೨೦೨೦ರ ವೇಳೆಗೆ ಲಕ್ಷ ಕಾರ್ನಿಯಾ ಬದಲಾವಣೆ

ಬೆಂಗಳೂರು,ಸೆ.೨-ನಾರಾಯಣ ನೇತ್ರಾಲಯ ಮತ್ತು ಐ ಬ್ಯಾಂಕ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ೩೩ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸುತ್ತಿದ್ದು ೨೦೨೦ರ ವೇಳೆಗೆ ಒಂದು ಲಕ್ಷ ಕಾರ್ನಿಯಾ ಬದಲಾವಣೆಯನ್ನು ಮುಟ್ಟು ಉದ್ದೇಶ ಹೊಂದಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಭುಜಂಗ ಶೆಟ್ಟಿ ಹೇಳಿದ್ದಾರೆ.
“ಭಾರತದಲ್ಲಿ ಐವತ್ತು ಲಕ್ಷ ದೃಷ್ಟಿದೋಷವುಳ್ಳ ಜನರಲ್ಲಿ ಹದಿನೈದು ಲಕ್ಷ ಜನರು ಕಾರ್ನಿಯಾದ ಅಂಧತ್ವದಿಂದ ಬಳಲುತ್ತಿದ್ದಾರೆ. ಈ ಜನರಿಗೆ ದೃಷ್ಟಿ ನೀಡುವುದು ನೇತ್ರದಾನದಿಂದ ಪಡೆಯಲಾದ ಕಾರ್ನಿಯಾ ಬದಲಾವಣೆಯಿಂದ ಮಾತ್ರ ಸಾಧ್ಯ. ಏಕೆಂದರೆ ಮಾನವ ಜೀವಕೋಶಕ್ಕೆ ಯಾವುದೇ ಪರ್ಯಾಯವಿಲ್ಲ. ಪ್ರತಿಯೊಬ್ಬರೂ ಮುಂದೆ ಬಂದು ನಿಮ್ಮ ಕಣ್ಣುಗಳ ದಾನದ ಪ್ರತಿಜ್ಞೆ ಮಾಡಲು ಕೋರುತ್ತೇನೆ, ಮತ್ತು ಮೃತರ ಕುಟುಂಬ ಸದಸ್ಯರಿಗೆ ಮರಣ ಸಂಭವಿಸಿದ ೬ ಗಂಟೆಗಳ ಒಳಗೆ ನೇತ್ರದಾನ ಮಾಡಲು ಮನ ಒಲಿಸಲು ಶ್ರಮಿಸಲು ಕೋರುತ್ತೇನೆ” ಎಂದರು.
ನಗರದಲ್ಲಿ ಹಮ್ಮಿಕೊಂಡಿದ್ದ ಲಕ್ಷ ನೇತ್ರ ದೀಪೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ಎರಡು ನಾರಾಯಣ ನೇತ್ರಾಲಯ ನೇತ್ರ ಬ್ಯಾಂಕ್‌ಗಳು ಅದೇ ಅವಧಿಯಲ್ಲಿ ಕರ್ನಾಟಕದಲ್ಲಿ ಸಂಗ್ರಹಿಸಿದ ಒಟ್ಟು ನೇತ್ರಗಳ ಶೇ.೪೬ರಷ್ಟು ಹೊಂದಿದೆ ಎಂದರು.
ಸೌಥ್ ಝೋನ್ ಅಧ್ಯಕ್ಷ ಎಂ. ಕೆ. ಕೃಷ್ಣ, “ಇದು ಭಾರತದ ಮೊದಲ ಬಹು-ಶಿಸ್ತೀಯ ಸಮ್ಮೇಳನವಾಗಿದ್ದು ಇಡೀ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿತ್ತು, ಏಕೆಂದರೆ ಅದು ಅವರನ್ನು ನೇತ್ರದಾನಕ್ಕೆ ಉತ್ತೇಜಿಸುವ ಉದ್ದೇಶ ಹೊಂದಿತ್ತು. ಸಾಮಾನ್ಯವಾಗಿ ಒಟ್ಟು ಸಂಗ್ರಹವಾದ ಕಣ್ಣುಗಳಲ್ಲಿ ಶೇ.೪೦ರಷ್ಟು ಮಾತ್ರ ಬದಲಾವಣೆಗೆ ಬಳಸಬಲ್ಲವು. ಆದ್ದರಿಂದ ನಮ್ಮ ಗುರಿಯಾದ ಒಂದು ಲಕ್ಷ ನೇತ್ರ ಬದಲಾವಣೆ ತಲುಪಲು ಮೂರು ಲಕ್ಷ ನೇತ್ರಗಳನ್ನು ಸಂಗ್ರಹಿಸಬೇಕಾಗುತ್ತದೆ ಎಂದರು.

Leave a Comment