ಹೊಸ ಪ್ರಿಯಕರ ಸಿಕ್ಕಿದ್ದಾನೆ- ರಾಖಿ ಹೊಸ ಅವತಾರ

ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾಳೆ. ಈಗ ರಾಖಿ ತನ್ನ ಜೀವನದಲ್ಲಿ ಹೊಸ ಪ್ರಿಯಕರ ಬಂದಿದ್ದಾನೆ ಎಂದು ಹೇಳಿ ಮತ್ತೊಮ್ಮೆ ಸುದ್ದಿ ಆಗಿದ್ದಾಳೆ.

ರಾಖಿ ತನ್ನ ಇನ್‍ಸ್ಟಾದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನಾನು ನಿಮ್ಮ ಜೊತೆ ಒಂದು ವಿಷಯವನ್ನು ಹಂಚಿಕೊಳ್ಳಬೇಕು. ನನ್ನ ಜೀವನದಲ್ಲಿ ಹೊಸ ಪ್ರಿಯಕರನೊಬ್ಬ ಬಂದಿದ್ದು, ನಾನು ತುಂಬಾ ಪ್ರೀತಿಸುತ್ತೇನೆ. ನಾನು ಜೊತೆಯಲ್ಲಿ ಊಟ ಮಾಡುತ್ತೇನೆ, ಮಲಗುತ್ತೇನೆ ಹಾಗೂ ಎಂಜಾಯ್ ಮಾಡುತ್ತೇನೆ. ಇದೇ ವೇಳೆ ನನಗೆ ಈಗ ನನ್ನ ಪತಿಯ ಜೊತೆ ಕಾಲ ಕಳೆಯಲು ಆಗುತ್ತಿಲ್ಲ ಎಂದು ಹೇಳಿದ್ದಾಳೆ.

ಬಳಿಕ ರಾಖಿ ತನ್ನ ಹೊಸ ಲವ್ ಪೋಕರ್ (ಗೇಮ್) ಎಂದು ಹೇಳುತ್ತಾಳೆ. ನಾನು ದಿನವಿಡೀ ಪೋಕರ್ ಆಡುತ್ತೇನೆ. ಪೋಕರ್ ಆಡಿ ನಾನು ಸಂಪಾದನೆ ಮಾಡುತ್ತಿದ್ದೇನೆ. ಶೀಘ್ರದಲ್ಲೇ ನಾನು ಹೆಚ್ಚು ಹಣ ಸಂಪಾದಿಸುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾಳೆ.

ಇತ್ತೀಚೆಗೆ ರಾಖಿ ತನ್ನ ಮಗಳ ವಿಡಿಯೋವನ್ನು ಹಂಚಿಕೊಂಡಿದ್ದಳು. ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ರಾಖಿ ನನ್ನ ತಾಯಿ ಎಂದು ಹೇಳಿದ್ದಾಳೆ. ರಾಖಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಸ್ನೇಹಿತರೇ, ಅಭಿಮಾನಿಗಳೇ, ಇವಳು ನನ್ನ ಮಗಳು. ದಯವಿಟ್ಟು ಎಲ್ಲರೂ ಇವಳಿಗೆ ಆಶೀರ್ವಾದ ಮಾಡಿ” ಎಂದು ಬರೆದುಕೊಂಡಿದ್ದಾಳೆ. ಈ ವಿಡಿಯೋ ನೋಡಿ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು.

 

ಜುಲೈ 28ರಂದು ರಾಖಿ ಮುಂಬೈನ ಜೆ.ಡಬ್ಲೂ ಮ್ಯಾರಿಯಟ್ ಹೋಟೆಲ್‍ನಲ್ಲಿ ಗೌಪ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ರಾಖಿ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯಳಾಗಿದ್ದು, ಯಾವಾಗಲೂ ತನ್ನ ಪತಿ ರಿತೇಶ್ ಬಗ್ಗೆ ಮಾತನಾಡುತ್ತಿರುತ್ತಾಳೆ. ಆದರೆ ಈವರೆಗೂ ರಾಖಿ ತನ್ನ ಪತಿಯ ಫೋಟೋವನ್ನು ರಿವೀಲ್ ಮಾಡಿಲ್ಲ.

rakhisawant2511

Verified

 https://www.instagram.com/tv/B5CyIR2nLGe/?utm_source=ig_embed

Leave a Comment