ಹೈಕ ಆದ್ಯತೆ ಚರ್ಚೆಗೆ ಸಿಎಂ ನೇತೃತ್ವದ ಸಭೆ

ಕಲಬುರಗಿ ಸ8: ಹೈದರಾಬಾದ ಕರ್ನಾಟಕ ಪ್ರದೇಶದ ಶಿಕ್ಷಣ, ಆರೋಗ್ಯ,ಉದ್ಯೋಗ,ನೀರಾವರಿ ಮೂಲಸೌಲಭ್ಯ ಮೊದಲಾದ ಆದ್ಯತಾವಲಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಭಾಗದ ಸಚಿವ ಶಾಸಕರ ಉನ್ನತ ಮಟ್ಟದ ಸಭೆಯನ್ನು ಸದ್ಯದಲ್ಲಿಯೇ ನಗರದಲ್ಲಿ ನಡೆಸಲಾಗುವದು ಎಂದು ಸಹಕಾರಿ ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಸೆಂಪುರ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಚ್‍ಕೆಆರ್‍ಡಿಬಿ ಅನುದಾನದಲ್ಲಿ ಕಡಿತವಾಗಲು ಸಾಧ್ಯವಿಲ್ಲ .ಹಾಗೇನಾದರೂ ಆದರೆ ಅದರ ವಿರುದ್ಧ  ನಾನು ಧ್ವನಿ ಎತ್ತುತ್ತೇನೆ ಎಚ್‍ಕೆಆರ್‍ಡಿಬಿ ಅಧ್ಯಕ್ಷರ ಸ್ಥಾನದ ರೇಸಿನಲ್ಲಿ ನಾನು ಇಲ್ಲ ಎಂದರು.

ಹೊರರಾಜ್ಯದಿಂದ ಕಳಪೆ ಗುಣಮಟ್ಟದ ಹಾಲು ಪೂರೈಕೆಯಾಗುತ್ತಿದೆ ಎಂಬ ದೂರುಗಳ ಬಂದಿದ್ದು ಕಳಪೆಗುಣಮಟ್ಟದ ಹಾಲನ್ನು ಯಾರೇ ಪೂರೈಸಿದರೂ ಅವರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಈ ಭಾಗದಲ್ಲಿ ಮಿಲ್ಕ್ ಫೀಡ್ ಪ್ಲಾಂಟ್ ಸ್ಥಾಪನೆಗೆ ಚಿಂತನೆ ನಡೆದಿದೆ ಎಂದರು

ಸಾಲಮನ್ನಾ:

30 ಸಾವಿರ ಕೋಟಿ ರೂಗಳ ರೈತಸಾಲಮನ್ನಾ ಪ್ರಕ್ರಿಯೆ ಆರಂಭವಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.ಬ್ಯಾಂಕಿನವರು ಲೇವಾದೇವಿದಾರರು ರೈತರಿಗೆ ಕಿರುಕುಳ ನೀಡದಂತೆ  ಅಧಿಕಾರಿಗಳಿಗೆ ಸೂಚಿಸಲಾಗಿದೆ.ಋಣಮುಕ್ತ ಕಾಯಿದೆಗೆ ಸಂಪುಟ ಅಸ್ತು ಎಂದಿದ್ದು ರಾಜ್ಯಪಾಲರ ಅಂಕಿತಕ್ಕೆ ಕಳಿಸಲಾಗಿದೆ. ಜಿಲ್ಲೆಯ ಸುಮಾರು 70 ಪ್ರತಿಶತ ರೈತರು ಯಾವುದೇ ಬ್ಯಾಂಕುಗಳ ಸಾಲಸೌಲಭ್ಯದ ವ್ಯಾಪ್ತಿಯಲ್ಲಿ ಇಲ್ಲ.ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಬರುವ 1 ವರ್ಷದಲ್ಲಿ ರಾಜ್ಯದ ಸುಮಾರು 15 ಲಕ್ಷ ರೈತರನ್ನು ಸಾಲಸೌಲಭ್ಯದ ವ್ಯಾಪ್ತಿಗೆ ತರಲಾಗುವದು

ಪ್ರತಿ ರೈತರಿಂದ 10 ಕ್ವಿಂಟಾಲುಗಳಂತೆ 4740 ರೂ ದರದಲ್ಲಿ ಹೆಸರು ಖರೀದಿಸಲು ರಾಜ್ಯದಲ್ಲಿ 101 ಖರೀದಿಕೇಂದ್ರ ಆರಂಭಿಸಲಾಗಿದೆ ಎಂದರು…

Leave a Comment