ಹೊಸ ಟ್ರೆಂಡ್ ಹುಟ್ಟು ಹಾಕಿದ ಶಿಲ್ಪಾ ಉಟ್ಟ ಸೀರೆ

ಹೆಣ್ಣಿಗೆ ಸೀರೆ ಯಾಕೆ ಚೆಂದ.. ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸೀರೆ ಬಗ್ಗೆ ಹಾಡಿ ಹೊಗಳಿದರೆ,  ಸೀರೇಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪರೇಚರ್ರು… ಎಂದು ಕಿಚ್ಚ ಸುದೀಪ ರೋಮ್ಯಾಂಟಿಕ್ ಆಗಿ ಹಾಡಿ ರೋಮಾಂಚನಗೊಳಿಸಿದ್ದನ್ನು ಯಾರು ಮರೆಯಲ್ಲ ಬಿಡಿ….

ಅಂದ ಹಾಗೆ ಈಗ ಯಾಕೆ ಸೀರೆ ವಿಷಯ ಅಂತೀರಾ….. ಹೌದು ನಮ್ಮ ಸಂಸ್ಕೃತಿಯಲ್ಲಿ ಸೀರೆಗೆ ಮಹತ್ವ ಇದೆ. ಅದಕ್ಕೆ ಅದರದೇ ಆದ ಶೈಲಿ ಇದೆ. ಯಾರೇ ಸೀರೆ ಉಟ್ಟರೂ ನೋಡಕ್ಕೆ ಚೆಂದ…. ಅಂತ ಎಲ್ಲಾರು ಒಪ್ಪಿಕೊಂಡಿದ್ದು ಆಯ್ತು.

  • ಬರೋಬ್ಬರಿ 15,000 ರೂ ಬೆಲೆಯ ಸೀರೆ

  • ಬಾಲಿವುಡ್‌ನಲ್ಲಿ ಭಾರಿ ಚರ್ಚೆ

  • ಮಸಾಬಾ ಗುಪ್ತಾ ವಿನ್ಯಾಸದ ಸೀರೆ

  • ರೆಟ್ರೋ ಲುಕ್‌ನಲ್ಲಿ ಶಿಲ್ಪಾ ಮಿಂಚು

shilpashettysaree-1ಇಂತಹ ಸೀರೆ ಉಟ್ಟು ನಮ್ಮ ಕರಾವಳಿ ಬೆಡಗಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಕತ್ ಸುದ್ದಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಧರಿಸಿರುವ ಈ ಹೊಸ ಸೀರೆ ಹೊಸ ಟ್ರೆಂಡ್‌ನ್ನು ಸೃಷ್ಠಿಮಾಡಿದೆ. ಹೆಣ್ಣು ಹೈಕ್ಲು ಅಂತೂ ಈ ಸೀರೆಗಾಗಿ ಭಾರಿ ಹುಡುಕಾಟ ನಡೆಸಿದ್ದಾರೆ.

ಹೌದು ಬಾಲಿವುಡ್‌ನ ಬ್ಯೂಟಿ ಶಿಲ್ಪಾಶೆಟ್ಟಿ ಕುಂದ್ರಾ ಈಗ ಫ್ಯಾಷನ್ ಲೋಕದಲ್ಲಿ ಮಿಂಚು ಹರಿಸುತ್ತಿದ್ದಾರೆ. ಅದು ಕೂಡ ಭಾರತೀಯ ನಾರಿಯ ಸೌಂದರ್ಯದ ಕಳೆ ಹೆಚ್ಚಿಸುವ ಅಪ್ಪಟ ಸೀರೆಯ ಮೂಲಕ ಎಂದು ಅಭಿಪ್ರಾಯಗಳು ವ್ಯಕ್ತವಾಗಿದೆ. ಶಿಲ್ಪಾ ಶೆಟ್ಟಿ ಇತ್ತೀಚೆಗೆ ಟಿವಿ ಷೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ವಿಷಯ, ಅದರಲ್ಲಿ ಶಿಲ್ಪಾ ಹಲವಾರು ಕಾರಣಕ್ಕೆ ಖ್ಯಾತಿಗಳಿಸುತ್ತಿದ್ದಾರೆ. ಇತ್ತೀಚೆಗೆ ಅವರು ಧರಿಸುತ್ತಿರುವ ಮಸಾಬಾ ಸ್ಯಾರಿ ಈಗ ಬಾಲಿವುಡ್‌ನ ಫ್ಯಾಷನ್ ಲೋಕದ ಹೊಸ ಟ್ರೆಂಡ್ ಆಗಿಬಿಟ್ಟಿದೆ. ಅಂದ ಹಾಗೆ ಈ ಸೀರೆ ಏನು ರೇಷ್ಮೆ ಸೀರೆ ಅಲ್ಲ ಹಾಗೂ ಯಾವುದೇ ಗ್ರ್ಯಾಂಡ್ ಸೀರೆಯೂ ಅಲ್ಲ, ಸಿಂಪಲ್ ಸದಾ ಸೀದ ಸೀರೆ….!

