೧೯೪೭ರಲ್ಲೇ ಮುಸ್ಲಿಂರನ್ನೆಲ್ಲ ಪಾಕ್‌ಗೆ ಅಟ್ಟಬೇಕಾಗಿತ್ತು : ಸಿಂಗ್

ಪಾಟ್ನಾ, ಫೆ.೨೧- ತಮ್ಮ ದ್ವೇಷಾಸೂಯೆ ತುಂಬಿದ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಇದೀಗ ಅದೇ ಧಾಟಿಯಲ್ಲಿ ಮತ್ತೊಂದು ಅಣಿ ಮುತ್ತನ್ನು ಉದ್ದುರಿಸಿದ್ದಾರೆ. ‘೧೯೪೭ರಲ್ಲೇ ಮುಸ್ಲಿಂರನ್ನೆಲ್ಲ ಸಾರಾಸಗಟಾಗಿ ಪಾಕಿಸ್ತಾನಕ್ಕೆ ಅಟ್ಟಬೇಕಾಗಿತ್ತು‘ ಎಂದವರು ಅಪ್ಪಣೆ ನೀಡಿದ್ದಾರೆ!
ಸ್ವದೇಶಕ್ಕೆ ನಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೆ ಇದು ಸಕಾಲ. ೧೯೪೭ಕ್ಕೆ ಮೊದಲು ಮೊಹಮ್ಮದ್ ಅಲಿ ಜಿನ್ನಾ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ವಕಾಲತ್ತು ಮಾಡಿದರು. ಆದರೆ ನಮ್ಮ ಪೂರ್ವಜರು ಮಾಡಿದ ಮಹಾ ಪ್ರಮಾದದ ಪರಿಣಾಮವಾಗಿ ನಾವು ಬೆಲೆ ತೆರಬೇಕಾಗಿದೆ. ಆಗಲೇ ಮುಸ್ಲಿಮ್ ಸಹೋದರರನ್ನು ಅಲ್ಲಿಗೆ ಕಳುಹಿಸಿ ಅಲ್ಲಿಯ ಹಿಂದುಗಳನ್ನು ಇಲ್ಲಿಗೆ ಕರೆಸಿಕೊಂಡಿದ್ದಲ್ಲಿ ಸದ್ಯದ ತಿರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದವರು ವಿಷಾದ ವ್ಯಕ್ತಪಡಿಸಿದ್ದಾರೆ.
ಭರತವಂಶಿಯರಿಗೆ ಇಲ್ಲೇ ಆಶ್ರಯ ದೊರೆಯದೆ ಹೋದಲ್ಲಿ ಅವರೆಲ್ಲ ಇನ್ನೆಲ್ಲಿದೆ ಹೋಗಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಿಹಾರದ ಪೂರ್ಣಿಯಾದಲ್ಲಿ ಪ್ರಶ್ನಿಸಿದ್ದಾರೆ.
೨೦೧೫ಕ್ಕೆ ಮೊದಲು ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಆಘ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶಗಳ ಮುಸ್ಲಿಯೇತರ ನಿರಾಶ್ರಿತರಿಗೆ ನಾಗರಿಕತ್ವದ ಭರವಸೆ ನೀಡುವ ರಾಷ್ಟ್ರೀಯ ಪೌರತ್ವ ಶಾಸನದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇದೇ ಸಂದರ್ಭದಲ್ಲಿ ಕೇಂದ್ರ ಪಶು ಸಂಗೋಪನೆ, ಡೈರಿ ಹಾಗೂ ಮೀನುಗಾರಿಕೆ ಖಾತೆ ಮಂತ್ರಿಗಳು ಈ ಸಂಬಂಧ ಇನ್ನಷ್ಟು ವಿವಾದಕ್ಕೆ ಗ್ರಾಸವಾಗುವ ಹೇಳಿಕೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಪ್ರಸ್ತುತ ಶಾಸನವು ಇದೇ ಮೊದಲ ಬಾರಿಗೆ ಸಂವಿಧಾನದ ಅವಕಾಶಗಳನ್ನು ಉಲ್ಲಂಘಿಸಿ ಭಾರತೀಯ ನಾಗರಿಕತ್ವಕ್ಕೆ ಧರ್ಮವನ್ನೆ ಒಂದು ಅಳತೆ ಗೋಲನ್ನಾಗಿ ಮಾರ್ಪಡಿಸುವುದು. ಇದರಿಂದಾಗಿ ಮುಂದೆ ಜನಗಣತಿ ನಡೆಯುವಾಗ ತಮ್ಮ ಈ ಹಿಂದಿನ ದಾಖಲಾತಿಗಳನ್ನು ಒದಗಿಸಲಾಗದ ಸ್ಥಿತಿಯಲ್ಲಿರುವ ಮುಸ್ಲಿಂರೆಲ್ಲ ಬಲಿಪಶು ಆಗಬಹುದು ಎಂಬ ಆತಂಕ ಈ ಶಾಸನದ ಕಟ್ಟು ಟೀಕಾಕಾರರಿಗೆ.
