ಹೋಳಿ ಹಬ್ಬ- ಕಣ್ಣುಗಳ ರಕ್ಷಣೆ ಹೇಗೆ?

 

ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲೆಡೆ ಹೋಳಿಯ ಸಂಭ್ರಮ-ಸಡಗರದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸಂಭ್ರಮದ ಆಚರಣೆ ವೇಳೆ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಕ್ತವಾದ ಕ್ರಮಗಳನ್ನು ಅನುಸರಿಸಬೇಕು. ನಮ್ಮಲ್ಲಿ ಬಹುತೇಕ ಜನರು ಬಣ್ಣವನ್ನು ಮತ್ತೊಬ್ಬರಿಗೆ ಎರಚುವುದರಿಂದ ಎಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದರ ಬಗ್ಗೆ ಅರಿವಿಲ್ಲದೇ ಸಂಭ್ರಮದಲ್ಲಿ ತೊಡಗುತ್ತೇವೆ. ಈ ಹಬ್ಬದ ಆಚರಣೆ ವೇಳೆ ಕಣ್ಣಿನ ಆರೈಕೆ ವಿಚಾರಕ್ಕೆ ಬಂದರೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ತರಕಾರಿಗಳು ಮತ್ತು ಹೂವುಗಳಿಂದ ಬಣ್ಣಗಳನ್ನು ತಯಾರಿಸಲಾಗುತ್ತಿಲ್ಲ. ಮತ್ತೊಂದೆಡೆ, ಕಣ್ಣಿನ ದೃಷ್ಟಿಗೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವಂತಹ ಸಿಂಥೆಟಿಕ್ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತಿದೆ. ಹೋಳಿ ಆಟವಾಡುವ ವೇಳೆ ನಿಮ್ಮ ಕಣ್ಣುಗಳ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಕಣ್ಣುಗಳಲ್ಲಿ ಕಿರಿಕಿರಿ ಮತ್ತು/ಅಥವಾ ಅಲರ್ಜಿ, ಸೋಂಕು ಹಾಗೂ ತಾತ್ಕಾಲಿಕವಾಗಿ ಅಂಧತ್ವ ಉಂಟಾಗುವ ಸಾಧ್ಯತೆಗಳಿವೆ.