ಇಡೀ ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ ಸೀರೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮಸಾಬಾ ಗುಪ್ತಾ ಅವರು ಡಿಸೈನ್ ಮಾಡಿರುವ ಸೀರೆ ನೋಡೋಕೆ ಪ್ರಿಂಟೆಂಡ್ ಸ್ಯಾರಿ ಎಂಬಂತೆ ಕಂಡರೂ ಅದರಲ್ಲಿ ಹಲವು ವಿಶೇಷತೆಗಳಿವೆ. ಹಳದಿ ಬಣ್ಣದ ಸೀರೆಯ ಬಾರ್ಡರ್‌ನಲ್ಲಿ ಕಮಲದ ಹೂವಿನ ಚಿತ್ರವಿದೆ. ಶಿಲ್ಪಾ ಶೆಟ್ಟಿ ಆ ಸೀರೆಯನ್ನ ತುಂಬಾ ಚೆನ್ನಾಗಿ ಕ್ಯಾರಿ ಮಾಡಿದ್ದಾರೆ. ಅದರಿಂದ ಸೀರೆಗೆ ಮತ್ತೊಂದು ಮೆರುಗು ಸಿಕ್ಕಿದೆ ಅಂತ ಡಿಸೈನರ್ ಮಸಾಬಾ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಫ್ ಶೋಲ್ಡರ್ ಬ್ಲೌಸ್ ಸೀರೆಗೆ ಪರ್ಫೆಕ್ಟ್ ಮ್ಯಾಚ್ ಆಗಿದ್ದು, ಅದಕ್ಕೆ ಸರಿ ಹೊಂದಿರುವ ಆಭರಣಗಳಿಂದಾಗಿ ಸೀರೆಗೆ ರೆಟ್ರೋ ಲುಕ್ ಕೂಡ ನೀಡಬಹುದಾಗಿದೆಯಂತೆ. ಅಂದ ಹಾಗೆ ಈ ಮಸಾಬಾ ಸೀರೆಯ ಬೆಲೆ ೧೫,೦೦೦ ರೂಪಾಯಿಗಳಂತೆ. ಬೋಲ್ಡ್ ಸ್ಟೇಟ್‌ಮೆಂಟ್‌ನ ಪ್ರತೀಕ ಅಂತ ಹೇಳಲಾಗುತ್ತಿರುವ ಈ ಸೀರೆ ಈಗ ಬಾಲಿವುಡ್‌ನ ನಾರಿಮಣಿಯರಿಗೂ ಅಚ್ಚುಮೆಚ್ಚಾಗಿಬಿಟ್ಟಿದೆ.

ಹೊಸ ವಿನ್ಯಾಸದ ಸೀರೆಗಳ ಸೃಷ್ಠಿಕರ್ತೆ ಮಸಾಬಾ ಗುಪ್ತಾ

ಬಾಲಿವುಡ್‌ನ ಮತ್ತೊಬ್ಬ ನಟಿ ಸೋನಮ್ ಕಪೂರ್ ಅವರ ಬೆಂಬಲದಿಂದ ಮಸಾಬಾ ಗುಪ್ತಾ ಕಳೆದ ೨೦೧೨ರಲ್ಲಿ ಬಾಲಿವುಡ್‌ಗೆ ವಿನ್ಯಾಸಕಿಯಾಗಿ ಪ್ರವೇಶ ಪಡೆದಿದ್ದರು, ೨೯ರ ಈ ವಸ್ತ್ರ ವಿನ್ಯಾಸಕಿ ವೆಸ್ಟ್ ಇಂಡಿಸ್‌ನ ಕ್ರಿಕೆಟರ್ ವಿವಿ ರಿಚರ್ಡ್ ಹಾಗೂ ನೀನಾ ಗುಪ್ತಾರ ಮಗಳು ಹೌದು, ಬುಡುಕಟ್ಟು ಮೂಲದಿಂದ ಬಂದಿರುವ ಮಸಾಬಾ ಇದೀಗ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ಮೊದಮೊದಲು ಮಸಾಬಾ ಕಲೆಕ್ಷನ್ ಮಳಿಗೆಯೊಂದಿಗೆ ವೃತ್ತಿ ಜೀವನ ಆರಂಭಿಸಿದ ಆಕೆ ವಿನ್ಯಾಸ ಮಾಡಿರುವ ಸೀರೆಗಳನ್ನು ಸೋನಂ ಒಪ್ಪಿಕೊಂಡ ಬಳಿಕವೇ ಈ ಮಟ್ಟದ ಪ್ರಚಾರ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ೮ ವರ್ಷದ ಬಾಲಕಿಯಾಗಿದ್ದಾಗ ಟೆನ್ನಿಸ್‌ನಲ್ಲಿ ಆಸಕ್ತಿ ಹೊಂದಿದ್ದ ಮಸಾಬಾ ೧೬ರ ವೇಳೆಗೆ ನೃತ್ಯ ಮತ್ತು ಸಂಗೀತದಲ್ಲಿ ತೊಡಗಿಸಿಕೊಂಡಿದ್ದರು.  ೧೯ರ ವಯಸ್ಸಿನಲ್ಲಿ ಫ್ಯಾಷನ್ ಜಗತ್ತಿಗೆ ಕಾಲಿಟ್ಟ ಈ ವಿನ್ಯಾಸಕಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ ಎನ್ನಬಹುದು.

ಇಂದು ಬಾಲಿವುಡ್‌ನಲ್ಲಿ ಹತ್ತು ಹಲವಾರು ಸೀರೆಗಳ ವಿನ್ಯಾಸವನ್ನು ಸೃಷ್ಠಿಸಿ ಸೈ ಎನಿಸಿಕೊಂಡು ಹೊಸ ಟ್ರೆಂಡ್‌ನ್ನು ಹುಟ್ಟುಹಾಕಿದ್ದಾರೆ.

Leave a Comment