ಹೊಸಗ್ರಹದಲ್ಲಿ ಜೀವಿಗಳ ಸಾಧ್ಯತೆ

ಅನ್ಯಗ್ರಹಗಳಲ್ಲಿ ಜೀವಿಗಳ ಶೋಧನೆಯಲ್ಲಿ ತೊಡಗಿರುವ ಖಗೋಳ ವಿಜ್ಞಾನಿಗಳಲ್ಲಿ ಇತ್ತೀಚೆಗೆ ಪತ್ತೆ ಹಚ್ಚಲಾಗಿರುವ ಸೂಪರ್ ಅರ್ಥ್ ಗ್ರಹ ಆ ನಿಟ್ಟಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ.

ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಇತ್ತೀಚೆಗೆ ಹೊಸ ಗ್ರಹವನ್ನು ಪತ್ತೆ ಹಚ್ಚಿದ್ದು ಅದನ್ನು ಸೂಪರ್ ಅರ್ಥ್ ಎಂದಿದ್ದಾರೆ.

40 ಜ್ಯೋತಿರ್ಷಿಗಳ ಆಚೆ ಇರುವ ಈ ಗ್ರಹ 5 ಶತಕೋಟಿ ವರ್ಷಗಳ ಹಿಂದಿನದು ಎಂದು ಅಂದಾಜಿಸಲಾಗಿದೆ.

ಅನ್ಯಗ್ರಹಗಳಲ್ಲಿ ಜೀವಿಗಳನ್ನು ಹುಡುಕುವ ವಿಜ್ಞಾನಿಗಳಿಗೆ ಈ ಗ್ರಹದ ಶೋಧನೆ ಪ್ರೇರೇಪಿಸಿದೆ.

ಭೂ ವಾತಾವರಣದ ಅಂಶಗಳು ಈ ಗ್ರಹದಲ್ಲಿ ಇರುವ ಸಂಭವದಲ್ಲೇ ಇದಕ್ಕೆ ಕಾರಣ.

40 ಬೆಳಕಿನ ವರ್ಷಗಳ ದೂರದಲ್ಲಿ ಪತ್ತೆ ಹಚ್ಚಿರುವ ಸೌರಮಂಡಲ ಆಚೆಯ ಈ ಗ್ರಹದಲ್ಲಿ ಜೀವಿಗಳನ್ನು ಹುಡುಕಲು ಅವಕಾಶವಿದೆ ಎಂದು ವಿಜ್ಞಾನಿಗಳ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡ ಯುರೋಪಿಯನ್ ಸದರನ್ ಅಬ್ಸರ್ವೆಟಿಯಂನ ಹಾರ್ಪ್ಸ್ ಸಾಧನಗಳನ್ನು ಬಳಸಿ ಪತ್ತೆ ಹಚ್ಚಲಾದ ಈ ಸೂಪರ್ ಅರ್ಥ್ ಗ್ರಹ ಕೆಂಪಗಿನ ಚಿಕ್ಕ (ರೆಡ್ ಡ್ವಾರ್ಫ್) ನಕ್ಷತ್ರವೊಂದರ ಸುತ್ತಲೂ ಸುತ್ತಿದೆ. ಆ ನಕ್ಷತ್ರವನ್ನು ಎಲ್.ಹೆಚ್.ಎಸ್. 1140 ಎಂದು ಗುರುತಿಸಲಾಗಿದ್ದು, ಇದನ್ನು ಸುತ್ತುತ್ತಿರುವ ಹೊಸಗ್ರಹಕ್ಕೆ ಎಲ್.ಹೆಚ್.ಎಸ್. 1140 ಬಿ ಎಂದು ಹೆಸರಿಸಲಾಗಿದೆ.

ಸೂಪರ್ ಅರ್ಥ್

ಭೂಮಿಗಿಂತ ವ್ಯಾಸದಲ್ಲಿ ದ್ರವ್ಯ ರಾಶಿಯಲ್ಲಿ ದೊಡ್ಡದಾಗಿರುವುದರಿಂದ ಗ್ರಹವನ್ನು ಸೂಪರ್ ಅರ್ಥ್ ಎಂದು ಕರೆಯಲಾಗಿದೆ.

ಭೂಮಿಯನ್ನು ಬಿಟ್ಟು ಅನ್ಯಗ್ರಹಗಳಲ್ಲಿ ಜೀವಗಳನ್ನು ಹುಡುಕುವ ವಿಜ್ಞಾನಿಗಳ ಶೋಧನೆಗೆ ಈ ನೂತನ ಗ್ರಹ ಉತ್ತಮ ತಾಣ ಎಂದು ಅಮೆರಿಕಾದ ಹಾರ್ವರ್ಡ್ ಸ್ಮಿತ್ ಸೋನಿಯಾ ಖಗೋಳ ಸಂಶೋಧನಾ ಕೇಂದ್ರದ ವಿಜ್ಞಾನಿ ಜಾನ್ಸನ್ ಡಿಟ್ಟಮನ್ ಹೇಳಿದ್ದಾರೆ.

ಭೂಮಿಗೂ ಸೂರ್ಯನಿಗೂ ಇರುವ ದೂರಕ್ಕಿಂತ ಈ ಗ್ರಹ ತಾನು ಸುತ್ತುವ ನಕ್ಷತ್ರಕ್ಕೆ 10 ಪಟ್ಟು ಹತ್ತಿರದಲ್ಲಿದೆ. ಹೀಗಾಗಿ ಭೂಮಿಗೆ ಬರುವ ಸೂರ್ಯನ ಬೆಳಕಿನ ಪ್ರಮಾಣದಲ್ಲಿ ಅರ್ಧದಷ್ಟು ಬೆಳಕು ಈ ಗ್ರಹ ಪಡೆಯುತ್ತದೆ.

ವಾತಾವರಣವಿದೆ

ಯಾವುದೇ ಗ್ರಹದಲ್ಲಿ ಜೀವಿಗಳು ಜೀವಿಸಲು ಅಲ್ಲಿ ನೀರಿನ ಅಂಶಗಳು ಇರಬೇಕು. ಹಾಗೂ ಅಲ್ಲಿಯ ವಾತಾವರಣದಲ್ಲಿ ಭೂಮಿಯ ಮೇಲಿನ ವಾತಾವರಣದ ಅಂಶಗಳು ಇರಬೇಕು. ಅಂತಹ ಅಂಶಗಳು ಇಲ್ಲಿ ಇರುವ ಸಂಭವ ಇದೆ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ.

ಈ ಗ್ರಹದ ವಯೋಮಾನವನ್ನು ಅಂದಾಜಿಸಲಾಗಿದ್ದು ಅದು ಕನಿಷ್ಠ 5 ಶತಕೋಟಿ ವರ್ಷಗಳ ಹಿಂದಿನದು ಎನ್ನಲಾಗಿದೆ.

-ಉತ್ತನೂರು ವೆಂಕಟೇಶ್

Leave a Comment