ಹೇರೋಹಳ್ಳಿ ಉದ್ಯಾನವನಕ್ಕೆ ಮರು ಜೀವ

ಬೆಂಗಳೂರು,ಆ.೧೭- ಹೇರೋಹಳ್ಳಿ ಬಳಿಯ ’ಡಿ’ ಗ್ರೂಪ್ ಬಡಾವಣೆಯಲ್ಲಿ ನಿರ್ವಹಣೆಯಿಲ್ಲದೇ ಹಾಳಾಗಿದ್ದ ಉದ್ಯಾನವನಕ್ಕೆ ಮರು ಜೀವ ತರಲು ರೋಟರಿ ಬೆಂಗಳೂರು ಮುಂದಾಗಿದೆ.
ರೋಟರಿ ಬೆಂಗಳೂರು ಉದ್ಯಾನವನವನ್ನು ವಿಶ್ವನೀಡಂ ವತಿಯಿಂದ ದತ್ತು ಪಡೆದು ವನಸಿರಿ ಯೋಜನೆಯನ್ನು ರೂಪಿಸಿ ಆರೋಗ್ಯ ವರ್ಧಕ ಗಿಡಗಳನ್ನು ನೆಡುವ ಮೂಲಕ ಸ್ವಚ್ಚ ಸುಂದರ ಉದ್ಯಾನವನ್ನಾಗಿಸಿದ್ದಾರೆ. ಇಷ್ಟೇ ಅಲ್ಲದೆ ಪುಡಾರಿಗಳಿಂದ ಹಾನಿಗೊಳಗಾಗಿದ್ದ ಆಸನಗಳನ್ನು ತೆಗೆದುಹಾಕಿ ಹೊಸದಾಗಿ ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನೂತನವಾಗಿ ನಿರ್ಮಿಸಲ್ಪಟ್ಟ ವಿಶ್ರಾಂತಿತಾಣ ಉದ್ಯಾನವನದ ಮೆರುಗನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಉದ್ಯಾನವನಕ್ಕೆ ಬರುವ ಮಕ್ಕಳ ಅನುಕೂಲಕ್ಕಾಗಿ ಆಟದ ಉಪಕರಣಗಳ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.
ರೋಟರಿ ಬೆಂಗಳೂರು ವಿಶ್ವನೀಡಂ ಅಧ್ಯಕ್ಷ ಕೆ.ಟಿ.ನಿರಂಜನ್ ಸಸಿ ನೆಡುವ ಮೂಲಕ ವನಸಿರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಉದ್ಯಾನವನದಲ್ಲಿ ಔಷಧಿ ಗಿಡಗಳು, ಅಂಲಂಕಾರಿಕ ಗಿಡಗಳು, ಹೂ ಬಿಡುವ ಮರಗಿಡಗಳನ್ನು ಬೆಳೆಸಲಾಗುತ್ತಿದೆ, ಗ್ರಾಮೀಣ ಪ್ರದೇಶದ ಐದು ಸರ್ಕಾರಿ ಶಾಲೆಗಳಿಗೆ ಶೀಘ್ರದಲ್ಲಿಯೇ ಶುದ್ಧ ಕುಡಿಯುವ ನೀರು ದೊರಕಿಸಿಕೊಡಲು ರೋಟರಿ ಸಂಸ್ಥೆ ಮುಂದಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ಬಹುತೇಕರು ಸಾಧಕರಾಗಿ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಮಾನವೀಯತೆ, ಸಮಾಜದ ಸುಧಾರಣೆ, ರಕ್ಷಣೆಯಂತಹ ಗುಣಗಳನ್ನು ಕಾಣಬಹುದು. ಮುಂದಿನ ದಿನಗಳಲ್ಲಿ ಹಿಂದುಳಿದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆಧ್ಯತೆ ನೀಡಲಾಗುವುದು ಎಂದರು.
ಕ್ಯಾಪ್ಶನ್
ಹೇರೋಹಳ್ಳಿ ಬಳಿಯ ’ಡಿ’ ಗ್ರೂಪ್ ಬಡಾವಣೆಯಲ್ಲಿ ರೋಟರಿ ಬೆಂಗಳೂರು ವಿಶ್ವನೀಡಂ ವತಿಯಿಂದ ಉದ್ಯಾನವ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದು.

Leave a Comment