ಹೋಮಿಯೋಪತಿಯಲ್ಲಿ ಅಲರ್ಜಿಗೆ ಅಡ್ಡಪರಿಣಾಮವಿಲ್ಲದೇ ಆಧುನಿಕ ಚಿಕಿತ್ಸೆ

ಅಲರ್ಜಿ ಸರ್ವೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲರ್ಜಿಯಲ್ಲಿ ಹಲವು ವಿಧಗಳಿವೆ. ಅದೇ ರೀತಿ ಕಾರಣಗಳು ಸಹ ಹಲವು. ಅಲರ್ಜಿ ಎನ್ನುವುದು ಅತಿ ಸೂಕ್ಷ್ಮ ಅಸ್ವಸ್ಥ ಪ್ರತಿ ರಕ್ಞಣಾ ವ್ಯವಸ್ಥೆಯಾಗಿದೆ. ಕಣ್ಣು ಕೆಂಪಾಗುವುದು, ತುರಿಕೆ, ಮೂಗು ಮತ್ತು ಕಣ್ಣಿನ ತುರಿಕೆ, ಸ್ರವಿಸುವ ಮೂಗು, ಜೇನುಗೂಡುಗಳು ಅಥವಾ ಅಸ್ಥಮಾರಾಳಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.  ಈಗಿನ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ ಎನ್ನುವ ಪರಿಸ್ಥಿತಿ ಇದೆ. ದಿನದಿಂದ ದಿನಕ್ಕೆ ಮನಷ್ಯನ ದೇಹ ಸೂಕ್ಷ್ಮವಾಗುತ್ತಿದೆ. ಹಲವು ಸಂಕಿರ್ಣದಾಯ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ನಮ್ಮ ಆಹಾರ, ವಿಹಾರ ಪದ್ಧತಿಗಳು ಕೂಡ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಸಮಸ್ಯೆ ಏನೆಂದು ಪತ್ತೆ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಜಾಣತನವಾಗುತ್ತದೆ.

health-doctor-srinivasa-guptaಸಾಮಾನ್ಯವಾಗಿ ನಮ್ಮ ರೋಗ ನಿರೋಧಕ ಶಕ್ತಿ ಕುಂದಿದಾಗ ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಅಲರ್ಜಿ ಅನುವಂಶಿಕವಾಗಿಯೂ ಹೆಚ್ಚಾಗಿ ಕಂಡು ಬರುತ್ತದೆ. ಕೆಲವರು ಪರಿಸರ ಸಂಬಂಧಿ ಅಲರ್ಜಿಗಳಿಂದ ಬಳಲಿದರೆ, ಇನ್ನೂ ಕೆಲವರು ಆಹಾರ ಅಲರ್ಜಿ ಸಮಸ್ಯೆಗಳಿಗೆ ಸಿಲುಕಬಹುದು. ಕೆಲವರಿಗೆ ನೀರು ಅಲರ್ಜಿ, ಬಿಸಿಲು, ಮಾಲಿನ್ಯಯುಕ್ತ ಗಾಳಿ ಕೂಡ ಅಲರ್ಜಿ ಸಮಸ್ಯೆಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಒಂದು ರೀತಿಯ ಅಲರ್ಜಿ ಕಂಡು ಬಂದರೆ, ಬೇಸಿಗೆಯಲ್ಲಿ ಇನ್ನೊಂದು ಬಗೆ, ಮಳೆಗಾದಲ್ಲಿ ಮತ್ತೊಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೆ ನಾನಾ ಬಗೆಯ ಅಲರ್ಜಿ ಸಮಸ್ಯೆಗಳನ್ನು ನೋಡಬಹುದಾಗಿದೆ. ಅಲರ್ಜಿಯಲ್ಲಿ ಕೆಲವರು ಆಪಾಯಕಾರಿ ಚಿಕಿತ್ಸೆಗಳಿಗೆ ಸಹ ಒಳಗಾಗಿ ಹೆಚ್ಚು ಸಮಸ್ಯೆಗಳನ್ನು ತಂದುಕೊಳ್ಳುವುದನ್ನು ನೋಡಬಹುದಾಗಿದೆ.

