೧೪ ಎಸ್.ಎಂ.೧ ತಾಪಕ್ಕೆ ಎಷ್ಟು ದಿನ ತಾಳಿಯಾವು ಹಿಮನದಿಗಳು

ಜಾಗತಿಕ ತಾಪಮಾನ ಏರಿಕೆಗೆ ಹಿಮ ನದಿಗಳು ಎಷ್ಟು ದಿನ ತಾಳಿಯಾವು ಎಂಬ ಆತಂಕ ವಿಜ್ಞಾನಿಗಳನ್ನು ದಿನದಿಂದ ದಿನಕ್ಕೆ ಹೆಚ್ಚಾಗಿ ಕಾಡಲಾರಂಭಿಸಿವೆ. ತಾಪಮಾನ ಏರಿಕೆ ಹವಾಮಾನದಲ್ಲಿ ಏರುಪೇರಿಗೆ ಹಿಮನದಿಗಳು ಕರಗಲಾರಂಭಿಸಿವೆ ಎಂಬ ವಿಜ್ಞಾನಿಗಳ ಎಚ್ಚರಿಕೆ ಇಂದು ನಿನ್ನೆಯದಲ್ಲ. ಪ್ರತಿ ತಾಪಮಾನ ಕುರಿತ ಶೃಂಗದ ಸಂದರ್ಭದಲ್ಲಿ ವಿಜ್ಞಾನಿಗಳ ಆತಂಕವನ್ನು ಜಾಗತಿಕ ನಾಯಕರು ಪುನರುಚ್ಚರಿಸುತ್ತಾರೆ. ತಾಪಮಾನ ಏರಿಕೆ ತಡೆಗೆ ಕೈಗೊಂಡಿರುವ ನಿರ್ಣಯಗಳ ಜಾರಿ ವಿಷಯದಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿಲ್ಲ ಎನ್ನುವುದಕ್ಕಿಂತ ನಿಯಮಗಳಿಗೆ ಕಟ್ಟುಬೀಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಹಿಂದಿನ ಅಧ್ಯಕ್ಷ ಬರಾಕ್ ಓಬಾಮ ಅವರು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತಾಪಮಾನ ಏರಿಕೆ ತಡೆ ನಿಯಮಗಳಿಗೆ ಬದ್ಧರಾಗಿದ್ದರು. ಆದರೆ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ ಈಗ ಅದನ್ನು ಗಾಳಿಗೆ ತೂರಿದ್ದಾರೆ. ಇದು ಸದ್ಯದ ಒಂದು ಉದಾಹರಣೆ ಅಷ್ಟೇ.
ಅಪಾಯ ಗೊತ್ತಿದೆ
ತಾಪ ಮಾನತೆಯಿಂದ ಜಾಗತಿಕವಾಗಿ ಸಿಹಿ ನೀರಿನ ಸಿಂಹ ಪಾಲನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಹಿಮ ನದಿಗಳು ಕಂಪಿಸಲಾರಂಭಿಸಿದರೆ ಆಗಬಹುದಾದ ಅನಾಹುತ ಅದರ ತಡೆಯುವ ಬಗ್ಗೆ ಹೆಚ್ಚಿನ ಪ್ರಗತಿಯಾಗಿಲ್ಲ ಎಂಬುದು ಆತಂಕವನ್ನು ಹೆಚ್ಚಿಸಿದೆ.
ಭಾರತವನ್ನೇ ತೆಗೆದುಕೊಳ್ಳಿ ಹಿಮಾಲಯದ ೧೫೦೦ ಮೈಲುಗಳ ವ್ಯಾಪ್ತಿಯಲ್ಲಿ ಸಾವಿರಾರು ಹಿಮ ನದಿಗಳಿವೆ. ಇವು ೧೨ ಕಷ್ಟು ಹೆಚ್ಚು ಜೀವ ನದಿಗಳಿಗೆ ಜನ್ಮ ಸ್ಥಾನ ಕೋಟ್ಯಾಂತರ ಜನರಿಗೆ ನೀರುಣಿಸುತ್ತಿವೆ.
ಇಂತಹ ಹಿಮ ನದಿಗಳು ಕರಗುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಉಪಗ್ರಹಗಳ ಮೂಲಕ ಹಿಮಾಲಯದಲ್ಲಿರುವ ೪೬೬ ಹಿಮನದಿಗಳ ಪರಿಶೀಲನೆ ನಡೆಸಿದೆ. ೧೯೬೨ ರಿಂದ ೨೦೦೧ರವರೆಗೆ ಇವುಗಳು ಶೇ.೨೦ ರಷ್ಟು ಕರಗಿಹೋಗಿವೆ.