h2

ಲೇಯರ್ ಅಪ್!!
ಕಣ್ಣಿನ ಸುತ್ತ ಇರುವ ಚರ್ಮವು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹೋಳಿ ಆಡುವ ಮುನ್ನ ಈ ಸೂಕ್ಷ್ಮ ಜಾಗದಲ್ಲಿ ಮೃದುವಾಗಿ ತೆಂಗಿನ ಎಣ್ಣೆ ಅಥವಾ ಆಲ್ಮಂಡ್ ಆಯಿಲ್ ಅನ್ನು ಹಚ್ಚಿಕೊಳ್ಳಿ.
ಕನ್ನಡಕಗಳನ್ನು ಧರಿಸಿ!!
ಕನ್ನಡಕ ಧರಿಸುವುದರಿಂದ ನಿಮಗೆ ಕೂಲ್ ಲುಕ್ ನೀಡುವುದಲ್ಲದೇ, ನಿಮ್ಮ ಕಣ್ಣುಗಳಿಗೆ ರಕ್ಷಣೆಯನ್ನೂ ನೀಡುತ್ತವೆ.
ತೊಳೆಯಿರಿ!!
ಒಂದು ವೇಳೆ ಬಣ್ಣವು ಆಕಸ್ಮಿಕವಾಗಿ ನಿಮ್ಮ ಕಣ್ಣಿನ ಒಳಗೆ ಹೋದರೆ- ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ, ನಿಧಾನವಾಗಿ ಮುಖವನ್ನು ತೊಳೆಯಿರಿ ಮತ್ತು ಕಣ್ಣುಗಳನ್ನು ತೆರೆಯಲು ಪ್ರಯತ್ನಿಸಿ ಹಾಗೂ ನಿಮ್ಮ ಬೊಗಸೆಯಲ್ಲಿ ನೀರನ್ನಿಟ್ಟುಕೊಂಡು ಅದರೊಳಗೆ ಕಣ್ಣುಗಳ ರೆಪ್ಪೆಗಳನ್ನು ತೆರೆದು ಮುಚ್ಚಲು ಪ್ರಯತ್ನಿಸಿ. ನಿಮ್ಮ ಕಣ್ಣಿನೊಳಗೆ ನೀರನ್ನು ಚಿಮುಕಿಸಬೇಡಿ. ಏಕೆಂದರೆ, ಅದು ಗಂಭೀರ ಸ್ವರೂಪದಲ್ಲಿ ಗಾಯಗೊಳ್ಳುವ ಸಾಧ್ಯತೆ ಇರುತ್ತದೆ.
ವೈದ್ಯರ ಬಳಿಗೆ ಹೋಗಿ!!!
ಬಣ್ಣದ ಪ್ರವೇಶದಿಂದ ಕಣ್ಣುಗಳು ಕೆಂಪಾಗಿದ್ದರೆ, ನೀರು ಸೋರುತ್ತಿದ್ದರೆ, ಕಿರಿಕಿರಿ, ಅಸ್ವಸ್ಥತೆ, ಆಘಾತ, ರಕ್ತಸ್ರಾವವಾಗುವುದು ಕಂಡು ಬಂದರೆ ಕೂಡಲೇ ಕಣ್ಣಿನ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ವದಂತಿಗಳಿಗೆ ಕಿವಿಗೊಡಬೇಡಿ!!
ಕಣ್ಣುಗಳ ಸುತ್ತಮುತ್ತಲಿನ ಭಾಗಗಳಿಗೆ ಬಣ್ಣ ಹೋಗುವುದನ್ನು ತಪ್ಪಿಸಲು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಅನುಕೂಲವಾಗುತ್ತದೆ. ಒಂದು ವೇಳೆ, ಬಣ್ಣ ನಿಮ್ಮ ಮುಖದ ಮೇಲೆ ಬೀಳುತ್ತಿದ್ದಂತೆಯೇ ನಿಮ್ಮ ಕಣ್ಣುಗಳು ಮತ್ತು ತುಟಿಯನ್ನು ಬಿಗಿಯಾಗಿ ಮುಚ್ಚಿಕೊಳ್ಳಿ. ಈ ಮೂಲಕ ಸಾಧ್ಯವಾದಷ್ಟೂ ಬಣ್ಣ ನಿಮ್ಮ ಕಣ್ಣು ಮತ್ತು ಬಾಯಿಯನ್ನು ಪ್ರವೇಶಿಸುವುದು ನಿಯಂತ್ರಣವಾಗುತ್ತದೆ.

