೮ ವರ್ಷಗಳ ಬಳಿಕ ಮತ್ತೆ ಐಶ್-ಅಭಿ ರೊಮ್ಯಾನ್ಸ್

ಮಣಿರತ್ನಂ ನಿದೇಶಿಸಿದ್ದ ’ರಾವಣ್”ಚಿತ್ರದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದ ಬಾಲಿವುಡ್ ತಾರಾ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ, ೮ ವರ್ಷಗಳ ಬಳಿಕ ಮತ್ತೊಮ್ಮೆ ತೆರೆಯ ಮೇಲೆ ರೋಮಾನ್ಸ್ ಮಾಡಲು ಮುಂದಾಗಿದ್ದಾರೆ.
ಬಹಳ ದಿನಗಳಿಂದ ತಾರಾ ಜೋಡಿ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂದು ಬಯಸಿದ್ದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ,ಈಗ
“ಗುಲಾಬ್ ಜಾಮೂನ್” ಚಿತ್ರದ ಮೂಲಕ ಅಂತಹದೊಂದು ಅವಕಾಶ ಕೂಡಿ ಬಂದಿದ್ದು ಇಬ್ಬರೂ ಅಭಿಮಾನಿಗಳಲ್ಲಿ ಪುಳಕದ ಭಾವನೆ ಮನೆ ಮಾಡಿದೆ.
ಅಷ್ಟೇ ಅಲ್ಲ ಜ್ಯೂನಿಯರ್ ಬಚ್ಚನ್ ಮತ್ತು ಸೊಸೆ ಜೊತೆಯಾಗಿ ಚಿತ್ರದಲ್ಲಿ ನಟಿಸುತ್ತಿರುವುದು ಸೀನಿಯರ್ ಬಚ್ಚನ್ ಅಮಿತಾಬ್ ದಂಪತಿಗಳಲ್ಲಿ ಖುಷಿ ಹಿಮ್ಮಡಿಗೊಳಿಸಿದೆ.
ಸರ್ವೇಶ್ ಮೇರ್ವಾ ನಿರ್ದೇಶನ ’ಗುಲಾಬ್ ಜಾಮೂನ್” ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಮೊದಲ ಭಾಗದಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ೨೦೧೦ರಲ್ಲಿ ರಾವಣ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಬಳಿಕ ಪ್ರಯತ್ನ ನಡೆಸಿದ್ದರು ಈಗ ಕಾಲ ಕೂಡಿ ಬಂದಿದೆ. ಅದು ಅಭಿಮಾನಿಗಳಿಗೆ ಗುಲಾಬ್ ಜಾಮೂನ್ ತಿಂದಷ್ಟೇ ಖುಷಿಯಾಗಿದೆ.
ಪತಿ, ಪತ್ನಿಯರು ಜೊತೆಯಾಗಿ ಕೆಲಸ ಮಾಡಲು ಉತ್ಸುಕರಾಗಿದ್ದು,ಕಥೆ ಏನು?, ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಸದ್ಯಕ್ಕೆ ತಿಳಿದಿಲ್ಲ. ಆದರೆ ಈ ತಾರಾ ದಂಪತಿ ಜೋಡಿ ಗುಲಾಬ್ ಜಾಮೂನ್ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದೆ.
೪೪ ವರ್ಷದ ಐಶ್ವರ್ಯ ಮತ್ತು ೪೦ ವರ್ಷದ ಅಭಿಷೇಕ್ ನಿರ್ದೇಶಕರು ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರೆ.ಇದಕ್ಕಿಂತ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಮತ್ತೊಂದು ಚಿತ್ರದ ಕತೆ ಬೇಕಾಗಿಲ್ಲ ಎನ್ನುವ ನಿಲುವಿಗೆ ಬಂದಿರುವ ಈ ದಂಪತಿ ಜೊತೆಯಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.
ಇದುವರೆಗೂ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್, ಗುರು, ಧೂಮ್-೨, ಉಮಾನ್ ಜಾವೋ, ಶಂಕರ್ ರಾಜ್, ಕುಚ್ ನಾ ಕಹೋ , ರಾವಣ್ ಸೇರಿದಂತೆ ಅನೇಕ ಚಿತ್ರಗಳ್ಳಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
೨೦೦೭ರಲ್ಲಿ ಮದುವೆಯಾದ ಈ ಜೋಡಿದೆ ೬ ವರ್ಷದ ಆರಾಧ್ಯ ಎನ್ನುವ ಮಗಳಿದ್ದಾಳೆ. ೨೦೧೬ರಲ್ಲಿ ಐಶ್ವರ್ಯ ರೈ ಅವರು, ’ಹೇ ದಿಲ್ ಹೈ ಮಷ್ಕಿಲ್’ಚಿತ್ರದ ಮೂಲಕ ಮದುವೆಯಾದ ಬಳಿಕ ಮತ್ತೆ ಬೆಳ್ಳಿ ತೆರೆ ಪ್ರವೇಶಿಸಿದ್ದರು.
೮ ವರ್ಷಗಳ ಬಳಿಕ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜೊತೆಯಾಗಿ ಗುಲಾಬ್ ಜಾಮೂನ್ ಚಿತ್ರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದು ಮುಂದಿನ ವರ್ಷದಿಂದ ಚಿತ್ರ ಆರಂಭವಾಗಲಿದೆ.

Leave a Comment