ನೆರೆಹೊರೆಯ ರಾಷ್ಟ್ರಗಳ ದಮನಕಾರಿ ನೀತಿಗಳ ಫಲವಾಗಿ ನಿತ್ರಾಣಗೊಂಡಿರುವ ಅಸಹಾಯಕರಿಗೆ ನೆರವಾಗುವ ದೃಷ್ಪಿಯಿಂದ ಇಂಥ ಕಾನೂನು ಅವಶ್ಯಕ ಎಂಬುದು ಕೇಂದ್ರ ಸರಕಾರದ ವಾದ.
ಪ್ರದಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಹಿರಿಯ ಸದಸ್ಯರಲ್ಲಿ ಒಬ್ಬರಾಗಿರುವ ಗಿರಿರಾಜ್ ಸಿಂಗ್ ಅವರಿಗೆ ಮುಸ್ಲಿಂರ ಬಗ್ಗೆ ಒಂದು ರೀತಿಯಲ್ಲಿ ಅನಾದರದ ನಿಲುವು.
ಕೇವಲ ಕೆಲವೇ ದಿನಗಳ ಹಿಂದಷ್ಟೆ ಇದೇ ಗಿರಿರಾಜ್ ಸಿಂಗ್ ಅವರು ಉತ್ತರ ಪ್ರದೇಶದ ದೇವ ಬಂದ ಇಸ್ಲಾಮಕ್ ಕೇಂದ್ರ ‘ಅತಂಕವಾದ ಕೀ ಗಂಗೋತ್ರಿ‘ ಎಂದು ಬಣ್ಣಿಸಿದ್ದರು.
ಈ ಹೇಳಿಕೆಯನ್ನು ದಯಪಾಲಿಸಿದ ನಂತರ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಚಿವ ಸಿಂಗ್ ಅವರಿಗೆ ಬರ ಹೇಳಿ ಛೀಮಾರಿ ಹಾಕಿದ್ದರಂತೆ ಆದರೇನಂತೆ ಅಂಥ ಕ್ರಮದಿಂದ ತಮಗೇನೂ ಅಗಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸುವ ರೀತಿಯಲ್ಲಿ ಸಚಿವ ಸಿಂಗ್ ಹೊಸ ವಾದಗ್ರಸ್ತ ಹೇಳಿಕೆಗೆ ಚಾಲನೆ ನೀಡಿದ್ದಾರೆ.
ಎನ್.ಡಿ.ಟಿ.ವಿ.ಸುದ್ದಿ ಸಂಸ್ಥೆ ನಡೆಸಿರುವ ವಿಶ್ಲೇಷಣೆಯ ಪ್ರಕಾರ ರಾಷ್ಟ್ರೀಯ ಪೌರತ್ವ ಶಾಸನ ಜಾರಿಯಾದಾಗಿನಿಂದ ಪ್ರಮುಖ ರಾಜಕೀಯ ನಾಯಕರು ೬೫ ನಿಂದನಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಈ ಪೈಕಿ ೬೧ ಹೇಳಿಕೆಗಳು ಭಾರತೀಯ ಜನತಾ ಪಕ್ಷದ ನಾಯಕರಿಂದಲೇ ಹೊರ ಹೊಮ್ಮಿವೆ.
ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಅವರು ಬಟ್ಟೆಗಳಿಂದಲ್ಲೇ ಗುರುತಿಸಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದರು, ಶಾಹೀನ್ ಬಾಗ್‌ದಲ್ಲಿನ ಪ್ರತಿಭಟನಾಕಾರರಿಗೆ ‘ಎಲೆಕ್ಟ್ರಿಕ್ ಶಾಕ್‘ ನೀಡುವಂತೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕರೆ ನೀಡಿದ್ದರು.
ಕೇಂದ್ರ ಸಚಿವ ಸಂಪುಟದ ಕಿರಿಯ ಮಂತ್ರಿ ಅಣುರಾಗ್ ಠಾಕೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ದೇಶ ದ್ರೋಹಿಗಳನ್ನು ಗುಂಡಿಕ್ಕಿ‘ ಎಂದು ತಮ್ಮ ಬೆಂಬಲಿಗರನ್ನು ಪ್ರಚೋದಿಸಿದ್ದರು.

Leave a Comment