೪೮೭ ರನ್‌ಗೆ ಭಾರತ ಆಲೌಟ್ ಪಾಂಡ್ಯ ಚೊಚ್ಚಲ ಶತಕ

ಪಲ್ಲೆಕೆಲೆ, ಆ. ೧೩: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ೪೮೭ ರನ್‌ಗಳಿಗೆ ಆಲೌಟ್ ಆಗಿದೆ.
ಟಿ-೨೦ ಶೈಲಿಯಲ್ಲಿ ಬ್ಯಾಟ್ ಬೀಸಿದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರ ಭರ್ಜರಿ ಶತಕ ಮೊದಲ ಇನ್ನಿಂಗ್ಸ್‌ನ ಹೈಲೈಟ್ಸ್ ಆಗಿತ್ತು. ಭೋಜನಾ ವಿರಾಮದ ವೇಳೆಗೆ ೧೨೨ ಒವರ್‌ಗಳಲ್ಲಿ ೪೮೭ ರನ್‌ಗಳಿಗೆ ೯ ವಿಕೆಟ್ ಕಳೆದುಕೊಂಡಿದ್ದ ಭಾರತ, ಬಳಿಕ ಮೊದಲನೇ ಓವರ್‌ನ ೩ ನೇ ಎಸೆತದಲ್ಲೇ ಆಲೌಟ್ ಆಯಿತು. ಎರಡನೇ ದಿನದಾಟದಲ್ಲಿ ಅಬ್ಬರದ ಶತಕ ಸಿಡಿಸಿ ಮಿಂಚಿದ ಹಾರ್ದಿಕ್ ಪಾಂಡ್ಯಾ ಲಂಕಾ ಬೌಲರ್‌ಗಳ ಬೆವರಿಳಿಸಿದರು. ೧ ರನ್‌ನಿಂದ ಇಂದು ಬ್ಯಾಟಿಂಗ್ ಆರಂಭಿಸಿದ್ದ ಪಾಂಡ್ಯಾ, ಇದು ಲಂಕಾ ಬೌಲರ್‌ಗಳನ್ನು ಮನಬಂದತೆ ದಂಡಿಸಿದರು. ೭ ಭರ್ಜರಿ ಸಿಕ್ಸರ್ ಹಾಗೂ ೭ ಬೌಂಡರಿಗಳ ನೆರವಿನಿಂದ ೮೬ ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರ್ತಿಗೊಳಿಸಿದ ಪಾಂಡ್ಯ ದಿನದ ಹೀರೋ ಆದರು. ಇನ್ನೊಂದು ತುದಿಯಲ್ಲಿ ವಿಕೆಟ್ ಬೀಳುತ್ತಲಿದ್ದರೂ ವಿಚಲಿತರಾಗದ ಪಾಂಡ್ಯ, ತಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಬೀಸಿ, ತಂಡಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದರು. ೬ ವಿಕೆಟ್ ನಷ್ಟದಲ್ಲಿ ೩೨೯ ರನ್‌ಗಳಿಂದ ೨ನೆ ದಿನದಾಟ ಆರಂಭಿಸಿದ್ದ ಭಾರತಕ್ಕೆ, ದಿನದ ಎರಡನೇ ಓವರ್‌ನಲ್ಲೇ ಫೆರ್ನಾಂಡೊ ಶಾಕ್ ನೀಡಿದ್ರು. ೧೩ ರನ್‌ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಿಕೆಟ್ ಕೀಪರ್ ವೃದ್ಧಮಾನ್ ಸಹಾ, ಕೇವಲ ಮೂರು ರನ್ ಸೇರಿಸಿ ೧೬ ರನ್‌ಗಳಿಸಿ ಫೆನಾಂಡೊ ಬೌಲಿಂಗ್‌ನಲ್ಲಿ ಪೆರಾರಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಕುಲದೀಪ್ ಯಾದವ್, ತುಸು ಪ್ರತಿರೊಧ ತೋರಿ ಪಾಂಡ್ಯಾಗೆ ಜೊತೆಯಾದರು. ೭೩ ಎಸೆತಗಳನ್ನು ಎದುರಿಸಿ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಕುಲದೀಪ್, ೨೬ ರನ್‌ಗಳಿಸಿ ಕೀಪರ್ ಡಿಕೆವೆಲ್ಲಾಗೆ ಕ್ಯಾಚ್ ಕೊಟ್ಟು ವಾಪಾಸಾದರು. ಮುಹಮ್ಮದ್ ಶಮಿ ೮ ರನ್‌ಗಳಿಸಿ ಸಂದಕನ್‌ಗೆ ನೇರವಾಗಿ ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ೩ ರನ್‌ಗಳಿಸಿ ನಾಟೌಟ್ ಅಗಿ ಉಳಿದರು. ೩೨.೩ ಓವರ್‌ಗಳ ಬೌಲಿಂಗ್ ದಾಳಿಯಲ್ಲಿ ಶ್ರೀಲಂಕಾ ೪ ವಿಕೆಟ್ ಪಡೆಯಿತಾದರೂ ಪಾಂಡ್ಯಾ ಅಬ್ಬರಕ್ಕೆ ಬ್ರೇಕ್ ಹಾಕಲು ಲಂಕನ್ನರಿಗೆ ಸಾಧ್ಯವಾಗಲಿಲ್ಲ. ಲಂಕಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಲಕ್ಷಣ ಸಂದಕನ್ ೫ ವಿಕೆಟ್ ಪಡೆದರು. ಮಲಿಂದ ಪುಷ್ಪಕುಮಾರ ೩ ಹಾಗೂ ಫೆರ್ನಾಂಡೋ ೨ ವಿಕೆಟ್ ಪಡೆದು ಮಿಂಚಿದರು.
