೧೨ ದೇಶಗಳು ಹತ್ತು ಹಲವು ವಿಚಿತ್ರಗಳು

ಸ್ವಿಡ್ಜರ್ ಲ್ಯಾಂಡ್

ವಿಶ್ವದಲ್ಲೇ ಮುಂದುವರಿದ ರಾಷ್ಟ್ರಗಳಲ್ಲಿ ಸ್ವಿಡ್ಜರ್ಲೆಂಡ್ ಕೂಡ ಒಂದು. ಈ ದೇಶವು ಯಾವುದೇ ರಾಜಧಾನಿಯನ್ನು ಹೊಂದಿಲ್ಲವಂತೆ.

ಈ ದೇಶದ ಜನರು ಅತಿ ಹೆಚ್ಚು ಚಾಕಲೇಟ್ಗಳನ್ನು ತಿನ್ನುತ್ತಾರೆ ಮತ್ತು ಬೇರೆ ದೇಶಗಳಿಗೆ ಹೆಚ್ಚಾಗಿ ಚಾಕಲೇಟ್ ಗಳನ್ನು ರಫ್ತು ಮಾಡುತ್ತಾರಂತೆ. ವರ್ಷಕ್ಕೆ ಒಬ್ಬ ಸ್ವಿಡ್ಜ್ ಪ್ರಜೆ ಹನ್ನೆರಡು ಕೆಜಿ ಚಾಕೋಲೇಟ್ ಗಳನ್ನು ತಿನ್ನುತ್ತಾನಂತೆ. ಸಂಸತ್ತಿನಲ್ಲಿ ಅಂಗೀಕಾರವಾದ ಯಾವುದೇ ಮಸೂದೆಗಳನ್ನು ಅಲ್ಲಿನ ಪ್ರಜೆಗಳು ಪ್ರಶ್ನಿಸಬಹುದಂತೆ ಅದು ಅಲ್ಲಿನ ಸರ್ಕಾರ ಆ ಪ್ರಜೆಗಳಿಗೆ ನೀಡಿರುವ ಹಕ್ಕು. ವಿಶ್ವದಲ್ಲೇ ಯಾವ ಪ್ರಜಾಪ್ರಭುತ್ವ ರಾಷ್ಟ್ರ ಪ್ರಜೆಗಳಿಗೆ ಈ ಹಕ್ಕನ್ನು ನೀಡಿಲ್ಲ. ೧೮೧೫ ರಿಂದ ಈ ದೇಶವು ಯಾವುದೇ ಯುದ್ಧದಲ್ಲಿ ಭಾಗವಹಿಸಿಲ್ಲವಂತೆ.

ಇದು ಒಂದು ಶಾಂತಿಪ್ರಿಯ ರಾಷ್ಟ್ರವೆಂದೇ ಹೇಳಬಹುದು. ಇಲ್ಲಿನ ಪುರುಷರಿಗೆ ಮಿಲ್ಟ್ರಿ ಸೇವೆ ಕಡ್ಡಾಯ. ಈ ದೇಶದಲ್ಲಿ ಒಟ್ಟು ಎಂಬತ್ತೈದು ಲಕ್ಷ ಜನಸಂಖ್ಯೆ ಇದ್ದು ಸುಮಾರು ಅರ್ಧದಷ್ಟು ಜನ ಬಂದೂಕನ್ನು ಹೊಂದಿದ್ದಾರೆ.  ನಾಯಿಯನ್ನು ಸಾಕಲು ತೆರಿಗೆ ಕಟ್ಟಬೇಕಂತೆ ಅಂದರೆ ನಾಯಿಗಳ ತೂಕದ ಆಧಾರದ ಮೇಲೆ ವಾರ್ಷಿಕ ತೆರಿಗೆ ನಿರ್ಧಾರವಾಗುತ್ತದೆ. ವಿಶ್ವದಲ್ಲಿರುವ ಅರ್ಧದಷ್ಟು ವಾಚ್ ಗಳು ತಯಾರಾಗುವುದು ಸ್ವಿಟ್ಜರ್ಲೆಂಡ್ ನಲ್ಲಿ. ಸ್ವೀಟ್ ನಾಗರಿಕನಾಗಲು ಕನಿಷ್ಠ ಹನ್ನೆರಡು ವರ್ಷ ಆ ದೇಶದಲ್ಲಿ ವಾಸವಾಗಿರಬೇಕು.

