ಹೊಸ ಸಂಭ್ರಮದತ್ತ ತ್ರೀವೇಣಿ ಸಂಗಮ

ಬೆಂಗಳೂರು, ಆ ೧೩-ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೇದಿನಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ರಾಜ್ಯದ ಮೊಟ್ಟ ಮೊದಲ ಸಂಪೂರ್ಣ ಸಂಗೀತ ಪ್ರಧಾನವಾದ ಧಾರಾವಾಹಿ ‘ತ್ರಿವೇಣಿ ಸಂಗಮ’ದಲ್ಲಿ ಸಂಭ್ರಮ ಮನೆ ಮಾಡಿದೆ.

ಅಪಾರ ಜನಪ್ರಿಯತೆಯೊಂದಿಗೆ ಮುನ್ನಗುತ್ತಿರುವ ಈ ಧಾರಾವಾಹಿಯಲ್ಲಿ ಮೊಟ್ಟ ಮೊದಲ ಬಾರಿಗೆ ಹಾಡುಗಳ ಸ್ಪರ್ಧೆಯನ್ನು ಅಳವಡಿಸಲಾಗುತ್ತಿದ್ದು, ಭಾವನಾತ್ಮಕ ಕಥೆಯ ಜೊತೆಗೆ ಇನ್ನು ಮುಂದೆ ವಿಶಿಷ್ಠವಾದ ರಿಯಾಲಿಟಿ ಶೋ ಮೂಡಿ ಬರಲಿದೆ. ಈ ಧಾರಾವಾಹಿ ಇನ್ನಷ್ಟು ವೈಭವದಿಂದ ಮೂಡಿಬರಲಿ ಎಂದು ನಿರ್ಮಾಪಕ ಅಪಾರ ವೆಚ್ಚದಲ್ಲಿ ಸೆಟ್ಟು ಹಾಕಿಸಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್, ಗೀತರಚನಾಕಾರ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಶಮಿತಾ ಮಲ್ನಾಡ್ ಅವರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರೀಶ್ ಕುಮಾರ್ ಅವರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ನಿರ್ದೇಶಕ ಸುನಿ, ನಟರಾದ ಋಷಿ, ಸಂಚಾರಿ ವಿಜಯ್, ನೀನಾಸಂ ಸತೀಷ್, ವಿನೋದ್ ಪ್ರಭಾಕರ್, ದತ್ತಣ್ಣ, ನಟಿಯರಾದ ಶುಭಾ ಪೂಂಜಾ, ಆಕಾಂಕ್ಷಾ, ಅಮೃತರಾವ್, ಭವ್ಯ, ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್‌ವಾಡ್ ಸೇರಿದಂತೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ.

ಇನ್ನು ಮುಂದೆ ಪ್ರತಿದಿನ ಸಂಜೆ ೬.೩೦ಕ್ಕೆ ತ್ರಿವೇಣಿ ಸಂಗಮದಲ್ಲಿ ಗುರುಕಿರಣ್, ಅವರೊಂದಿಗೆ ಕಥೆಯ ಜೊತೆಗೆ ಸಂಗೀತ ಸ್ಪರ್ಧೆಯೂ ನಡೆಯಲಿದ್ದು, ವೀಕ್ಷಕರಿಗೆ ಸಂಗೀತದ ರಸದೌತಣ ನೀಡಲಿ ಸಜ್ಜಾಗಿದೆ.

Leave a Comment