೬೦ ಸಾವಿರಕ್ಕಾಗಿ ನಡೆಯಿತು ಪೈಶಾಚಿಕ ಕೃತ್ಯ!

ಮಂಗಳೂರು, ಮೇ ೧೬- ಶ್ರೀಮತಿ ಶೆಟ್ಟಿ (೩೫) ಅವರಿಂದ ಆರೋಪಿಗಳು ಒಂದು ಲಕ್ಷ ರೂ. ಸಾಲ ಪಡೆದಿದ್ದು, ೪೦ ಸಾವಿರ ರೂ.ಗಳನ್ನು ಮರಳಿಸಿದ್ದರು. ಬಾಕಿ ೬೦,೦೦೦ ರೂ.ಗಳನ್ನು ಕೊಡುವಂತೆ ಕೇಳಲೆಂದು ಮೇ ೧೧ರಂದು ಬೆಳಗ್ಗೆ ಶ್ರೀಮತಿ ಅವರು ಸ್ಯಾಮ್ಸನ್ ಮನೆಗೆ ಹೋಗಿದ್ದರು. ಈ ಸಂದರ್ಭ ವಾಗ್ವಾದ ನಡೆದು ಆಕೆಯನ್ನು ದಂಪತಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹಣಕಾಸಿನ ವ್ಯವಹಾರವೆ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತಾವರ ಬಿ.ವಿ. ರಸ್ತೆಯ ಸೆಮಿನರಿ ಕಾಂಪೌಂಡ್ ನಿವಾಸಿ, ಪ್ರಸ್ತುತ ವೆಲೆನ್ಸಿಯಾ ಸೂಟರ್ ಪೇಟೆಯ ೯ನೇ ಅಡ್ಡ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿರುವ ಜೋನಸ್ ಜೂಲಿನ್ ಸ್ಯಾಮ್ಸನ್ (೩೬) ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್ (೪೬) ಬಂಧಿಸಲಾಗಿದೆ.

Leave a Comment