ಒಂದು ಇದ್ದಂತೆ ಇನ್ನೊಂದಿಲ್ಲ; ಒಬ್ಬರು ಇದ್ದಂತೆ ಇನ್ನೊಬ್ಬರಿಲ್ಲ! ಅಬ್ಬಾ! ಈ ಜೀವ ಜಗತ್ತು ಅದೆಷ್ಟು ವೈವಿಧ್ಯಮಯ!? ತಲೆ ತಲಾಂತರಗಳಿಂದ ಮನುಷ್ಯ ರೂಢಿಸಿಕೊಂಡು ಬಂದಿರುವ ಬದುಕು; ಆಚರಣೆ, ಪದ್ಧತಿ, ರೂಢಿಗಳಂತೂ ಅನೇಕಾನೇಕ ಇವೆ; ಹತ್ತು ಹಲವು ಸಹಜವೆನಿಸಿದರೆ; ಅದೇ ಸಹಜ ಪ್ರಕ್ರಿಯೆಗಳು ಮತ್ತೊಂದೆಡೆ ವಿಚಿತ್ರವಾಗಿ ತೋರುತ್ತವೆ. ‘ಓ! ಹೌದಾ!? ಅಲ್ಲಿ ಹಾಗಾ- ಇಲ್ಲಿ ಹೀಗಾ…’! ಎಂಬಂತಹ ಉದ್ಗಾರಗಳು ನಮ್ಮಲ್ಲೇ ಆಗಾಗ ಕೇಳಿಬರುತ್ತವೆ. ಅಂತಹ ಉದ್ಗಾರಗೈಯ್ಯುವ ಜಗತ್ತಿನ ೧೨ ದೇಶಗಳ ಹತ್ತು ಹಲವು ಚಿತ್ರ-ವಿಚಿತ್ರವಾದ ಪ್ರಸಂಗಗಳನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ. ನೀವು ಓದಿ ‘ಓಹ್…!’ ಎಂದರೆ ನಮ್ಮ ಶ್ರಮ ಸಾರ್ಥಕ.            

-ಸಂಪಾದಕರು.

japan

ಜಪಾನ್

ಸದಾ ಪ್ರಕೃತಿ ವಿಕೋಪಕ್ಕೆ ಗುರಿಯಾಗಿದ್ದರೂ ವಿಶ್ವದಲ್ಲಿ ೪ನೇ ಶ್ರೀಮಂತ ದೇಶ ಎನಿಸಿಕೊಂಡಿದೆ ಜಪಾನ್. ಅಣು ಬಾಂಬ್ ಗೆ ಒಳಗಾಗಿದ್ದರು ತನ್ನ ಪರಿಶ್ರಮದಿಂದ ಜಗತ್ತೆ ಬೆರಗಾಗುವಂತೆ ಬೆಳೆದು ನಿಂತಿದೆ. ಶೇ ೭೫ ರಷ್ಟು ಬೆಟ್ಟಗಳಿಂದ ಕೂಡಿದ್ದು ಶೇ ೨೫ ರಷ್ಟು ಭೂಭಾಗದಲ್ಲಿ ಮಾತ್ರ ವಾಸಿಸುತ್ತಿದ್ದಾರೆ. ಪ್ರತಿವರ್ಷಕ್ಕೆ ೧೫೦೦ ಭೂಕಂಪಗಳು ಸಂಭವಿಸುತ್ತವೆಯಂತೆ ದಿನಕ್ಕೆ ಸರಾಸರಿ ೪ ಎನ್ನಬಹುದು. ಪ್ರಪಂಚದ ಬೇರೆಲ್ಲಾ ದೇಶಗಳಿಗೆ ಹೋಲಿಸಿದರೆ ಜಪಾನೀಯರು ಹೆಚ್ಚು ಜೀವಿತಾವಧಿ ಹೊಂದಿದ್ದಾರೆ ಮತ್ತು ೧೦೦ ವರ್ಷಕ್ಕೂ ಮೇಲ್ಪಟ್ಟಿರುವವರು ೫೦,೦೦೦ ಕ್ಕೂ ಅಧಿಕ ಜನರಿದ್ದಾರಂತೆ. ಉಳಿದವರು ಸುಮಾರು ೮೦ ವರ್ಷಗಳವರೆಗೂ ಬದುಕಿರುತ್ತಾರಂತೆ.

