೭ ಮಂದಿ ಬಂಧನ ೫ ಕೋಟಿ ರೂ. ವಶ

ಹೈದ್ರಾಬಾದ್, ಆ. ೨೮- ಅಕ್ರಮ ಹಣ ವರ್ಗಾವಣೆ ದಂಧೆಯಾದ ಹವಾಲಾ ಜಾಲವನ್ನು ಬೇಧಿಸಿರುವ ಹೈದ್ರಾಬಾದ್ ಪೊಲೀಸರು, ೭ ಮಂದಿಯನ್ನು ಬಂಧಿಸಿ ೫ ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತರ ಟಾಕ್ಸ್‌ಫೋರ್ಸ್ ತಂಡ ಹೈದ್ರಾಬಾದ್‌ನ ಜ್ಯುಬಿಲಿ ಹಿಲ್ಸ್ ಚೆಕ್‌ಪೋಸ್ಟ್‌ನಲ್ಲಿ ವಾಹನದಲ್ಲಿ ತೆರಳುತ್ತಿದ್ದ ಏಲು ಗುಜರಾತಿಗಳನ್ನು ಶೋಧನೆ ನಡೆಸಿದಾಗ ೫ ಕೋಟಿ ರೂ. ಅಕ್ರಮ ಹಣ ಸಾಗಾಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಬಂಧಿತರು ಹವಾಲಾ ದಂಧೆಯಲ್ಲಿ ತೊಡಗಿಕೊಂಡವರು ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ. ಬಂಧಿತರಿಂದ ವಶಪಡಿಸಿಕೊಂಡಿರುವ ೫ ಕೋಟಿ ರೂ. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ ಹೆಚ್ಚಿನ ತನಿಖೆ ನಡೆಸುವಂತೆ ಕೋರಿದ್ದಾರೆ.
ಈ ಅಕ್ರಮ ಹಣ ಸಾಗಾಣೆ ಸಂಬಂಧ ತನಿಖೆ ಮುಂದುವರೆದಿದೆ.

Leave a Comment