ದೊಡ್ಡಗಾತ್ರದ ಚಲಿಸುವ ಹಿಮ ಗಡ್ಡೆಗಳೇ ಹಿಮ ನದಿಗಳು ಗ್ಲೇಲ್ಲಿಯರ್‍ಸ್ ಇಲ್ಲಿ ಅನೇಕ ವರ್ಷಗಳ ಕಾಲ ಅಸ್ತಿತ್ಥದಲ್ಲಿ ಇರುತ್ತದೆ. ವಿಶ್ವದಾದ್ಯಂತ ಅನೇಕ ಪರ್ವತ ಶ್ರೇಣಿಗಳಲ್ಲಿ ಮತ್ತು ಕಣಿವೆಗಳಲ್ಲಿ ಇಂತಹ ಹಿಮ ನದಿಗಳನ್ನು ಕಾಣಬಹುದು. ಆಲ್ಫ್ಸ್ ಪರ್ವತ ಶ್ರೇಣಿಯಲ್ಲೇ ೧೨೦೦ ಹಿಮ ನದಿಗಳಿದೆ. ಅಲಸ್ಕಾದ ಉನ್ನತ ಪರ್ವತಗಳಲ್ಲಿ ೨೫ ರಿಂದ ೫೦ ಮೈಲುಗಳಷ್ಟು ಉದ್ದದ ಸಾವಿರಾರು ಹಿಮ ನದಿಗಳಿವೆ. ಹಿಮ ಬಿದ್ದಾಗ, ಇದು ಇಳಿಜಾರು ಪ್ರದೇಶಗಳಲ್ಲಿ ಜಾರಿಕೊಂಡು ಹೋಗುತ್ತದೆ. ಸಾಕಷ್ಟು ಸಮಯದ ಬಳಿಕ ಆ ಬಂಡೆ ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಬೇಸಿಗೆಯಲ್ಲಿ ಕೂಡ ಈ ಬಂಡೆ ಕರಗುವುದಿಲ್ಲ. ಹೀಗಾಗಿ ಅದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಇದರಿಂದ ಅತ್ಯಂತ ಕೆಳ ಪದರದಲ್ಲಿರುವ ಹಿಮದ ಮೇಲೆ ಒತ್ತಡ ಹೆಚ್ಚಾಗುತ್ತ ಹೋಗುತ್ತಿದೆ. ಹೆಚ್ಚುತ್ತಿರುವ ಒತ್ತಡ ಮತ್ತು ವಾತಾವರಣದ ಇತರೆ ಪ್ರಭಾವಗಳಿಂದಾಗಿ ಗಾಳಿ, ಹಿಮದ ಅರೆ ಕೆಳ ಪದರದಿಂದ ತಪ್ಪಿಸಿಕೊಂಡು ಹೋಗುತ್ತದೆ. ಪರಿಣಾಮ ಹಿಮ ತುಂಬ ಗಟ್ಟಿಯಾಗುತ್ತದೆ. ಈ ಕ್ರಿಯೆಎಪ್ಟೋ ಕಾಲದವರೆಗೆ ಮುಂದು ವರೆಯುತ್ತದೆ. ಹೀಗೆ ಹಿಮದ ಭಾರ ಹೆಚ್ಚಾಗುತ್ತ ಹೋದಂತೆ ಅದು ತನ್ನ ಸ್ವಂತ ತೂಕದ ಮೇಲೆ ಹರಿಯಲಾರಂಭಿಸುತ್ತದೆ. ಹಿಮ ಪ್ರದೇಶಗಳಲ್ಲಿ ಮುಖ್ಯವಾಗಿ ಎರಡು ವಿಧ. ಮೊದಲನೆಯದು ಕಣಿವೆ ಹಿಮ ನದಿಗಳು, ಮತ್ತು ಭೂ ಕಂಡ ಹಿಮ ನದಿಗಳು ಎಂಟಿನೆಂಟಲ್ ಗ್ಲೇಷಿಯರ್‍ಸ್.
ಪರ್ವತಗಳ ಮೇಲೆ ಹಿಮ ಬಿದ್ದಾಗ ಅದು ಇಳಿಜಾರಿನಲ್ಲಿ ಹೀರಿಕೊಂಡು ಹೋಗುತ್ತಿದೆ. ಈ ಹಿಮ, ಪರ್ವತದ ನಡುವಣ ಭಾಗದಲ್ಲಿ ಜಾಗಗಳಲ್ಲಿ ಬದಲಾವಣೆಗೊಳ್ಳುತ್ತದೆ. ದೊಡ್ಡ ಪ್ರಮಾಣದಲ್ಲಿ ಹಿಮ ಸಂಗ್ರಹವಾದಾಗ ಅದು ಕೆಳಗೆ ಹಿರಿಕೊಂಡು ಹೋಗುತ್ತದೆ. ಹೀಗೆ ನಿಧಾನವಾಗಿ ಹರಿದು ಕೊಂಡು ಹೋಗುವ ನದಿಯನ್ನು ಕಣಿವೆ ಹಿಮ ನದಿ ಎನ್ನುತ್ತೇವೆ.
ಭೂಕಂಡ ಹಿಮ ನದಿಗಳು ಬಯಲು ಪ್ರದೇಶದಲ್ಲಿ ಸಂಗ್ರಹವಾಗುವಂತಹವು. ಹಿಮ ಸಂಗ್ರಹವಾಗುತ್ತಾ ಒಂದು ಮಿತಿಯನ್ನು ದಾಟಿದಾಗ ಅದು ತಗ್ಗಾಗಿರುವ ಭಾಗದತ್ತ ಜಾರಿಕೊಂಡು ಹೋಗಲಾರಂಭಿಸುತ್ತದೆ. ಹೀಗೆ ಜಾರುತ್ತ ಹೋಗುವ ಹಿಮದಾಳಿಗಳನ್ನು ಭೂಕಂಡ ಹಿಮ ನದಿಗಳು ಎನ್ನುತ್ತೇವೆ.
-ಉತ್ತನೂರು ವೆಂಕಟೇಶ್

Leave a Comment