ವ್ಯಕ್ತಿಯ ಪ್ರತಿ ರಕ್ಷಣಾ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ನಿರುಪದ್ರವ ವಸ್ತುಗಳಿಗೆ ಪ್ರತಿಕ್ರಿಯೆ ಇರುತ್ತದೆ. ಈ ಹಂತದಲ್ಲಿ ಅಲರ್ಜಿ ಸಮಸ್ಯೆಗಳು ತೀವ್ರವಾಗುತ್ತದೆ. ಈ ರೀತಿಯ ಪ್ರತಿಕ್ರಿಯೆ ಉಂಟು ಮಾಡುವುದನ್ನು “ಅಲರ್ಜಿನ್” ಎಂದು ಕರೆಯಲಾಗುತ್ತದೆ. ಗಾಳಿಯಲ್ಲಿ ಹೆಚ್ಚು ಅಡ್ಡಾಡಿದರೆ ಕಣ್ಣು, ಮೂಗು ಮತ್ತು ಶ್ವಾಸಕೋಶ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಅಲರ್ಜಿನ್‌ನಿಂದ ಮೂಗು ಸೋರುವಿಕೆ, ಬಿಟ್ಟು ಬಿಟ್ಟು ಜ್ವರ ಬರುವುದು, ಕಣ್ಣು ಕೆಂಪಾಗುವುದು, ತುರಿಕೆ, ಸೀನು, ಮೂಗಿನ ಕಿರಿಕಿರಿ ಉಂಟಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಅಸ್ತಮಾ ಉಂಟಾಗಲು ಕಾರಣರವಾಗಬಹುದು. ಶ್ವಾಸಕೋಶದಲ್ಲಿ ಕೆಲವು ಬದಲಾವಣೆಗಳನ್ನು ಸಹ ನೋಡಬಹುದಾಗಿದೆ. ಬ್ರಾಂಕೋಸ್ಟಾಸಮ್, ಹೆಚ್ಚಿನ ಲೋಳೆ ಉತ್ಪಾದನೆ, ಶ್ವಾಸಕೋಶದ ಉಸಿರಾಟದ ತೊಂದರೆ, ಕೆಮ್ಮು, ಉಬ್ಬಸ, ಹೀಗೆ ನಾನಾ ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿದೆ.

ಅಲರ್ಜಿ ಸಮಸ್ಯೆ ಅನುವಂಶಿಕತೆಯಿಂದ ಹೆಚ್ಚಾಗಿ ಕಂಡು ಬರುತ್ತದೆ. ಆಹಾರದಲ್ಲಿ ಆಗುವ ಬದಲಾವಣೆಗಳು, ಪರಿಸರ ಮಾಲೀನ್ಯ, ಬಾಲ್ಯದಲ್ಲಿ ಸಂಕ್ರಾಮಿಕ ರೋಗಗಳಿಗೆ ತುತ್ತಾಗುವ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ. ಇಂತಹ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರಲಿದ್ದು, ಇಂತಹವರಲ್ಲಿ ಅಲರ್ಜಿ ಸಮಸ್ಯೆ ತೀವ್ರವಾಗಿರುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಮೂಲದಲ್ಲೇ ಚಿಕಿತ್ಸೆ ನೀಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬಹುದಾಗಿದೆ.

ಹೋಮಿಯೋಪತಿಯಲ್ಲಿ ಅಲರ್ಜಿಗೆ ಉತ್ತಮ ಹಾಗೂ ಶಾಶ್ವತ ಪರಿಹಾರವಿದೆ. ಸ್ಟಾರ್ ಹೋಮಿಯೋಪತಿ ಚಿಕಿತ್ಸೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೇ ಅಲರ್ಜಿಯಿಂದಾಗಿ ಅತಿ ಸೂಕ್ಷ್ಮಮತೆ ಅಂದರೆ ಹೈಪರ್ ಸೆನ್ಸಿಟಿವಿಟಿ ಪರಿಣಾಮಗಳು ಕಡಿಮೆಯಾಗಲಿವೆ. ಹೋಮಿಯೋಪತಿ ಔಷಧಿಗಳು ಈ ಸಮಸ್ಯೆ ನಿವಾರಣೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ರೋಗಿಯ ದೇಹ ಪ್ರಕೃತಿಗೆ ಅನುಗುಣವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಅಡ್ಡಪರಿಣಾಮಗಳಿಲ್ಲದ ಆಧುನಿಕ, ವೈಜ್ಞಾನಿಕ ಚಿಕಿತ್ಸೆ ಸ್ಟಾರ್ ಹೋಮಿಯೋಪತಿಯಲ್ಲಿ ಮಾತ್ರ ಲಭ್ಯವಿದೆ.”

ಡಾ. ಕೆ. ಶ್ರೀನಿವಾಸ ಗುಪ್ತ.

7569333480

Leave a Comment