ಹೋಳಿ ಆಚರಣೆಯಲ್ಲಿ ಸಂಭ್ರಮಿಸಿದ ಪಿಗ್ಗಿ-ನಿಕ್

ಹಬ್ಬಗಳೆಂದರೆ ಸಾಕು ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಹಾಲಿವುಡ್‌ ಸಿಂಗರ್‌ ಸಿಕ್‌ ಜೋನಾಸ್‌ ಅವರು ಸಕತ್‌ಗೆ ಸಂಭ್ರಮಿಸುತ್ತಾರೆ. ಇದೀಗ ಹೋಳಿ ಸಂಭ್ರಮಾಚರಣೆಯಲ್ಲಿ ಇಬ್ಬರು ಮಿಂದೆದಿದ್ದಾರೆ. ಜಾಲತಾಣದಲ್ಲಿ ಪಿಗ್ಗಿ-ನಿಕ್‌ ಪೋಟೋ ವೈರಲ್‌ ಆಗಿದೆ. ಕಲರ್‌ ಪುಲ್‌ ಜೋಡಿ ಸಕತ್‌ ಹಾಟ್‌ಗೆ ಕಾಣಿಸಿಕೊಂಡಿದೆ.

 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಭಾರತದ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ಹಾಗೂ ಗಾಯಕ ನಿಕ್ ಜೋನಾಸ್ ಅವರೊಡನೆ ಪ್ರಥಮ ಬಾರಿಗೆ ಭಾರತದಲ್ಲಿ ಹೋಳಿ ಹಬ್ಬ ಆಚರಿಸಿದ್ದಾರೆ.

ಪುಣೆಯಲ್ಲಿ ರಜೆಯ ಅನುಭವ ಪಡೆಯುತ್ತಿರುವ ದಂಪತಿ ಮೊದಲು ಪರಿವಾರದ ಸದಸ್ಯರೊಡನೆ ವೀಕೆಂಡ್ ಕಳೆದಿದ್ದಾರೆ. ತದನಂತರ ಹೋಳಿ ಹಬ್ಬ ಆಡಿದ್ದು ಬಣ್ಣದಲ್ಲಿ ಮಿಂದ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಿಕ್ ಅವರ ಭಾರತದಲ್ಲಿನ ಪ್ರಥಮ ಹೋಳಿ ಬಗ್ಗೆ ಬರೆದಿರುವ ಪ್ರಿಯಾಂಕಾ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭ ಕೋರಿದ್ದಾರೆ. ಅವರ ಹೋಳಿ ಆಚರಿಸುತ್ತಿರುವ ಚಿತ್ರಗಳು ನೆಟ್ಟಿಗರು ಗಮನ ಸೆಳೆದಿವೆ.

Leave a Comment