ಹೋಬಳಿ ಮಟ್ಟದ ಕ್ರೀಡಾಕೂಟ

ರಾಯಚೂರು.ಆ.12- ಯರಗೇರಾ ವಲಯದಲ್ಲಿ ಬರುವ ಕೊತ್ತದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಹೋಬಳಿ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.
ಈ ಕ್ರೀಡಾಕೂಟದಲ್ಲಿ 12 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಭಾಗವಹಿಸಿದ್ದವು. ಗ್ರಾಮಸ್ಥರಾದ ನಾಗರಾಜಗೌಡ ಅವರು ಕೊತ್ತದೊಡ್ಡಿ ಶಾಲೆಯಲ್ಲಿ ಆಟದ ಮೈದಾನ ಕೊರತೆ ವಿದ್ಯಾರ್ಥಿಗಳು ಎದುರಿಸುತ್ತಿರುವುದರಿಂದ ಶಾಲೆಗೆ ಉಚಿತವಾಗಿ 1 ಎಕರೆ ಭೂಮಿ ನೀಡಿದರು. ಖೋಖೋ ಪಂದ್ಯಾವಳಿಯಲ್ಲಿ ಜಂಬಲದಿನ್ನಿ ಪ್ರಥಮ, ಗಧಾರ್ ದ್ವಿತೀಯ ಸ್ಥಾನ, ಬಾಲಕೀಯರ ಖೋಖೋ ಪಂದ್ಯಾವಳಿಯಲ್ಲಿ ದೇವನಪಲ್ಲಿ ಪ್ರಥಮ, ಗುಂಜಳ್ಳಿ ದ್ವಿತೀಯ ಸ್ಥಾನ ಮತ್ತು ಬಾಲಕೀಯರ ಕಬಡ್ಡಿಯಲ್ಲಿ ದೇವನಪಲ್ಲಿ ಪ್ರಥಮ, ಗುಂಜಳ್ಳಿ ದ್ವಿತೀಯ ಸ್ಥಾನ ಲಭಿಸಿತು.
ಅಥ್ಲೇಟಿಕ್ಸ್ ಆಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ತಾ.ಪಂ.ಸದಸ್ಯ ರಾಮಚಂದ್ರಪ್ಪ, ಗ್ರಾ.ಪಂ.ಸದಸ್ಯೆ ಶರಣಮ್ಮ, ಲಕ್ಷ್ಮಣ, ನಾಗರಾಜ ಶೆಟ್ಟಿ, ಮೈಲಾರಿ ಮಾಸದೊಡ್ಡಿ, ಆನಂದ, ತಿಪ್ಪಯ್ಯ, ಕೆ.ಹನುಮಂತು, ಮುತ್ತಯ್ಯ, ಶೇಕ್ಷಾವಲಿ, ವೀರೇಶ, ಮಹಾದೇವ, ಗೋಪಿನಾಥ, ಶಿಕ್ಷಕವೃಂದ, ಗ್ರಾಮಸ್ಥರು ಭಾಗವಹಿಸಿದ್ದರು.

Leave a Comment