ಈ ದೇಶದಲ್ಲಿ ಶಾಲಾ ಮಕ್ಕಳಿಗೆ ೧೦ ವರ್ಷಗಳು ತುಂಬುವರೆಗೂ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ದಿನಪತ್ರಿಕೆಗಳಲ್ಲಿ ಕ್ರೈಂ, ರಾಜಕೀಯ,ದುರ್ಘಟನೆ ಮತ್ತಾವುದೇ ಮಸಾಲ ಸುದ್ದಿಯನ್ನು ಮುದ್ರಿಸುವಂತಿಲ್ಲ ಕೇವಲ ಆಧುನಿಕ ಮತ್ತು ಅತಿಮುಖ್ಯ ವಿಚಾರಗಳನಷ್ಟೆ ಮುದ್ರಿಸಬೇಕೆಂಬ ನಿಯಮಗಳಿವೆಯಂತೆ. ಇಲ್ಲಿನ ಜನರು ಶ್ರಮಜೀವಿಗಳು ಸಮಯಕ್ಕೆ ತುಂಬಾ ಬೆಲೆ ಕೊಡುತ್ತಾರೆ ಅಷ್ಟೆ ಅಲ್ಲದೆ ರೈಲುಗಳು ಸಹ ನಿಗಧಿತ ಸಮಯಕ್ಕೆ ಸರಿಯಾಗಿ ಹಾಜರಿರುತ್ತಂತೆ.

ನಮ್ಮ ದೇಶದಲ್ಲಿ ವಸ್ತುಗಳನ್ನು ಕೊಳ್ಳಲು ಅಂಗಡಿಗಳಿಗೆ ಹೋಗುತ್ತೇವೆ ಆದರೆ ಈ ದೇಶದಲ್ಲಿ ಪ್ರತಿ ರಸ್ತೆ ಅಂಚಿನಲ್ಲೂ ಎಟಿಎಂ ನಂತಹ ವೆಂಡಿಗ್ ಮಿಷನ್ ಗಳಿರುತ್ತವೆ ಇದರಲ್ಲಿ ಬೇಕಾದ ವಸ್ತುಗಳನ್ನು ಡ್ರಾ ಮಾಡಿಕೊಳ್ಳಬಹುದಂತೆ ಆಶ್ಚರ್ಯವೆಂದರೆ ಬಿಯರ್, ಸಿಗರೆಟ್, ಕಾಂಡೂಮ್ ನಂತಹ ವಸ್ತುಗಳು ಸಿಗುತ್ತವೆಯಂತೆ. ಈ ದೇಶದಲ್ಲೊಂದು ವಿಚಿತ್ರ ಹಬ್ಬದ ಆಚರಣೆ ಮಾಡುತ್ತಾರೆ ಹೆಚ್.ಐ.ವಿ ಕುರಿತು ಅರಿವು ಮೂಡಿಸಲು ಪುರುಷರ ಜನನಾಂಗದ ರೂಪದ ಮೂರ್ತಿ ರಚಿಸ ರಸ್ತೆಗಳಲ್ಲಿ ಮೆರವಣಿ ಹೋಗಿ ಜನರಲ್ಲಿ ಅರಿವು ಮೂಡಿಸುತ್ತಾರಂತೆ.

ಜಪಾನೀಯರು ಹಸಿ ಕುದುರೆ ಮಾಂಸವನ್ನು ತಿನ್ನುತ್ತಾರಂತೆ ಕಾರಣ ಬೇರೆ ಮಾಂಸಗಳಿಗೆ ಹೋಲಿಸಿದರೆ ಕುದುರೆ ಮಾಂಸದಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿವಂತೆ ಆದ್ದರಿಂದ ಆರೋಗ್ಯಕರ ತಿನಿಸು ಎಂದು ತಿನ್ನುತ್ತಾರಂತೆ. ಈ ದೇಶದಲ್ಲಿ ಹೆಚ್ಚಿನವರು ಆತ್ಮಹತ್ಯೆಗೆ ಶರಣಾಗಿದ್ದಾರಂತೆ. ನಮ್ಮ ದೇಶದಲ್ಲಿ ವಕ್ರ ಹಲ್ಲುಗಳಿದ್ದರೆ ಅದನ್ನು ತೆಗಿಸಿಬಿಡುತ್ತೇವೆ ಆದರೆ ಜಪಾನ್ ನಲ್ಲಿ ವಕ್ರ ಹಲ್ಲುಗಳಿರುವ ಹುಡುಗಿಯರು ಅತಿ ಸುಂದರಿಯರಂತೆ ಆದ್ದರಿಂದ ಅದೆಷ್ಟೊ ಹುಡುಗಿಯರು ಹಲ್ಲುಗಳನ್ನು ವಕ್ರವಾಗಿ ಮಾರ್ಪಡಿಸುತ್ತಾರಂತೆ.

