ಹೊಟ್ಟೆಯ ಕ್ಯಾನ್ಸರ್ ಎಚ್ಚರ ವಹಿಸಿ

ಕ್ಯಾನ್ಸರ್ ಎನ್ನುವುದು ಜೀವ ಹಿಂಡುವ ಭಯಂಕರ ರೋಗ. ಇದು ಒಮ್ಮೆ ದೇಹದೊಳಗೆ ಪ್ರವೇಶಿಸಿದರೆ, ಆ ವ್ಯಕ್ತಿಯನ್ನು ಹಿಂಡಿಹಿಪ್ಪೆ ಮಾಡಿ ಬಿಸಾಕುತ್ತದೆ. ಮೊದಲ ಹಂತದಲ್ಲಿಯೇ ಚಿಕಿತ್ಸೆ ಸಿಗದೇ ಇದ್ದರೆ ಪ್ರಾಣಾಪಾಯವಾಗುವುದು ಖಚಿತ.

ಅದರಲ್ಲೂ ಹೊಟ್ಟೆಯ ಕ್ಯಾನ್ಸರ್ ಸಹಿಸಲು ಸಾಧ್ಯವಾಗದ ನೋವನ್ನು ನೀಡುವುದು. ಬೇರೆ ವಿಧದ ಕ್ಯಾನ್ಸರ್‌‌ಗಳು ಮೊದಲೇ ತಮ್ಮ ಲಕ್ಷಣಗಳನ್ನು ತೋರಿಸಿದರೆ, ಹೊಟ್ಟೆಯ ಕ್ಯಾನ್ಸರ್ ಮಾತ್ರ ಅದರ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇದನ್ನು ಪತ್ತೆಹಚ್ಚುವುದು ಸ್ವಲ್ಪ ಕಠಿಣ.

ಹೊಟ್ಟೆನೋವು ಕಾಣಿಸಿಕೊಂಡಾಗ ಪ್ರತಿಯೊಬ್ಬರೂ ಇದು ಸಾಮಾನ್ಯ ಹೊಟ್ಟೆ ನೋವೆಂದು ಭಾವಿಸುತ್ತಾರೆ. ಆದರೆ ಹೊಟ್ಟೆನೋವು ಒಂದು ದಿನಕ್ಕಿಂತ ಹೆಚ್ಚು ಮತ್ತು ಪದೇ ಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸರಿಯಾದ ಪರೀಕ್ಷೆಗಳನ್ನು ತಕ್ಷಣ ನಡೆಸಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಬೇಕು.

ಯಾಕೆಂದರೆ, ಈ ಹೊಟ್ಟೆನೋವು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಹೊಟ್ಟೆಯ ಕ್ಯಾನ್ಸರ್ ತನ್ನ ಸುಳಿವನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ಆದರೂ ಕೆಲವೊಂದು ಲಕ್ಷಣಗಳು ಕಾಣಿಸಿಕೊಂಡರೆ ನೀವು ಎಚ್ಚರ ವಹಿಸಿ. ಮಲದಲ್ಲಿ ರಕ್ತ ಅಥವಾ ವಾಂತಿಯಲ್ಲಿ ರಕ್ತ ಕಾಣಿಸಿಕೊಂಡರೆ, ಆಗ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಇದು ಹೊಟ್ಟೆಯ ಕ್ಯಾನ್ಸರ್‌‌ನ ಲಕ್ಷಣಗಳಲ್ಲಿ ಒಂದಾಗಿರುವ ಸಾಧ್ಯತೆಯಿದೆ.

ತೂಕ ಕಳೆದುಕೊಳ್ಳಲು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೂ ನಿಮ್ಮ ತೂಕ ಕಡಿಮೆಯಾಗುತ್ತಾ ಇದೆ ಎಂದಾದರೆ, ಖಂಡಿತವಾಗಿಯೂ ನೀವು ಇದನ್ನು ಪರೀಕ್ಷಿಸಿಕೊಳ್ಳಿ. ಹಠಾತ್ ಆಗಿ ತೂಕ ಕಡಿಮೆಯಾದರೆ ಇದರ ಬಗ್ಗೆ ಎಚ್ಚರ ವಹಿಸಿ.

Leave a Comment