ಹೆಸರು ರೇವಣ್ಣ ,ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ : ಕೆಎನ್ ರಾಜಣ್ಣ ಲೇವಡಿ

ತುಮಕೂರು,ಜು 14- ಅವರ ಹೆಸರು ರೇವಣ್ಣ ಆದರೆ ಅವರ ಕೆಲಸ ಕಾರ್ಯಗಳೆಲ್ಲಾ ರಾವಣನ ರೀತಿ. ಹೀಗಾಗಿ ಅವರ ಹೆಸರನ್ನು ರಾವಣ ಎಂದು ಹೆಸರು ಇಡಬೇಕಿತ್ತು. ಅದು ಯಾಕೋ ಅವರಪ್ಪ ರೇವಣ್ಣ ಎಂದು ಇಟ್ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಲಕ್ಷ್ಮಣ ಸವದಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಸಚಿವ ರೇವಣ್ಣನ ಕಾಟಕ್ಕೆ ಯಾವ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವುದಿಲ್ಲ.ಅವರಿಗೆಲ್ಲ ರೇವಣ್ಣ ಅಷ್ಟೊಂದು ಕಾಟ ಕೊಟ್ಟಿದ್ದಾರೆ. ಅವರ ಹೆಸರು ಮಾತ್ರ ರೇವಣ್ಣ, ಅವರ ಕಾರ್ಯಕ್ರಮ ಎಲ್ಲಾ ರಾವಣನ ರೀತಿ ಇದೆ. ಅವರ ಅಪ್ಪ ರಾವಣ ಎಂದೇ ಹೆಸರಿಡಬೇಕಿತ್ತು ಆದರೆ ರೇವಣ್ಣ ಎಂದು ನಾಮಕರಣ ಮಾಡಿದ್ದಾರೆ. ಸರ್ಕಾರ ಪತನಗೊಳ್ಳುವುದಕ್ಕೆ ರೇವಣ್ಣನೇ ಕಾರಣ ಎಂದು ರಾಜಣ್ಣ ಟೀಕಿಸಿದರು.

ರಾಜ್ಯದಲ್ಲಿ ಸರ್ಕಾರವೇ ಇಲ್ಲ. ವಿಶ್ವಾಸ ಮತ ಸಾಬೀತು ಹೇಗೆ? ಸರ್ಕಾರವೇ ಇಲ್ಲ ಅಂದ ಮೇಲೆ ಬಹುಮತ ಸಾಬೀತಿನ ಫಲಿತಾಂಶ ಏನಾಗಲಿದೆ ಎಂದು ಏಕೆ ಕೇಳುತ್ತೀರಾ ? ಚುನಾವಣೆಗೆ ಸ್ಪರ್ಧಿಸಿದಾಗ ಎಲ್ಲರೂ ಗೆಲುತ್ತೇವೆ ಎನ್ನುತ್ತಲೇ ಹೇಳುವುದು ಸೋಲುತ್ತೇವೆ ಎಂದು ಯಾರೂ ಹೇಳುವುದಿಲ್ಲ ಫಲಿತಾಂಶ ಬಂದಾಗಲೇ ಯಾರು ಸೋಲುತ್ತಾರೆ ಮತ್ತೆ ಯಾರು ಗೆಲ್ಲುತ್ತಾರೆ ಎಂದು ಗೊತ್ತಾಗುತ್ತದೆ. ನಮಗೆ ಎಂದೂ ಸುಳ್ಳು ಹೇಳಿ ಅಭ್ಯಾಸ ಇಲ್ಲ, ನಿಜ ಹೇಳುವುದಾದರೆ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಛತ್ರದ ಬಳಿ ಗಿಣಿ ಶಾಸ್ತ್ರ ಕೇಳಿ ಎಂದು ವ್ಯಂಗ್ಯವಾಡಿದ್ದಾರೆ.

ಲಕ್ಷ್ಮಣ ಸವದಿ ತಮ್ಮನ್ನು ಬಿಜೆಪಿಗೆ ಆಹ್ವಾನಿಸಲಿಲ್ಲ.ತಾವೂ ಅವರನ್ನ ಕಾಂಗ್ರೆಸ್ಸಿಗೆ ಕರೆದಿಲ್ಲ. ಇಬ್ಬರೂ 25 ವರ್ಷದ ಹಳೆಯ ಸ್ನೇಹಿತರು. ಕಾರ್ಯಕ್ರಮಕ್ಕಾಗಿ ತುಮಕೂರಿಗೆ ಬಂದಿದ್ದರು ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ. ಲೂಟಿಕೋರರು ಹೋಗಲಿ ಎನ್ನುವುದು ಅವರ ಉದ್ದೇಶಕ್ಕೆ ತಮ್ಮ ಸಹಮತ ಇದೆ ಎಂದರು.

Leave a Comment