ನಿನ್ನೆ ಶಿಖರ್ ಧವನ್ ಅಮೋಘ ಶತಕ ಮತ್ತು ಕೆ.ಎಲ್. ರಾಹುಲ್ ವಿಶ್ವದಾಖಲೆಯ ಅರ್ಧ ಶತಕದ ಮ್ಯಾರಥಾನ್ ಜತೆಯಾಟದ ಬಳಿಕ ಭಾರತ, ಶ್ರೀಲಂಕಾ ಸ್ಪಿನ್‌ದಾಳಿಯೆದುರು ಪರದಾಡಿತು. ಮೊದಲ ವಿಕೆಟಿಗೆ ೩೯.೩ ಓವರ್‌ಗಳಲ್ಲಿ ದಾಖಲೆಯ ೧೮೮ ರನ್ ಒಟ್ಟುಗೂಡಿಸಿ ಧವನ್-ರಾಹುಲ್ ಬೇರ್ಪಟ್ಟರು. ಇದು ಶ್ರೀಲಂಕಾದಲ್ಲಿ ಆರಂಭಿಕ ವಿಕೆಟಿಗೆ ಒಟ್ಟುಗೂಡಿದ ವಿದೇಶಿ ತಂಡದ ಸರ್ವಾಧಿಕ ರನ್ ಎಂಬ ದಾಖಲೆ ನಿರ್ಮಿಸಿತು. ಇದೇವೇಳೆ ಟೂರ್ನಿಯಲ್ಲಿ ಧವನ್ ೨ನೇ ಶತಕ ದಾಖಲಿಸಿದರೆ, ರಾಹುಲ್ ವಿಶ್ವ ದಖಲೆಯ ೭ನೇ ಅರ್ಧಶತಕ ದಾಖಲಿಸಿದರು.
ಧವನ್-ರಾಹುಲ್ ಬೇರ್ಪಟ್ಟ ಬಳಿಕ ಶ್ರೀಲಂಕಾ ಸ್ಪಿನ್ನರ್‌ಗಳು ಭಾರತದ ಮಧ್ಯಮ ಸರದಿಯ ಮೇಲೆ ಘಾತಕವಾಗಿ ಎರಗಿದರು. ಟೀಮ್ ಇಂಡಿಯಾದ ೬ ವಿಕೆಟ್‌ಗಳು ೧೪೧ ಅಂತರದಲ್ಲಿ ಉರುಳಿದ್ದೇ ಇದಕ್ಕೆ ಸಾಕ್ಷಿ. ಧವನ್-ರಾಹುಲ್ ಆರ್ಭಟದ ವೇಳೆ ೪.೭೫ರಷ್ಟಿದ್ದ ರನ್‌ರೇಟ್, ಬಳಿಕ ೩.೬೫ಕ್ಕೆ ಕುಸಿಯಿತು. ಭೋಜನ ವಿರಾಮದ ವೇಳೆ ೨೭ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೧೩೪ ರನ್ ಬಾರಿಸಿ, ಮೊದಲ ದಿನವೇ ತಂಡದ ಮೊತ್ತ ೪೦೦ರ ಗಡಿ ದಾಟುವ ಮುನ್ಸೂಚನೆ ನೀಡಿತ್ತು. ಆದರೆ ಬಳಿಕ ಲಂಕಾ ಬೌಲರ್‌ಗಳ ಕೈ ಮೇಲಾಯಿತು. ಎಡಗೈ ಸ್ಪಿನ್ನರ್ ಮಲಿಂದ ಪುಷ್ಪಕುಮಾರ (೪೦ಕ್ಕೆ ೩) ಮತ್ತು ಚೈನಾಮನ್ ಬೌಲರ್ ಲಕ್ಷಣ ಸಂದಕನ್ (೮೪ಕ್ಕೆ ೨) ಭಾರತದ ಬ್ಯಾಟ್ಸ್‌ಮನ್‌ಗಳ ನಾಗಾಲೋಟಕ್ಕೆ ಬ್ರೇಕ್ ಹಾಕಿದರು.
ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹನೆ ಬೇಗನೆ ನಿರ್ಗಮಿಸಿದ್ದು ಭಾರತದ ಪಾಲಿಗೆ ಮುಳುವಾಯಿತು. ಚೇತೇಶ್ವರ್ ಪೂಜಾರ ಕೇವಲ ೮ ರನ್ನಿಗೆ ಔಟಾದರೆ, ಅಜಿಂಕ್ಯ ರಹಾನೆ ೧೭ ರನ್ನಿಗೆ ಆಟ ಮುಗಿಸಿದರು. ಇವರಿಬ್ಬರೂ ಕ್ರಮವಾಗಿ ಮೊದಲ ಹಾಗೂ ದ್ವಿತೀಯ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ನಾಯಕ ಕೊಹ್ಲಿ ಕ್ರೀಸ್ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರೂ ೪೨ರ ಗಡಿಯಲ್ಲಿ ಎಡವಿದರು. (೮೪ ಎಸೆತ, ೩ ಬೌಂಡರಿ). ಅಶ್ವಿನ್ ಗಳಿಕೆ ೩೧ ರನ್.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್
ಶಿಖರ್ ಧವನ್ ಸಿ ಚಂಡಿಮಾಲ್ ಬಿ ಪುಷ್ಪಕುಮಾರ ೧೧೯

