55 ವಸಂತ ದಾಟಿದ ಶಿವರಾಜ್ ಕುಮಾರ್

ಬೆಂಗಳೂರು.ಜು.೧೨-ಕನ್ನಡ ಚಿತ್ರರಂಗ ಕಂಡ ಸರಳ ಸಜ್ಜನಿಕೆಯ ನಟ ಶಿವರಾಜ್ ಕುಮಾರ್ ಅವರಿಗಿಂದು ೫೬ನೇ ಹುಟ್ಟು ಹಬ್ಬದ ಸಂಭ್ರಮ.
ನಾಗವಾರದ ನಿವಾಸದಲ್ಲಿಂದು ತಡರಾತ್ರಿ ಕುಟುಂಬಸ್ಥರು, ಸ್ನೇಹಿತರ ಹಾಗೂ ನೂರಾರು ಜನ ಅಭಿಮಾನಿಗಳ ಸಮ್ಮುಖದಲ್ಲಿ ಶಿವಣ್ಣ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ ವೇಳೆ ಅಭಿಮಾನಿಗಳು ಹಿತೈಷಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಮೊದಲಿಗೆ ಕೇಕ್ ಕತ್ತರಿಸಿ, ಬಳಿಕ ಸ್ನೇಹಿತರು ಮತ್ತು ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿದರು. ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಶಿವಣ್ಣರ ನಿವಾಸಕ್ಕೆ ಆಗಮಿಸಿದ್ದರು. ಹೀಗಾಗಿ ನಾಗವಾರದ ನಿವಾಸದಲ್ಲಿ ಜನ ಜಾತ್ರೆಯೇ ತುಂಬಿತ್ತು.
ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್,ಅಭಿಮಾನಿಗಳ ಅಭಿಮಾನ ನೋಡಿದರೆ ನಿಜಕ್ಕೂ ಸಂತೋಷ ಆಗುತ್ತದೆ. ’ಟಗರು’ ವಿಭಿನ್ನ ಚಿತ್ರಗಳನ್ನ ಮಾಡಿ ಯಶಸ್ಸು ಕಂಡಿರದು ತುಂಬಾ ಖುಷಿ ಇದೆ. ಹೆಸರು ಅಲ್ಲದೇ ಪಾತ್ರದ ಹೆಸರುಗಳಿಂದ ಡಾಲಿ, ಚಿಟ್ಟೆ ಈ ರೀತಿ ಕರೆಯುತ್ತಾರಲ್ಲ ಅದು ತುಂಬಾ ಖುಷಿ. ವಿಲನ್ ನಂತರ ಕವಚ, ರುಸ್ತುಂ ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಇದ್ದೇನೆ ಎಂದರು.

Leave a Comment