.

ಸೋನಿಯಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರನ್ನು ತೆಗಳುತ್ತಲೇ ಯಡಿಯೂರಪ್ಪ ಮತ್ತು ಮೋದಿ ಅವರನ್ನು ಶ್ರೀರಾಮುಲು ಹಾಡಿ ಹೊಗಳಿದರು.

Share

Leave a Comment