dubai1

ದುಬೈ

ಜಗತ್ತಿನಲ್ಲಿ ಅತಿ ಎತ್ತರದ ಕಟ್ಟಡಗಳನ್ನು ಹೊಂದಿರುವ ಅರಬ್ ರಾಷ್ಟ್ರ. ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ದುಬೈಯನ್ನು ಇಂದಿಗೂ ಆರು ರಾಜ ಮನೆತನಗಳು ಆಳುತ್ತಿವೆ. ಕೇವಲ ೧೫% ಜನರು ಮಾತ್ರ ಮೂಲತಹ ದುಬೈನವರು ಇನ್ನುಳಿದವರು ವಲಸಿಗರು. ಈ ದೇಶ ಅತ್ಯಂತ ಸ್ವಚ್ಛ ಮತ್ತು ಸುಂದರ. ಇಲ್ಲಿ ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಹಲವಾರು ಕಾನೂನುಗಳನ್ನು ಜಾರಿಗೊಳಿಸಿದೆ. ನಮ್ಮ ದೇಶದಲ್ಲಿ ನಾವು ಕಸವನ್ನು ಎಲ್ಲೆಂದರಲ್ಲಿ ಬಿಸಾಡುವಂತೆ ಈ ದೇಶದಲ್ಲಿ ಮಾಡಿದರೆ ಉಲ್ಲಂಘಕರಿಗೆ ದಂಡ ವಿಧಿಸಲಾಗುತ್ತದೆ. ತ್ಯಾಜ್ಯ ವಸ್ತು ಮತ್ತು ನೀರನ್ನು ತೆರೆದ ಸ್ಥಳಗಳಲ್ಲಿ ಹಾಕುವಂತಿಲ್ಲ ಒಂದು ವೇಳೆ ಯಾರಾದರೂ ಮಾಡಿದಲ್ಲಿ ಅವರಿಗೆ ಬರೋಬ್ಬರಿ ಒಂದು ಲಕ್ಷ ದಿರ್ಹಮ್ ದಂಡ ವಿಧಿಸಲಾಗುವುದು ( ಒಂದು ದಿರ್ಹಮ್ ಎಂದರೆ ೧೯ ರೂ) ಇದು ಅತಿ ಹೆಚ್ಚಿನ ದಂಡವೆಂದೆ ಹೇಳಬಹುದು.

ದುಬೈ ಪೊಲೀಸರು ಬಳಸ್ತಾರೆ ಅತ್ಯಂತ  ಸೂಪರ್ ದುಬಾರಿ ಕಾರ್ ಗಳನ್ನ ಇವು ಘಂಟೆಗೆ ೪೦೦ ಕಿ.ಮಿ ಚಲಿಸುವಷ್ಟು ಸಾಮರ್ಥ್ಯ ಹೊಂದಿರುತ್ತವೆ. ಪ್ರಪಂಚದಲ್ಲಿ ದುಬಾರಿ ಕಾರ್ಗಳನ್ನ ಬಳಸುವ ಪೋಲಿಸರು ಇಲ್ಲೆ ಇರುವುದು. ಇವರ ಈ ಸೌಕರ್ಯಗಳನ್ನು ಅಲ್ಲಿನ ಸರ್ಕಾರವೆ ವಹಿಸಿರುತ್ತದೆ. ಇಲ್ಲಿ ಮುಸ್ಲಿಂಮರಿಗೆ ಮದ್ಯಪಾನ ನಿಷೇಧ ಅವರು ಮದ್ಯಪಾನ ಸೇವಿಸುವಂತಿಲ್ಲ, ಬೇರೆಯವರು ಮದ್ಯಪಾನ ಸೇವಿಸಬೇಕೆಂದರೆ ಅದಕ್ಕಾಗೆ ಲೈಸೆನ್ಸ್ ಹೊಂದಬೇಕು ಅಂತಹವರು ಮಾತ್ರ ಮದ್ಯಪಾನ ಸೇವಿಸಬಹುದು. ಇಲ್ಲಿ ಕಾನೂನು ತುಂಬಾ ಕಠಿಣವಾಗಿರುವುದರಿಂದ ೦% ಕ್ರೈಂ ಇದೆಯಂತೆ.