ಸ್ಕೋರ್‌ಪಟ್ಟಿ

ಭಾರತ ಪ್ರಥಮ ಇನ್ನಿಂಗ್ಸ್

ಶಿಖರ್ ಧವನ್    ಸಿ ಚಂಡಿಮಾಲ್ ಬಿ ಪುಷ್ಪಕುಮಾರ    ೧೧೯

ಕೆ.ಎಲ್. ರಾಹುಲ್    ಸಿ ಕರುಣರತ್ನೆ ಬಿ ಪುಷ್ಪಕುಮಾರ    ೮೫

ಚೇತೇಶ್ವರ್ ಪೂಜಾರ    ಸಿ ಮ್ಯಾಥ್ಯೂಸ್ ಬಿ ಸಂದಕನ್    ೮

ವಿರಾಟ್ ಕೊಹ್ಲಿ    ಸಿ ಕರುಣರತ್ನೆ ಬಿ ಸಂದಕನ್    ೪೨

ಅಜಿಂಕ್ಯ ರಹಾನೆ    ಬಿ ಪುಷ್ಪಕುಮಾರ    ೧೭

ಆರ್. ಅಶ್ವಿನ್    ಸಿ ಡಿಕ್ವೆಲ್ಲ ಬಿ ಫೆರ್ನಾಂಡೊ    ೩೧

ವೃದ್ಧಿಮಾನ್ ಸಾಹಾ   ಸಿ ಪೆರಾರ ಬಿ ಫೆರ್ನಾಂಡೊ    ೧೬

ಹಾರ್ದಿಕ್ ಪಾಂಡ್ಯ   ಸಿ ಪೆರಾರ, ಬಿ ಸಂದಕನ್    ೧೦೮

ಕುಲದೀಪ್ ಯಾದವ್ ೨೬ ಸಿ ಡಿಕ್‌ವೆಲ್ಲಾ ಬಿ ಸಂದಕನ್

ಮುಹಮ್ಮದ್ ಶಮಿ ಸಿ & ಬಿ ಸಂದಕನ್

ಉಮೇಶ್ ಯಾದವ್ ೩*  

ಇತರ        ೨೪

ಒಟ್ಟು         ೪೮೭ (೧೨೨.೩ಓವರ್)

ವಿಕೆಟ್ ಪತನ: ೧-೧೮೮, ೨-೨೧೯, ೩-೨೨೯, ೪-೨೬೪, ೫-೨೯೬, ೬-೩೨೨, ೭-೩೩೯, ೮-೪೦೧, ೯-೪೨೧, ೧೦-೪೮೭

ಬೌಲಿಂಗ್:

ವಿಶ್ವ ಫೆರ್ನಾಂಡೊ        ೨೬-೩-೮೭-೨

ಲಹಿರು ಕುಮಾರ        ೨೩-೧-೧೦೪-೦

ದಿಮುತ್ ಕರುಣರತ್ನೆ        ೭-೦-೩೦-೦

ದಿಲುವಾನ್ ಪೆರೆರ        ೮-೧-೩೬-೦

ಲಕ್ಷಣ ಸಂದಕನ್        ೩೫.೩-೪-೧೩೨-೫

ಮಲಿಂದ ಪುಷ್ಪಕುಮಾರ        ೨೩-೨-೮೨-೩

Leave a Comment