ಹೊಸಪೇಟೆ ಸೋಂಕಿತರಿಗೆ 150 ಜನರೊಂದಿಗೆ ಸಂಪರ್ಕ

ಬಳ್ಳಾರಿ, ಏ.2: ಜಿಲ್ಲೆಯಲ್ಲಿ ಮೊದಲನೆಯದಾಗಿ ಕೊರೋನಾ ಪಾಸಿಟ್‍ವ್ ಆಗಿ ಕಂಡು ಬಂದಿರುವ ಹೊಸಪೇಟೆಯ ಮೂವರು ಆಸ್ಪತ್ರೆಗೆ ದಾಕಲಿಸುವ ಮುನ್ನ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಈಗ ಅವರನ್ನು ಹುಡುಕಿ ತಪಾಸಣೆ ಮಾಡಿ ಹೋಮ್ ಕ್ವಾರಂಟೈನ್ ಮಾಡುವ ಕೆಲಸವನ್ನು ಜಿಲ್ಲಾಡಳಿತ ಮಾಡಿದೆ.
ಬೆಂಗಳೂರಿನಿಂದ ಬಂದ ನಂತರ ಅವರು ಮೊದಲ ಹಂತದಲ್ಲಿ 25, ಜನರೊಂದಿಗೆ ನಂತರ 2ನೇ ಹಂತದಲ್ಲಿ 125 ಜನರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಂತಹವರನ್ನು ಈಗಾಗಲೇ ಎಲ್ಲರನ್ನೂ ಗುರುತಿಸಿ, ಕ್ವಾರಂಟೈನ್ ಮಾಡಲಾಗಿದೆ. ಅವರಲ್ಲಿ ಯಾರಿಗೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲವೆಂದು ಜಿಲ್ಲಾಧಿ
ಕಾರಿ ಎಸ್.ಎಸ್. ನಕುಲ್ ಹೇಳಿದ್ದಾರೆ.

ಸೋಂಕಿತರ ಕುಟುಂಬದ ಇತರೆ ನಾಲ್ವರಲ್ಲಿ ಸಹ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಅವರನ್ನೂ ಐಸೋಲೇಷನ್‍ನಲ್ಲಿ ಇಡಲಾಗಿದೆ
ಹೊಸಪೇಟೆ ನಗರದಲ್ಲಿ ನಿನ್ನೆಯಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದ ಮನೆ ಮನೆ ಸಮೀಕ್ಷೆ ಕಾರ್ಯ ನಡೆದಿದ್ದು, 209 ತಂಡಗಳಿಂದ ಈ ಕೆಲಸ ಮಾಡುತ್ತಿವೆ. ಇವರು 8,780 ಮನೆಗಳಿಗೆ ಭೇಟಿ ನೀಡಿ, 38,673 ಜನರ ಸಮೀಕ್ಷೆ ಪೂರ್ಣ ಗೊಳಿಸಿದ್ದಾರೆಎಂದು ಅವರು ಹೇಳಿದ್ದಾರೆ.

Leave a Comment