ಹೊಸ ವರ್ಷ : ಮಕ್ಕಳಿಗೆ ಪ್ರಬಂಧ ಸ್ಪರ್ಧೆ

ರಾಯಚೂರು.ಜ.01- ಮಾನವಿ ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೋಯಲ್ ಮಾರ್ಚೆಡ್ ಗ್ರಾಮದಲ್ಲಿ ಹೊಸ ವರ್ಷದಲ್ಲಿ ಸ್ವಾಮಿ ವಿವೇಕಾನಂದ ಸಮಾಜ ಸೇವೆ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮಾನವಿ ತಾಲೂಕಿನ ಬೋಯಲ್ ಮಾರ್ಚಡ್ ಗ್ರಾಮದಲ್ಲಿ ಸ್ವಾಮಿ ವಿವೇಂಕಾನಂದ ಸಮಾಜ ಸೇವೆ ಸಂಸ್ಥೆ ವತಿಯಿಂದ ಹೊಸ ವರ್ಷ ಆಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಎಸ್‌ಎಂಡಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ, ಅವರು ಕೇಕ್ ಕತ್ತರಿಸುವ ಮೂಲಕ ಹೊಸ ವರಷವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶಾಂತದೇವಿ ಬಸಲಿಂಗಯ್ಯ, ಶಿಕ್ಷಕರಾದ ಸಂತೋಷ, ಮಹೇಶ, ನಾಗಪ್ಪ, ಲಕ್ಷ್ಮೀ, ಅಂಬಮ್ಮ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Leave a Comment