h1

ಇದನ್ನು ಮಾಡಬೇಡಿ
ಬಣ್ಣ ನಿಮ್ಮ ಕಣ್ಣುಗಳ ಒಳಗೆ ಹೋದಾಗ ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜಬೇಡಿ. ಏಕೆಂದರೆ, ಇದರಿಂದ ಕಣ್ಣಿನಲ್ಲಿ ಉರಿ, ಕಿರಿಕಿರಿ ಉಂಟಾಗುವುದಲ್ಲದೇ, ಕಣ್ಣುಗಳಿಗೆ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ.
ವಾಟರ್ ಬಲೂನ್‌ಗಳನ್ನು ಬಳಸಬೇಡಿ. ಇವುಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ ಮತ್ತು ಕಣ್ಣಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ರಕ್ತಸ್ರಾವ, ಲೆನ್ಸ್ ಸಬ್ಲಕೇಶನ್ ಅಥವಾ ಲೆನ್ಸ್ ಅಸ್ತವ್ಯಸ್ತವಾಗುವುದು, ರೆಟಿನಾದ ಬೇರ್ಪಡುವಿಕೆ ಉಂಟಾಗಲು ಕಾರಣವಾಗುತ್ತವೆ. ಇದರ ಪರಿಣಾಮ ದೃಷ್ಟಿ ಕಳೆದುಕೊಳ್ಳಬಹುದು ಅಥವಾ ಕಣ್ಣನ್ನೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಬಣ್ಣ ಕಣ್ಣಿನ ಒಳಗೆ ಹೋದ ಸಂದರ್ಭದಲ್ಲಿ ಕರ್ಚೀಫ್ ಅಥವಾ ಟಿಶ್ಯೂವಿನಿಂದ ಬಣ್ಣದ ಅಂಶವನ್ನು ಹೊರ ತೆಗೆಯಲು ಪ್ರಯತ್ನಿಸಬೇಡಿ; ಹೀಗೆ ಮಾಡಿದರೆ ಪರಿಸ್ಥಿತಿಯನ್ನು ಗಂಭೀರಗೊಳಿಸುತ್ತದೆ.
ಬಣ್ಣವನ್ನು ಎರಚುವ ಸಂದರ್ಭದಲ್ಲಿ ಕನ್ನಡಕ ಧರಿಸಿರುವವರು ತುಂಬಾ ಮುನ್ನೆಚ್ಚರಿಕೆಯನ್ನು ವಹಿಸಬೇಕು. ಬಣ್ಣ ಹಾಕುವ ಮುನ್ನ ಆ ವ್ಯಕ್ತಿಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದೇ ಬಣ್ಣ ಹಾಕಿದರೆ ಆ ವ್ಯಕ್ತಿಯನ್ನು ಆತನ ಕನ್ನಡಕದೊಂದಿಗೆ ನೋಯಿಸಿದಂತಾಗುತ್ತದೆ ಎಂದು ಡಾ.ಅಗರ್‌ವಾಲ್ಸ್ ಐ ಹಾಸ್ಪಿಟಲ್‌ನ ಡಾ.ರಾಮ್ ಮಿರ್ಲೆ ತಿಳಿಸಿದ್ದಾರೆ.
ಹೋಳಿ ಸಂದರ್ಭದಲ್ಲಿ ಕನ್ನಡಕ ಧರಿಸಿರುವ ವ್ಯಕ್ತಿಗಳು ಹಲವಾರು ಸಮಸ್ಯೆಗಳಿಗೆ ಸಿಲುಕುತ್ತಾರೆ. ಅವರು ಕನ್ನಡಕ ಧರಿಸಿದ್ದಾಗ್ಯೂ, ಕನ್ನಡಕದ ಫ್ರೇಂನ ಸೂಕ್ಷ್ಮ ಪ್ರದೇಶದಲ್ಲಿ ಬಣ್ಣದ ಅಂಶಗಳು ಸೇರಿಕೊಳ್ಳುತ್ತವೆ. ರಿಮ್ ಇಲ್ಲದ ಕನ್ನಡಕಗಳನ್ನು ಧರಿಸಿ ಹೋಳಿ ಆಟದಲ್ಲಿ ಭಾಗಿಯಾದರೆ ಕನ್ನಡಕ ಮುರಿಯುವ ಸಾಧ್ಯತೆಗಳಿವೆ.
ಹೋಳಿ ಸಂದರ್ಭದಲ್ಲಿ ನಿಮ್ಮ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಹೊರತೆಗೆದಿಡಿ. ಇಲ್ಲವಾದರೆ, ಇದು ನೀರನ್ನು ಹೀರಿಕೊಳ್ಳುವ ವಸ್ತುವಾಗಿರುವುದರಿಂದ, ಕಾಂಟ್ಯಾಕ್ಟ್ ಲೆನ್ಸ್‌ಗಳು ಬಣ್ಣದ ನೀರು ಕಣ್ಣಿನೊಳಗೆ ಹೋಗಿ ಲೆನ್ಸ್ ಅನ್ನು ಸೇರಿಕೊಳ್ಳುವುದರಿಂದ ಅಲರ್ಜಿಯಂತಹ ಹೆಚ್ಚು ಹಾನಿ ಮತ್ತು ಅಪಾಯಕ್ಕೆ ಕಾರಣವಾಗುತ್ತದೆ.

Leave a Comment