ಹೊಸ ಗ್ರಹಗಳ ಶೋಧನೆಯಲ್ಲಿ ಟೆಸ್ಸಾ ನೌಕೆ

  • ಉತ್ತನೂರು ವೆಂಕಟೇಶ್

ನಮ್ಮ ಸೌರಮಂಡಲದ ಆಚೆಗಿನ ಹೊಸ ಗ್ರಹಗಳ ಶೋಧನೆಯಲ್ಲಿ ತೊಡಗಿರುವ ನಾಸಾದ ಟ್ರಾನ್‌ಸ್ಟಿಂಟ್ ಎಕ್ಸ್ ಪ್ಲಾನೆಂಟ್ ಸರ್ವೆ ಸ್ಯಾಟಲೈಟ್ (ಟೆಸ್) ಹೊಸ ಗ್ರಹಗಳ ಶೋಧನೆಯಲ್ಲಿ ತೊಡಗಿದೆ. ಹೊಸ ಗ್ರಹ ನಕ್ಷತ್ರಗಳ ಮೇಲೆ ತೀವ್ರ ನಿಗಾವಹಿಸಿ ಶೋಧನಾ ಕಾರ್ಯದಲ್ಲಿ ತೊಡಗಿರುವ ಟೆಸ್ ಈವರೆಗಿನ ತನ್ನ ಶೋಧನೆಯಲ್ಲಿ ೮ ಹೊಸ ಗ್ರಹಗಳನ್ನು ಪತ್ತೆ ಹಚ್ಚಿದೆ ಎಂದು ಟೆಸ್ ಶೋಧನಾ ತಂಡದ ವಿಜ್ಞಾನಿಗಳು ಹೇಳಿದ್ದಾರೆ.

ಸೌರಮಂಡಲದ ಆಚೆಗಿನ ಗ್ರಹ ನಕ್ಷತ್ರಗಳ ಶೋಧನೆಯಲ್ಲಿ ತೊಡಗಿದ್ದ ಕೆಪ್ಲರ್ ನೌಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದ ನಂತರ ಅದರ ಜಾಗದಲ್ಲಿ ಹೊಸ ಗ್ರಹಗಳ ಶೋಧನೆಗಾಗಿ ನಾಸಾ ಟೆಸ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ.

ಸ್ಪೇಸ್ ಎಕ್ಸ್ ಮತ್ತು ನಾಸಾ ಜಂಟಿ ಸಹಯೋಗದಲ್ಲಿ ಟೆಸ್ ನೌಕೆಯನ್ನು ೨೦೧೮ ರಲ್ಲಿ ಉಡಾವಣೆ ಮಾಡಿತು.

ಪ್ರಕಾಶಮಾನವಾದ ನಕ್ಷತ್ರಗಳ ಮೇಲೆ ತೀವ್ರ ಗಮನ ಹರಿಸಿದ ಈ ನೌಕೆ ಅದರ ಮುಂದೆ ಹಾದು ಹೋಗುವ ಗ್ರಹಗಳ ಬೆನ್ನಟಿ ಅದರ ಶೋಧನಾ ಕಾರ್ಯವನ್ನು ಮಾಡುತ್ತದೆ. 

ಇದರ ಶೋಧನಾ ಕಾರ್ಯದ ಸಾಮರ್ಥ್ಯವನ್ನು ಗಮನಿಸಿರುವ ವಿಜ್ಞಾನಿಗಳ ತಂಡ ಇದು ತನ್ನ ಕಾಲಾವಧಿಯಲ್ಲಿ ೨೦,೦೦೦ ಕ್ಕೂ ಹೆಚ್ಚು ಅನ್ಯ ಗ್ರಹಗಳನ್ನು ಪತ್ತೆ ಹಚ್ಚಲಿವೆ ಎಂದು ಅಂದಾಜಿಸಿದ್ದಾರೆ.

