೩ ಸಾವಿರ ಅಡಿ ರಂಗೋಲಿಯಲ್ಲಿ ಅರಳಿದ ತ್ರಿವರ್ಣ ಧ್ವಜ

ಬೆಂಗಳೂರು, ಆ, ೧೪- ೭೩ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಸಪ್ತಗಿರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಸೇರಿಕೊಂಡು ಕಾಲೇಜು ಆವರಣದಲ್ಲಿ ಮೂರು ಸಾವಿರ ಅಡಿ ಉದ್ದದ ಅತ್ಯಾಕರ್ಷಕ ಚಿತ್ತಾರಗಳೊಂದಿಗೆ ತ್ರಿವರ್ಣ ಧ್ವಜದ ರಂಗೋಲಿ ಬಿಡಿಸಿ ದೇಶ ಪ್ರೇಮ ಮೆರೆದಿದ್ದಾರೆ.

ವಿದ್ಯಾರ್ಥಿಗಳೊಂದಿಗೆ ಪ್ರಾಂಶುಪಾಲರು, ಉಪನ್ಯಾಸಕರು ಸಪ್ತಗಿರಿ ಕ್ಯಾಂಪಸ್ ಆಟದ ಮೈದಾನದಲ್ಲಿ ಹಗಲಿರುಳು ಶ್ರಮಿಸಿ ಬೃಹತ್ ತ್ರಿವರ್ಣ ಧ್ವಜ ಬಿಡಿಸಿದ್ದಾರೆ. ಜಮ್ಮು – ಕಾಶ್ಮೀರಕ್ಕೆ ಇದ್ದ ವಿಶೇಷಾಧಿಕಾರಿ ರದ್ದುಪಡಿಸಿದ ಹಿನ್ನಲೆಯಲ್ಲಿ ದೇಶಕ್ಕೆ ಒಂದು ನಮನ ಎನ್ನುವ ಪರಿಕಲ್ಪನೆಯಡಿ ಬಣ್ಣಗಳಿಂದ ತ್ರಿವರ್ಣ ದ್ವಜ ಅರಳಿದೆ. ೭೩ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ೩೦೦ ಕೆಜಿ ರಂಗೋಲಿ ಬಿಳಿ, ಕೇಸರಿ ಹಸಿರು ಬಣ್ಣದ ರಂಗೋಲಿಯಿಂದ ತಿರಂಗ ಧ್ವಜ ಅರಳಿದ್ದು, ದೇಶ ಪ್ರೇಮಿಗಳನ್ನು ಮನಸೂರೆಗೊಂಡಿದೆ.

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ಬಿಡಿಸಿವ ರಂಗೋಲಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ೩೦೦ಕ್ಕೂ ವಿದ್ಯಾರ್ಥಿಗಳು ನವ ನವೀನ ರೀತಿಯಲ್ಲಿ ತ್ರಿವರ್ಣ ಧ್ವಜ ಬಿಸಿಸಿ ಗಮನ ಸೆಳೆದಿದ್ದರು. ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ವಿಶೇಷವಾಗಿದೆ. ಜಮ್ಮು – ಕಾಶ್ಮೀರದಲ್ಲಿ ಏಳು ದಶಕಗಳ ನಂತರ ಮೊದಲ ಭಾರಿಗೆ ಸ್ವಾತಂತ್ರ್ಯ ಧ್ವಜ ಹಾರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ ಎಂದು ವಿದ್ಯಾರ್ಥಿಗಳು ಸಂಭ್ರಮ ಹಂಚಿಕೊಂಡರು.

ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ರಾಮಕೃಷ್ಣ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಪ್ರಾಮುಖ್ಯತೆ ಹಾಗೂ ದೇಶದ ವೀರ ಯೋಧರ ಬಲಿದಾನ ಕುರಿತು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಆಳವಾದ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷವಾಗಿ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಜನ ಯೋಧರು, ನಾಗರಿಕರು ದೇಶಕ್ಕಾಗಿ ಜೀವ ತ್ಯಾಗಮಾಡಿದ್ದಾರೆ. ಈ ಬಾರಿ ಈ ಎಲ್ಲಾ ಹುತಾತ್ಮರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವ ಸ್ವಾತಂತ್ರ್ಯ ದಿನಾಚರಣೆ ಬಂದಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದರು.

ಸಪ್ತಗಿರಿ ಆಡಳಿತ ಮಂಡಳಿಯ ಪಿಇಡಿ ಶಂಕರರಾವ್ ಸಿಂಧೆ, ಉಪ ಪ್ರಾಂಶುಪಾಲ ಎಂ.ಎಚ್. ಅಣ್ಣಯ್ಯ, ಪ್ರೊಫೆಸರ್ ಪ್ರಶಾಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment