೩೮ ವಸಂತ ದಾಟಿದ ಗೋಲ್ಡನ್ ಸ್ಟಾರ್

ಬೆಂಗಳೂರು,ಜು.೨-ಚಂದನವನದ ಗೋಲ್ಡನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಗಣೇಶ್ ಅವರಿಗೆ ಇಂದು ೩೮ನೇ ಹುಟ್ಟುಹಬ್ಬದ ಸಂಭ್ರಮ.

ಪತ್ನಿ ಶಿಲ್ಪಾ, ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮತ್ತು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಗಣೇಶ್ ಅವರ ಹುಟ್ಟುಹಬ್ಬಕ್ಕೆ ಶುಭಕೋರಿ ನೂರ್ಕಾಲ ಬಾಳುವಂತೆ ಹರಸಿ ಹಾರೈಸಿದರು.
ರಾಜರಾಜೇಶ್ವರಿ ನಗರದ ನಿವಾಸದಲ್ಲಿ ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿದೆ. ಕೆಲವರಂತೂ ರಾತ್ರಿಯೇ ತಮ್ಮ ಮೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಕೋರಿದರು.
ಇಂದು ಬೆಳಿಗ್ಗೆಯೂ ಸಹ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ಮತ್ತು ಚಿತ್ರರಂಗದ ಹಲವು ಮಂದಿ ಗಣ್ಯರು ಶುಭಹಾರೈಸಿದರು.
ಆರೇಂಜ್ ಟೀಸರ್:
ಹುಟ್ಟುಹಬ್ಬದ ಅಂಗವಾಗಿ ಗಣೇಶ್ ಅವರ ಹೊಸ ಚಿತ್ರ ’ಆರೆಂಜ್’ ಚಿತ್ರದ ಟೀಸರ್ ಅನಾವರಣ ಮಾಡಲಾಯಿತು. ಅಲ್ಲದೆ ಹೊಸ ಚಿತ್ರ ಗೀತಾ ಚಿತ್ರದ ಟೈಟಲ್ ಕೂಡ ಅನಾವರಣವಾಗಿದೆ.
ಅಭಿಮಾನಕ್ಕೆ ಚಿರಋಣಿ:
ಅಭಿಮಾನಿಗಳ ಪ್ರೀತಿ ಅಭಿಮಾನಕ್ಕೆ ಸದಾ ಚಿರಋಣಿ, ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಗಣೇಶ್ ಹೇಳಿದ್ದಾರೆ.

Leave a Comment