20vichara2

ಕಳೆದ ವರ್ಷ ಏಪ್ರಿಲ್ ೧೮ ರಂದು ಸ್ಪೇಸ್ ಎಕ್ಸ್‌ನ ಪಾಲ್ಕನ್ ರಾಕೆಟ್ ಮೂಲಕ ಉಡಾವಣೆಗೊಂಡ ಟೆಸ್ ಶೋಧನಾ ನೌಕೆ ಅದೇ ವರ್ಷ ಜುಲೈನಿಂದ ಸೌರ ಮಂಡಲದ ಆಚೆಗಿನ ಗ್ರಹಗಳ ಶೋಧನಾ ಕಾರ್ಯವನ್ನು ಆರಂಭಿಸಿತ್ತು. ತನ್ನ ೨ ವರ್ಷಗಳ ಶೋಧನಾ ಕಾರ್ಯದಲ್ಲಿ ಭೂಮಿ ಗಾತ್ರದ ಹಲವಾರು ಹೊಸ ಗ್ರಹಗಳ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಮೇಸಾ ಚುಟ್ಟೆ ತಾಂತ್ರಿಕ ಸಂಸ್ಥೆಯ ಖಭೌತ ವಿಜ್ಞಾನಿ ಜಾರ್ಜ್ ಆರ್‌ರಿಕೆರ್ ಹೇಳಿದ್ದಾರೆ. ಇವರು ಈ ಶೋಧನೆ ತಂಡ ಮುಖ್ಯಸ್ಥರು ಆಗಿದ್ದಾರೆ.

ಈಗ ಶೋಧನೆಯಾಗಿರುವ ಗ್ರಹಗಳಲ್ಲಿ ಹಲವು ಗ್ರಹಗಳ ಕುರಿತಂತೆ ಸ್ಥಳೀಯ ದೂರದರ್ಶನಗಳು ಪೂರಕ ಮಾಹಿತಿಯನ್ನು ಒದಗಿಸಿವೆ. ಹಾಗೆಯೇ ಪತ್ತೆಯಾಗಿರುವ ಗ್ರಹಗಳ ಶೇ. ೫೦ ರಷ್ಟು ಗ್ರಹಗಳು ಭೂಮಿಗಿಂತ ೪ ಕ್ಕೂ ಪಟ್ಟು ದೊಡ್ಡದಾಗಿವೆ ಎಂದು ಶೋಧನಾ ತಂಡ ಹೇಳಿದೆ. ಈವರೆಗೆ ಪತ್ತೆಯಾಗಿರುವ ಎಲ್ಲಾ ಹೊಸ ಗ್ರಹಗಳು ಭೂಮಿಯಿಂದ ಸುಮಾರು ೩೦೦ ಬೆಳಕಿನ ವರ್ಷಗಳಷ್ಟು ದೂರದ ಒಳಗೆ ಪತ್ತೆಯಾಗಿವೆ.

ನಾಸಾದ ಹೊಸ ಗ್ರಹಗಳ ಶೋಧನಾ ಬಾಹ್ಯಾಕಾಶ ನೌಕೆ ಟೆಸ್ ಸೌರಮಂಡಲದ ಆಚೆಗಿನ ಹಾಗೆಯೇ ಭೂಮಿಗೆ ಹತ್ತಿರವಿರುವ ಶೋಧನೆಯಲ್ಲಿ ನಿರಂತರವಾಗಿ ತೊಡಗಿವೆ.

