ಹೊಂಡದಲ್ಲಿ ಮುಳುಗಿ ೪ ಮಕ್ಕಳ ಸಾವು

ಫಿಲಿಬಿಟ್ (ಉ.ಪ್ರ.), ಆ. ೧೬: ಮಳೆ ನೀರಿನಿಂದ ತುಂಬಿದ್ದ ಹೊಂಡವೊಂದರಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟ ದಾರುಣ ಜಿಲ್ಲೆಯ ಬರ್ಹಿ ಗ್ರಾಮದಲ್ಲಿ ನಡೆದಿದೆ.

ಮನೋಜ್ (೧೨), ಅಜಯ್ (೧೨), ಜೀತು (೧೦) ಮತ್ತು ಪ್ರದೀಪ್ (೮) ಎಂಬ ಮಕ್ಕಳು ನೀರಿನ್ನಲ್ಲಿ ಆಕಸ್ಮಿಕ ಮುಳುಗಿ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿರಿಯ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ದೇಹಗಳನ್ನು ನೀರಿನಿಂದ ಹೊರತೆಗೆದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment