ಹೋಂ ಕ್ವಾರಂಟೈನ್ ಇದ್ದರೂ ತಿರುಗಾಡಿದ ಕಾಪು ನಿವಾಸಿ ವಿರುದ್ಧ ಕ್ರಿಮಿನಲ್ ಕೇಸ್!

ಉಡುಪಿ, ಎ.೩- ಕಾಪು ಸಮೀಪದ ಮಣಿಪುರ ನಿವಾಸಿ ವ್ಯಕ್ತಿಗೆ ಕೊರೋನಾ ಸೋಂಕು ತಗಲಿದ್ದು ದುಬೈನಿಂದ ಮರಳಿದ್ದ ಆತನನ್ನು ಹೋಂ ಕ್ವಾರಂಟೈನ್ ಆಗಿರುವಂತೆ ಎಚ್ಚರಿಸಿದ್ದರೂ ನಿರ್ಲಕ್ಷಿಸಿ ಊರೂರು ತಿರುಗಿದ್ದಕ್ಕಾಗಿ ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಮತ್ತು ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಆತನೇ ಭರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಖಡಕ್ ಆದೇಶ ನೀಡಿದ್ದಾರೆ.
ನಿನ್ನೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ್ದು, ಮನೆ ಯಲ್ಲಿ ಇರಬೇಕಾದ ವ್ಯಕ್ತಿ ಎಲ್ಲರ ಜೊತೆಯಲ್ಲಿ ಸೇರಿ ಕ್ರಿಕೆಟ್ ಆಡಿದ್ದಲ್ಲದೆ ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ ಆದ್ದರಿಂದ ಅವನ ಸಂಪರ್ಕಕ್ಕೆ ಬಂದ ಎಲ್ಲಾ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಬೇಕಾಗಿದೆ. ಅದಕ್ಕೆ ತಗಲುವ ಎಲ್ಲಾ ವೆಚ್ಚವನ್ನು ಆತನಿಂದನೆ ವಸೂಲಿ ಮಾಡಲಾ
ಗುವುದು ಎಂದರು.
ಇನ್ನು ಮುಂದೆಯೂ ಅಂತಹ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ ಉದ್ಧಟತನ ತೋರಿದ ಎಲ್ಲಾ ಪೇಷಂಟ್ ಪಾರ್ಟಿ ಯಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ ಕಾನೂನು ಉಲ್ಲಂ ಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.

Leave a Comment