ಹೊಸ ಮೋಟಾರು ವಾಹನ ಕಾಯ್ದೆಯನ್ನು ಹಿಂಪಡೆಯುವಂತೆ ಮನವಿ

ದಾವಣಗೆರೆ, ಸೆ.11; ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಹೋರಾಟ ಸಮಿತಿಯವರಿಂದ  ಜಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಚಾರಿ ನಿಯಮ ಪಾಲಿಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ಸಂಚಾರಿ ನಿಯಮ ಉಲ್ಲಂಘನೆಯಾದರೆ ದೊಡ್ಡ ಪ್ರಮಾಣದ ಮೊತ್ತವನ್ನು ದಂಡವನ್ನಾಗಿ ವಿಧಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ ಕೇಂದ್ರ ಸರ್ಕಾರದ ಈ ನೂತನ ಐಎಂವಿ ಕಾಯ್ದೆಯಿಂದಾಗಿ ಜನರ ಮೇಲೆ ಹೊರೆ ಹೆಚ್ಚಾಗುತ್ತಿದೆ ಆದ್ದರಿಂದ ಪೋಲೀಸರು ಜಾಗೃತಿ ಮೂಡಿಸಲು ವರ್ಷದವರೆಗೆ ಅವಕಾಶ ನೀಡಿ ಬಳಿಕ ದಂಡದ ಮೊತ್ತ ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಮನವಿ ಸಲ್ಲಿಸಿದರು. ಈ ಕಾಯ್ದೆಯಲ್ಲಿ ನಿಗದಿ ಪಡಿಸಿರುವ ದಂಡದ ಮೊತ್ತ ಅಧಿಕವಾಗಿದೆ. ಕಾಯ್ದೆಯಿಂದ ವಾಹನ ಮಾಲಿಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ. ಸರ್ಕಾರ ರೂಪಿಸುವ ಕಾನೂನುಗಳು ಜನರನ್ನು ತಿದ್ದಬೇಕೇ ಹೊರತು, ಜನತೆಯನ್ನೇ ಶೋಷಣೆಗೆ ಗುರಿ ಮಾಡಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಮರು ಪರಿಶೀಲಿಸುವಂತೆ ವಿನಂತಿಸುತ್ತೇವೆ. ವಾಹನ ಸವಾರರಿಂದ ದಂಡ ವಸೂಲಿ ಮಾಡಿ ಸರ್ಕಾರ ನಡೆಸುವ ಇರಾದೆ ಈ ಕಾಯ್ದೆಯ ಹಿಂದಿದೆಯೇ ಈ ಕಾಯ್ದೆಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಹೊಸ ಮೋಟಾರು ವಾಹನ ಕಾಯ್ದೆಯನ್ನು ಭಾರತದ ಬಹುತೇಕ ರಾಜ್ಯಗಳು ಜಾರಿ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಜಾರಿ ಮಾಡಿದ್ದು ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದ್ದು, ರಾಜ್ಯ ಸರ್ಕಾರ ಕಾಯ್ದೆಯನ್ನು ಹಿಂಪಡೆಯಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ದಿನೇಶ್ ಕೆ.ಶೆಟ್ಟಿ, ಬಿ.ಎನ್.ಮಲ್ಲೇಶ್,ಎಚ್.ಕೆ.ರಾಮಚಂದ್ರಪ್ಪ, ಕೆ.ಜಿ.ಯಲ್ಲಪ್ಪ, ವಕೀಲ ಮುಸ್ತಾಕ್ ಅಹ್ಮದ್, ಮಂಜುನಾಥಸ್ವಾಮಿ, ಸೈಯದ್ ಸೈಫುಲ್ಲಾ, ಸಿ.ಎ ಉಮೇಶ್ ಶೆಟ್ಟಿ, ಎಂ.ಎಸ್.ರಾಮೇಗೌಡ, ಆಟೋ ಕಾಲೋನಿ ಕಲ್ಲೇಶಪ್ಪ, ಎ. ನಾಗರಾಜ್, ಶ್ರೀಕಾಂತ್ ಬಗರೆ, ಸೋಮಲಾಪುರದ ಹನುಮಂತಪ್ಪ, ಡಿ.ಎನ್.ಜಗದೀಶ್, ಬಾಡಾ ಕ್ರಾಸ್ ಶ್ರೀನಿವಾಸ್ ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಮುಖಂಡರು ಎನ್.ಟಿ.ಬಸವರಾಜ, ಗದಿಗೇಶ ಮತ್ತಿತರರಿದ್ದರು.

Leave a Comment