ಹೊಸಪೇಟೆ ಮಾಜಿ ಶಾಸಕ ರತನಸಿಂಗ್ ನಿಧನ

ಬಳ್ಳಾರಿ, ಮಾ.26: ಜಿಲ್ಲೆಯ ಹೊಸಪೇಟೆ ಕ್ಷೇತ್ರದ ಮಾಜಿ ಶಾಸಕ ರತನ್ ಸಿಂಗ್ ಅವರು ಮಂಗಳವಾರ ಮೊನ್ನೆ ಸಂಜೆ ಹೃದಯಾಘಾತ ದಿಂದ ನಿಧನರಾಗಿದ್ದಾಖಇ.ಅವರಿಗೆ 62 ವರ್ಷ ವಯಸ್ಸಾಗಿತ್ತು.
ಸರಳ ವ್ಯಕ್ತಿತ್ವದ ಅವರು ಮಿತಭಾಷಿಯಾಗಿದ್ದರು. ಸದಾ ಹಸನ್ಮುಖಿ. 1991ರಲ್ಲಿ ಅಂದಿನ ಶಾಸಕ ಗುಜ್ಜಲ್ ಹನುಮಂತಪ್ಪ ಅವರ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ. ಬಿಜೆಪಿಯ ಅಭ್ಯರ್ಥಿ ಶಂಕರಗೌಡ ಅವರನ್ನು 433 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

ಲೇಔಟ್ ನಿರ್ಮಾಣದ ಅನುಮತಿಗೆ ಬಳ್ಳಾರಿಗೆ ಹೋಗಬೇಕಿತ್ತು. ಜನ ಅನುಭವಿಸುತ್ತಿರುವ ಪಡಿಪಾಟಲು ಗಮನಿಸಿ, ಆ ಕಚೇರಿ ನಗರದಲ್ಲೇ ಆರಂಭಗೊಳ್ಳುವಂತೆ ಮಾಡಿದರು. ಇವರ ಅವಧಿಯಲ್ಲೇ `ಸಿಟಿ ಇಂಪ್ಲಿಮೆಂಟ್ ಬೋರ್ಡ್’ ಆರಂಭಗೊಂಡಿತು. ಈಗ ಅದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಅಣ್ಣನ ಮಗ ಸಚಿವ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ನಿನ್ನೆ ಅವರ ಅಂತ್ಯ ಸಂಸ್ಕಾರ ನಡೆಯಿತು.

Leave a Comment