ಹೊಲಿಗೆ ತರಬೇತಿ ಕೇಂದ್ರಕ್ಕೆ ಚಾಲನೆ

ಹೊಸಪೇಟೆ.ಅ.24 ಸ್ಥಳೀಯ ದೇವಾಂಗ ಪೇಟೆಯ ಶ್ರೀಬನಶಂಕರಿ ದೇವಸ್ಥಾನದ ಮೇಲಿನ ಸಮುದಾಯ ಭವನದಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ.

ಸ್ಥಳೀಯ ಎಂ.ಎಸ್.ಪಿ.ಎಲ್ ಸಂಸ್ಥೆ ಹಾಗೂ ದೇವಾಂಗ ಮಹಿಳಾ ಸಮಾಜದ ವತಿಯಿಂದ ಆರಂಭಿಸಲಾಗಿರುವ ಉಚಿತ ಹೊಲಿಗೆ ತರಬೇತಿ ಕೇಂದ್ರಕ್ಕೆ ಎಂ.ಎಸ್.ಪಿ.ಎಲ್.ಸಂಸ್ಥೆಯ ಸಾಮಾಜಿಕ ಸೇವಾ ವಿಭಾಗದ ಮುಖ್ಯಸ್ಥ ಹೆಚ್.ಕೆ.ರಮೇಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಹಿಳೆಯರು ಉಚಿತ ಹೊಲಿಗೆ ತರಬೇತಿ ಕೇಂದ್ರದ ಸದುಪಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವಾಂಗ ಸಮಾಜದ ಅಧ್ಯಕ್ಷ ಭಾಸ್ಕರ್ ಮಾತನಾಡಿ, ದೇವಾಂಗ ಸಮಾಜದ ಮಹಿಳೆಯರು ಉಚಿತ ಹೊಲಿಗೆ ತರಬೇತಿ ಕೇಂದ್ರದ ಉಪಯೋಗ ಪಡೆಯುವ ಮೂಲಕ ಸಮಾಜದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಮಹಿಳಾ ಸಮಾಜದ ಅಧ್ಯಕ್ಷೆ ರೇಣುಕಾ ಪರಗಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಂ.ಎಸ್.ಪಿ.ಎಲ್. ಸಂಸ್ಥೆಯ ನಾಗರಾಜ, ದೇವಾಂಗ ಮಹಿಳಾ ಸಮಾಜದ ಮುಖಂಡರಾದ ಮೀನಾಕ್ಷಿ ಕೊಳಗದ, ಅನಿತಾ ನಿರಾಳದ ಸೇರಿದಂತೆ ಸಮಾಜದ ಬಂಧುಗಳು ಭಾಗವಹಿಸಿದ್ದರು.
ಸರೋಜ, ವಿದ್ಯಾ ಪ್ರಾರ್ಥಿಸಿದರು. ಸಂಗೀತಾ ಗೋಸಿ ಸ್ವಾಗತಿಸಿದರು. ಕೀರ್ತಿ ಗೋಸಿ ನಿರೂಪಿಸಿದರು. ಅನುಷಾ ಕಾಖಂಡಕಿ ವಂದಿಸಿದರು.

Leave a Comment