ಹೋಂ ಮಿನಿಸ್ಟರ್ ಉಪೇಂದ್ರ

ಪ್ರಜಾಕಿಯದ ಮೂಲಕ ರಾಜಕೀಯ ಜೀವನಕ್ಕೂ ಕಾಲಿಟ್ಟ ನಟ ಉಪೇಂದ್ರ ಹೋಂ ಮಿನಿಸ್ಟರ್ ಆಗಿದ್ದಾರೆ. ಅರೇ ಅವರು ಚುನಾವಣೆಯಲ್ಲಿ ಗೆದ್ದೇ ಇಲ್ಲ ಹೇಗೆ ಹೋಂ ಮಿನಿಸ್ಟರ್ ಆದರು ಎನ್ನುವ ಪ್ರಶ್ನೆ ಕುತೂಹಲ ಸಹಜ.

ಉಪೇಂದ್ರ ಹೋಂ ಮಿನಿಸ್ಟರ್ ಆಗಿರುವುದಂತೂ ಸತ್ಯ. ಆದರೆ, ಅವರು ತೆರೆಯ ಮೇಲಷ್ಟೇ ಈ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಹೋಂ ಮಿನಿಸ್ಟರ್ ಚಿತ್ರದ ಮೂಲಕ.

home-minister_162

ಶ್ರೀಹರಿ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ತೆಲುಗಿನ ನಿರ್ಮಾಪಕರಾದ ಪೂರ್ಣನಾಯ್ಡು ಮತ್ತು ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ.

ಕಳೆದವಾರ ಚಿತ್ರದ ಬಗ್ಗೆ ಹೇಳಿಕೊಳ್ಳಲು ತಂಡ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.ಅಲ್ಲಿ ಮಾತಿಗಿಳಿದ ಉಪೇಂದ್ರ ಹೋಂ ಮಿನಿಸ್ಟರ್ ಎನ್ನುವುದು ಡಬಲ್ ಮೀನಿಂಗ್ ಪದ. ಹಾಗಂತ ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ.

ಮನೆಯಲ್ಲಿ ಹೆಂಗಸರನ್ನು ಹೋಂ ಮಿನಿಸ್ಟರ್ ಎಂದು ಕರೆಯುತ್ತಾರ. ಅದೇ ರೀತಿ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

home-minister_194ಎಲ್ಲರಿಗೂ ಇಷ್ಟವಾಗುವ ಚಿತ್ರವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಉಪೇಂದ್ರ, ಪ್ರಜಾಕಿಯದಿಂದ ರಾಜಕೀಯ ಆರಂಭಿಸಿದ್ದೇನೆ ಎಂದು ಹೇಳಿಕೊಂಡರು. ಹಿರಿಯ ಕಲಾವಿದ ಶ್ರೀನಿವಾಸ್ ಮೂರ್ತಿ ಚಿತ್ರದಲ್ಲಿ ತಂದೆಯ ಪಾತ್ರ ನಿಭಾಯಿಸಿದ್ದೇನೆ. ಪಾತ್ರ ಚೆನ್ನಾಗಿ ಬಂದರೆ, ಮತ್ತೊಬ್ಬ ಕಲಾವಿದ ರವಿಭಟ್ ರಿಯಲ್ ಎಸ್ಟೇಟ್ ಉದ್ಯಮಿ ಪಾತ್ರ ತಮಗೆ ಜೋಡಿಯಾಗಿ ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ ಎಂದರು.

ನಟಿಯ ವೇದಿಕಾ, ಬಹಳ ದಿನಗಳ ನಂತರ ಮತ್ತೆ ಕನ್ನಡಕ್ಕೆ ಬಂದಿರುವುದು ಖುಷಿ ಕೊಟ್ಟಿದೆ ಎಂದರೆ ಮತ್ತೊಬ್ಬ ನಟಿ ಲಾಸ್ಯ, ಚಿತ್ರದಲ್ಲಿ ಉಪೆಂದ್ರ ಮತ್ತು ವೇದಿಕಾ ಅವರಿಗೆ ಇಬ್ಬರಿಗೂ ಸ್ನೇಹಿತೆ, ಅದರಲ್ಲಿಊ ಉಪೇಂದ್ರ ಸಾರ್ ಕಂಪನಿಯನ್ನು ಅವರಿಲ್ಲದಿದ್ದಾಗ ನಾನೇ ನೋಡಿಕೊಳುತ್ತೇನೆ. ಒಳ್ಳೆಯ ಪಾತ್ರ ಸಿಕ್ಕಿದೆ.ಸದ್ಯ ಮಂಗಳವಾರ ರಜಾದಿನ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ತಮಿಳಿನಲ್ಲಿ ವೆಬ್ ಸೀರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ವಿವರ ನೀಡಿದರು.

ಇದೇ ಮೊದಲ ಬಾರಿಗೆ ಉಪೇಂದ್ರ ಅವರೊಂದಿಗೆ ಗೆಳೆಯನ ಪಾತ್ರ ಖುಷಿಕೊಟ್ಟಿದೆ ಎಂದು ಹಾಸ್ಯ ಕಲಾವಿದ ವಿಜಯ್ ಚಂಡೂರ್ ಹೇಳಿಕೊಂಡರು. ಆದ್ಯ, ಶುಭರಕ್ಷಾ ಸೇರಿದಂತೆ ಹಲವರು ತಮ್ಮ ಪಾತ್ರಗಳ ಬಗ್ಗೆ ವಿವರ ನೀಡಿದರು.

Leave a Comment