ಹೈಕವ್ಯಾಪ್ತಿಗೆ ಹೊಸಹಳ್ಳಿಗಳ ಸೇರ್ಪಡೆಗೆ ವಿರೋಧ

ಕಲಬುರಗಿ ಮಾ 13: ಹೈದರಾಬಾದ ಕರ್ನಾಟಕ ವ್ಯಾಪ್ತಿಗೆ ಗದಗ ಜಿಲ್ಲೆಯ 28 ಹಳ್ಳಿ ಮತ್ತು ಮುಂಡರಗಿ ತಾಲೂಕಿನ ಕೆಲವು ಹಳ್ಳಿಗಳ ಸೇರ್ಪಡೆ ವಿಚಾರವನ್ನು ಅಹಿಂದ ಚಿಂತಕರ ವೇದಿಕೆ ತೀವ್ರವಾಗಿ ಖಂಡಿಸಿದೆ. 371(ಜೆ) ಜಾರಿ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ಅವರು ಈ ಕುರಿತು ಹುನ್ನಾರ ನಡೆಸಿದ್ದು ನಿರ್ಣಯ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡುವದಾಗಿ ವೇದಿಕೆ ರಾಜ್ಯಾಧ್ಯಕ್ಷ ಸೈಬಣ್ಣಾ ಜಮಾದಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ ಶರಣಪ್ರಕಾಶ ಪಾಟೀಲ, ಸಚಿವ ಬಸವರಾಜ ರಾಯರೆಡ್ಡಿ ಅವರು ವಿಷಯ ಕುರಿತಂತೆ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ .ಈ ಪ್ರಸ್ತಾಪವನ್ನು ತಳ್ಳಿಹಾಕಲಾಗಿದೆ. ಎಂದು ಹೇಳುವ ಮೂಲಕ ಜನರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ.ಈ ಕುರಿತು ಜನತೆಗೆ ಸ್ಪಷ್ಟನೆ ನೀಡಬೇಕು ಎಂದರು. ರಾಜೇಂದ್ರ ರಾಜವಾಳ, ರಮೇಶ ಹಡಪದ,ದಿಗಂಬರ ಕಾಡೊಲಿ ಸಿದ್ರಾಮಪ್ಪ ಘಾಳೆ ಸುದ್ದಿಗೋಷ್ಠಿಯಲ್ಲಿದ್ದರು

Leave a Comment