೧೫ ಕೋಟಿ ರೂ. ಮೌಲ್ಯದ ಹೆರಾಯಿನ್ ವಶ

ಫಿರೋಜ್‌ಪುರ (ಪಂಜಾಬ್), ಸೆ. ೭: ಭಾರತ-ಪಾಕ್ ಗಡಿಯಲ್ಲಿ ಇಂದು ಬೆಳಗ್ಗೆ ೧೫ ಕೋಟಿ ರೂ. ಬೆಲೆಬಾಳುವ ೩ ಪೊಟ್ಟಣಗಳಷ್ಟು ಹೆರಾಯಿನ್ ಮಾದಕ ದ್ರವ್ಯವನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಕಳ್ಳಸಾಗಣೆಯಾಗುತ್ತಿದ್ದ ಈ ೩ ಪೊಟ್ಟಣಗಳು ತಲಾ ೧ ಕೆ.ಜಿ. ಇದ್ದು, ಅವನ್ನು ಟೈರಿನ ಟ್ಯೂಬ್ ಒಳಗೆ ಹುದುಗಿಸಿಡಲಾಗಿತ್ತು. ಆ ಟ್ಯೂಬ್‌ಗಳನ್ನು ನೀರಿನೊಳಗೆ ಬೆಳೆಯುವ ಗಂಟೆಹೂಗಳಿಂದ ಮುಚ್ಚಲಾಗಿತ್ತು.
ಸಟ್ಲೇಜ್ ನದಿ ಪ್ರದೇಶದಲ್ಲಿ ದೋಣಿಯ ಮೂಲಕ ಗಸ್ತು ತಿರುಗುತ್ತಿದ್ದ ಗಡಿ ಭದ್ರತಾ ಪಡೆಯ ಸಿಬ್ಬಂದಿ, ಇಂದು ಮುಂಜಾನೆ ೭ ಗಂಟೆ ವೇಳೆಗೆ ಶಮೆಕೆ ಗಡಿ ಹೊರ ಠಾಣೆ ಬಳಿ ದಾಳಿ ನಡೆಸಿ ಹೆರಾಯಿನ್ ವಶಪಡಿಸಿಕೊಂಡರು. ಇದರ ಮಾರುಕಟ್ಟೆ ಮೌಲ್ಯ ೧೫ ಕೋಟಿ ಎಂದು ಅಂದಾಜಿಸಲಾಗಿದೆ.

Leave a Comment