dubai

ನಮ್ಮ ದೇಶದಲ್ಲಿ ನಾವು ದುಡ್ಡನ್ನ ಎಟಿಎಂ ಗಳಲ್ಲಿ ಡ್ರಾ ಮಾಡುವಂತೆ ದುಬೈನ ಎಟಿಎಂ ಗಳಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಡ್ರಾ ಮಾಡಬಹುದಂತೆ. ಅತಿ ಹೆಚ್ಚು ಚಿನ್ನ ತಯಾರಿ ಮಾಡುವುದರಿಂದ ಚಿನ್ನದ ನಗರಿ ಎಂದು ಕರೆಯುತ್ತಾರೆ. ಈ ದೇಶದಲ್ಲಿ ಗಲ್ಲಿ ಗಲ್ಲಿಯಲ್ಲೂ ಚಿನ್ನದ ಅಂಗಡಿಗಳು ಇರುತ್ತವೆಯಂತೆ ಇಲ್ಲಿ ಚಿನ್ನವನ್ನ ಕಡಿಮೆ ಬೆಲೆಗೆ ಖರೀದಿಸಬಹುದು. ಇಲ್ಲಿನ ಕೆಲವು ದುಬಾರಿ ಹೋಟೆಲ್ ನಲ್ಲಿ ಕಿಟಕಿ ಅಂಚುಗಳನ್ನು ಸಹ ಚಿನ್ನದ ಲೇಪನದಿಂದ ಅಲಂಕರಿಸಿದ್ದಾರಂತೆ. ಶ್ರೀಮಂತರ ಮನೆಗಳಲ್ಲಿ ಶೌಚಾಲಯವು ಸಹ ಚಿನ್ನದಿಂದಲೆ ಮಾಡಲ್ಪಟ್ಟಿದೆಯಂತೆ.

೨೦೧೫ ತನಕ ಪಿನ್ ಕೋಡ್ ಮತ್ತು ಮನೆಗಳಿಗೆ ಯಾವುದೇ ವಿಳಾಸಗಳು ಇರಲಿಲ್ಲವಂತೆ. ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್ ಇರುವುದು ಇಲ್ಲೆ. ನಾವೆಲ್ಲ ನಾಯಿ,ಬೆಕ್ಕುಗಳನ್ನ ಸಾಕುವಂತೆ ಈ ದೇಶದಲ್ಲಿ ಹುಲಿ,ಸಿಂಹ,ಚಿರತೆಗಳನ್ನು ಮನೆಗಳಲ್ಲಿ ಸಾಕುತ್ತಾರಂತೆ.

ಈ ದೇಶದ ಮತ್ತೊಂದು ಅದ್ಬುತವೆಂದರೆ ತಿರುಗುವ ಕಟ್ಟಡ ನಿರ್ಮಾಣವಾಗುತ್ತಿರುವುದು ಇದು ೨೦೨೦ ಪೂರ್ಣಗೊಳ್ಳುವುದಂತೆ ಆಗ ಜಗತ್ತಿನಲ್ಲೆ ತಿರುಗುವ ಕಟ್ಟಡ ಕಟ್ಟಿದ ಸಾದನೆ ಈ ದೇಶಕ್ಕೆ ಸಲ್ಲುವುದು. ಇಲ್ಲಿ ಮೈ ಕಾಣುವಂತೆ ಉಡುಪುಗಳನ್ನು ತೊಡುವಂತಿಲ್ಲ ಅದು ನಿಪೇಧ.

ಶ್ರೀಮತಿ ಶ್ವೇತ ರವಿಕುಮಾರ್

Leave a Comment