ಹೊಸ ಗ್ರಹಗಳ ಶೋಧನೆಯಲ್ಲಿ ೯ ವರ್ಷಗಳ ಕಾಲ ತೊಡಗಿದ್ದ ಕೆಪ್ಲರ್ ದೂರದರ್ಶಕ ಶೋಧನಾ ನೌಕೆ ಯೋಜನೆಯನ್ನು ಆಗಸ್ಟ್ ೨೦೧೮ ರಲ್ಲಿ ನಾಸಾ ಮುಕ್ತಾಯಗೊಳಿಸಿತ್ತು. ಆ ವೇಳೆಗೆ ಅದು ೨೭೨೦ ಅನ್ಯ ಗ್ರಹಗಳನ್ನು ಪತ್ತೆ ಮಾಡಿತು. ಕೆಪ್ಲರ್ ನೌಕೆ ತನ್ನ ಶೋಧನಾ ಕಾರ್ಯವನ್ನು ನಿಲ್ಲಿಸಿದ್ದ ಅವಧಿಯಿಂದಲ್ಲೇ ಆ ಕಾರ್ಯವನ್ನು ಮುಂದುವರೆಸುವ ಹಿನ್ನಲೆಯಲ್ಲಿ ನಾಸಾ ಟೆಸ್ ನೌಕೆಯನ್ನು ಉಡಾವಣೆ ಮಾಡಿತು.

ಇದು ತನ್ನ ಶೋಧನಾ ಕಾರ್ಯದಲ್ಲಿ ಈ ಹಿಂದಿನ ಕೆಪ್ಲರ್ ನೌಕೆಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಇದು ತನ್ನ ಜೀವಿತಾವಧಿಯಲ್ಲಿ ೨೦,೦೦೦ಕ್ಕೂ ಹೆಚ್ಚು ಅನ್ಯ ಗ್ರಹಗಳ ಪತ್ತೆ ಹಚ್ಚಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

೨೦೦೯ ರಲ್ಲಿಯೇ ನಮ್ಮ ಸೌರಮಂಡಲದ ಆಚೆ ಸುಮಾರು ೨೩೦ಕ್ಕೂ ಅನ್ಯಗ್ರಹಗಳು ಇರಬಹುದೆಂದು ಈ ಹಿಂದೆ ವಿಜ್ಞಾನಿಗಳು ಅಂದಾಜಿಸಿದ್ದರು.

ಸ್ಪೇಸ್ ಎಕ್ಸ್ ಮತ್ತು ನಾಸಾ ಜಂಟಿ ಸಹಯೋಗದಲ್ಲಿ ಎಸ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದ್ದು, ಇದು ಅನ್ಯ ಗ್ರಹಗಳ ಶೋಧನಾ ಕಾರ್ಯವನ್ನು ಆತಿ ಪ್ರಕಾಶ ಮಾನವಾಗಿ ಹೊಳೆಯುವ ನಕ್ಷತ್ರಗಳ ಮೂಲಕ ಗ್ರಹಗಳ ಶೋಧನೆ ನಡೆಸುತ್ತದೆ. ಪ್ರಕಾಶಮಾನವಾದ ನಕ್ಷತ್ರಗಳ ಮೇಲೆ ನಿಗಾವಹಿಸಿರುವ ನೌಕೆ ಅಂತಹಾ ನಕ್ಷತ್ರಗಳ ಮುಂದೆ ಗ್ರಹಗಳು ಹಾದು ಹೋಗುವಾಗ ಆ ನಕ್ಷತ್ರಗಳ ಬೆಳಕಿನಲ್ಲಿ ಆಗುವ ಮಂದತ್ವ ವನ್ನು ಗಮನಿಸುತ್ತದೆ. ನಕ್ಷತ್ರಗಳ ಬೆಳಕಿನಲ್ಲಿ ಉಂಟಾಗುವ ಈ ಮಂದತ್ವದ ಆಧಾರದಲ್ಲಿ ಹಾದು ಹೋದ ಗ್ರಹದ ಗಾತ್ರ, ತೂಕವನ್ನು ಅಂದಾಜಿಸುತ್ತದೆ ಎಂದು ಶೋಧನಾ ತಂಡದ ವಿಜ್ಞಾನಿಗಳು ಹೇಳಿದ್ದಾರೆ.

Leave a Comment