ಹೊಟ್ಟೆಯ ಕ್ಯಾನ್ಸರ್ ಅಲಕ್ಷ್ಯ ಬೇಡ.

ಕ್ಯಾನ್ಸರ್ ಎಂದರೆ ಮಾರಣಾಂತಿಕ ಕಾಯಿಲೆ ಎಂದು  ಎಲ್ಲರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಕ್ಯಾನ್ಸರ್ ಹಂತ ಹಂತಗಳಲ್ಲಿ ಆವರಿಸುತ್ತಾ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಪ್ರಾರಂಭಿಕ ಹಂತದಲ್ಲಿ ಈ ರೋಗ ಇರುವುದು ಖಚಿತವಾದರೆ ಸೂಕ್ತ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು
ಹೊಟ್ಟೆಯ ಕ್ಯಾನ್ಸರ್ ಸಹಾ ಒಂದು ಅಪಾಯಕಾರಿಯಾದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಪ್ರಾರಂಭಿಕ ಹಂತವನ್ನು ಹೊಟ್ಟೆನೋವಿನ ಇತರ ಕಾರಣಗಳಿರಬಹುದೆಂದು ತಿಳಿದು ಚಿಕಿತ್ಸೆ ನೀಡುವ ಮೂಲಕ ಅಮೂಲ್ಯವಾದ ಸಮಯವನ್ನು ಕಳೆದು ಉಲ್ಬಣಾವಸ್ಥೆ ತಲುಪಲು ಸಾಧ್ಯವಾಗಬಹುದು.
ಹೊಟ್ಟೆಯ ಕ್ಯಾನ್ಸರ್ ಮೊದಲು ಹೊಟ್ಟೆಯ ಒಳಪದರದ ಒಳಗೆ ಪ್ರಾರಂಭಗೊಂಡು ಗಡ್ಡೆಯ ರೂಪ ಪಡೆದು ನಂತರ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸೂಕ್ತ ಆಹಾರ ಕ್ರಮ  ಹೊಟ್ಟೆಯ ಒಳಪದರ ಅತ್ಯಂತ ಆಮ್ಲೀಯವಾಗಿದ್ದು ಈ ಪದರವೂ ಸತತವಾಗಿ ಹೊಸದಾಗಿ ರೂಪುಗೊಳ್ಳುತ್ತಾ ಇರುತ್ತದೆ. ಈ ಪದರದ ಜೀವಕೋಶಗಳು ಈ ಆಮ್ಲೀಯ ವಾತಾವರಣದಲ್ಲಿಯೇ ಅನಿಯಂತ್ರಿತವಾಗಿ ವೃದ್ಧಿಗೊಂಡು ಕ್ಯಾನ್ಸರ್‌ಗೆ ತಿರುಗಬೇಕಾದರೆ ಯಾವ ಕಾರಣಗಳಿವೆ ಎಂಬುದನ್ನು ಇದುವರೆಗೆ ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗಿಲ್ಲ
ಒಂದು ವೇಳೆ ನೀವು ಅತಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಯಾಗಿದ್ದರೆ ನಿಮ್ಮ ಹೊಟ್ಟೆಯ ಒಳಗೆ ಉರಿಯೂತವಾಗುವ ಸಾಧ್ಯತೆ ಅತಿ ಹೆಚ್ಚಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಉರಿ ಆಗಾಗ ಬರುತ್ತಿದ್ದರೆ ಇದಕ್ಕೆ ಆಮ್ಲೀಯತೆಯ ಹೊರತಾಗಿ ಕ್ಯಾನ್ಸರ್‌ನ ಸಾಧ್ಯತೆಯೂ ಇಲ್ಲದಿಲ್ಲ. ತಕ್ಷಣ ತಪಾಸಣೆಗೊಳಪಡುವುದು ಅವಶ್ಯಕ.
ಒಂದು ವೇಳೆ ಕುಟುಂಬದ ಹಿರಿಯರಲ್ಲಿಯೂ ಈ ಕ್ಯಾನ್ಸರ್ ಇದ್ದ ಹಿನ್ನಲೆ ಇದ್ದರೆ ಈ ಕಾಯಿಲೆ ಕುಟುಂಬದ ಸದಸ್ಯರಿಗೆ ಬರುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಕಾಯಿಲೆ ಅನುವಂಶಿಯವಾಗಿ ಬರುವ ಸಾಧ್ಯತೆ ಹೆಚ್ಚು.
ಕೆಲವು ಬಗೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗುತ್ತವೆ. ಅಸಮರ್ಪಕ ಆಹಾರಕ್ರಮ, ಸ್ಥೂಲಕಾಯ ಮೊದಲಾದವೂ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದು.
ಹೊಟ್ಟೆಯ ಕ್ಯಾನ್ಸರ್‌ನ ಪ್ರಾರಂಭಿಕ ಹಂತದಲ್ಲಿ ಆಹಾರವನ್ನು ನುಂಗುವಾಗ ಕಷ್ಟವಾಗುವುದು ಮತ್ತು ಹೊಟ್ಟೆಯಲ್ಲಿ ತೀಕ್ಷ್ಣವಾದ ನೋವಾಗುವುದು ಕಂಡುಬರುತ್ತದೆ.
ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ, ತೂಕದಲ್ಲಿ ಭಾರೀ ಇಳಿಕೆಯಾಗುವುದು ಅತಿ ಕಡಿಮೆ ಊಟ ಮಾಡಿದರೂ ತುಂಬಾ ತಿಂದ ಬಳಿಕ ಆಗುವಂತೆ ಹೊಟ್ಟೆ ಉಬ್ಬರಿಸುವುದು ಸಹಾ ಕ್ಯಾನ್ಸರ್‌ನ ಪ್ರಾರಂಭಿಕ ಹಂತದ ಲಕ್ಷಣಗಳಾಗಿವೆ.
ಕೆಲವು ಸಂದರ್ಭಗಳಲ್ಲಿ ಕೆಲವು ದಿನಗಳವರೆಗೆ ಸತತವಾಗಿ ವಾಂತಿಯೂ ಆಗಬಹುದು. ಒಂದು ವೇಳೆ ವಾಂತಿ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ಇದು ನಿಮ್ಮ ಜೀರ್ಣವ್ಯವಸ್ಥೆಯಲ್ಲಿ ಏನೋ ತೊಂದರೆ ಇರುವುದನ್ನು ಸೂಚಿಸುತ್ತದೆ. ತಕ್ಷಣ ವೈದ್ಯರನ್ನು ಭೇಟಿಯಾಗಿ ತಪಾಸಣೆಗೊಳಪಡುವುದು ಅಗತ್ಯವಾಗಿದೆ.

Leave a Comment