ಹೈಬ್ರೀಡ್‌ಗೆ ಸಿದ್ದತೆ

ದರ್ಪಣ ಅಘೋರಿ ಸೇರಿದಂತೆ ಸುಮಾರು ಹದಿನೈದು ಚಿತ್ರಗಳಿಗೆ ಸಂಗೀತ ನೀಡಿ ಉತ್ತಮ ಸಂಗೀತ ನಿರ್ದೇಶಕ ಎಂದು ಗಮನ ಸೆಳೆದಿರುವ ಕಾರ್ತಿಕ್ ವೆಂಕಟೇಶ್ ಹೈಬ್ರೀಡ್’ ಎನ್ನುವ ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಕತೆ ರಚಿಸಿ, ಅನಿಮೇಶನ್‌ದಲ್ಲಿ ಚಿತ್ರಕತೆಯನ್ನು ಸಿದ್ದಪಡಿಸಿಕೊಂಡಿದ್ದಾರೆ.

ಸದ್ಯದಲ್ಲಿಯೇ ಆರಂಭವಾಗುವ ಹೈಬ್ರೀಡ್’ ಚಿತ್ರಕ್ಕೆ ನಾಯಕನಾಗಿ ಫೈಜರ್‌ಖಾನ್,ಲಗಾನ್ ಖ್ಯಾತಿಯ ಗ್ರೇಸಿಸಿಂಗ್ ನಾಯಕಿಯಾಗುವ ಸಾದ್ಯತೆಗಳಿವೆ.ಹೈಬ್ರೀಡ್ ಸಿನಿಮಾವನ್ನು ಪ್ರಯೋಗಾತ್ಮಕವಾಗಿ ರೂಪಿಸಲು ಕಾರ್ತಿಕ್ ವೆಂಕಟೇಶ್ ಸಿದ್ದತೆ ನಡೆಸಿದ್ದಾರೆ.

ಇಂಜಿನಿಯರಿಂಗ್ ಮುಗಿಸಿ ಬಣ್ಣದ ಬದುಕಿನ ಸೆಳೆತದಿಂದ ಚಿತ್ರರಂಗಕ್ಕೆ ಬಂದಿರುವ ಕಾರ್ತಿಕ್  ೨೦೦೪ರಲ್ಲಿ ದರ್ಪಣ ಚಿತ್ರಕ್ಕೆ ಕತೆ ಬರೆದಿದ್ದರು.೨೦೧೫ರಲ್ಲಿ ವೋಜಸ್ ಚಿತ್ರದ ಮೂಲಕ ಗಮನಸೆಳೆದ ಅವರು ೨೦೦೭ರಲ್ಲಿ ಆಲ್ಬಂ ಸಿದ್ದಪಡಿಸಿದ್ದನ್ನು ನೋಡಿದ ನಿರ್ಮಾಪಕರೊಬ್ಬರು ’ಅಘೋರಿ’ ಸಿನಿಮಾಕ್ಕೆ ಸಾಹಿತ್ಯ, ಸಂಗೀತ ನೀಡಲು ಅವಕಾಶ ನೀಡಿದ್ದರು.

ದರ್ಪಣ ಚಿತ್ರದ. ೨೧ ವಿಭಾಗದಲ್ಲಿ  ಕೆಲಸ ಮಾಡಿದ್ದರಿಂದ ಕಾರ್ತಿಕ್ ವೆಂಕಟೇಶ್ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ಹದಿನೈದು ಚಿತ್ರಗಳಿಗೆ ಸಂಗೀತ ಒದಗಿಸಿದ್ದು, ಹಾಡುಗಳು ಚೆನ್ನಾಗಿದ್ದರೂ ಸಿನೆಮಾಗಳು ಯಶಸ್ಸು ಕಾಣದಿರುವುದರಿಂದ ಹೆಚ್ಚಿನ ಅವಕಾಸಗಳು ದೊರೆಯಲಿಲ್ಲ ಎನ್ನುತ್ತಾರೆ ಕಾರ್ತಿಕ್.ಮರಳಿ ಯತ್ನವ ಮಾಡು ಎನ್ನುವಂತೆ ಬಾಲಿವುಡ್‌ನಲ್ಲಿ ’ಹೈಬ್ರೀಡ್’ ಎನ್ನುವ  ಸೈನ್ಸ್ ಫಿಕ್ಷನ್ ಚಿತ್ರಕ್ಕೆ ಕಾರ್ತಿಕ್ ಕೈ ಹಾಕಿದ್ದಾರೆ.

Leave a Comment